ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ 15 ಜನ ಸದಸ್ಯರಲ್ಲಿ ಒಮ್ಮತ ಮೂಡದ ಕಾರಣ ಮಂಗಳವಾರ ಚುನಾವಣೆ ನಡೆದು ಸಹಕಾರಿ ಧುರೀಣ ಎನ್ ಎಚ್ ದೇವಕುಮಾರ್ ರವರ ತಂಡ ಮೇಲುಗೈ ಸಾಧಿಸಿದೆ.
15 ಜನ ಕಾರ್ಯಕಾರಿ ಸಮಿತಿಯ ಸದಸ್ಯರಲ್ಲಿ ದೇವಕುಮಾರ್ ಬಣದ ಕೆ ಎಸ್ ಚಂದ್ರಶೇಖರ್ ಅಧ್ಯಕ್ಷರಾಗಿ ಆಯ್ಕೆಯಾದರೆ ಜಿಲ್ಲಾ ಪ್ರತಿನಿಧಿಯಾಗಿ ರಾಜ್ಯ ಕೃಷಿ ತಂತ್ರಜ್ಞರ ಸಂಸ್ಥೆಯ ನಿರ್ದೇಶಕರಾದ ಸಿ ಲೋಕೇಶ್ವರ ರವರು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಎನ್ ಎಚ್ ದೇವಕುಮಾರ್, ಉಪಾಧ್ಯಕ್ಷರಾಗಿ ಇ ಬಿ ಜಗದೀಶ್ವರಪ್ಪ , ಖಜಾಂಚಿಯಾಗಿ ಕೆ ಆರ್ ವಿಜಯಕುಮಾರ್ ರವರುಗಳು ಆಯ್ಕೆಯಾದರು .
ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಚ್. ಸಿ ಬಸವರಾಜಪ್ಪನವರ ತಂಡ ಸೋಲು ಕಂಡರು ಸಹಾಯಕ ಕೃಷಿ ನಿರ್ದೇಶಕರಾದ ರಮೇಶ್ ರವರು ಚುನಾವಣಾ ಅಧಿಕಾರಿಗಳಾಗಿದ್ದರು.
