
ಶಿವಮೊಗ್ಗ : ಖ್ಯಾತ ವೈದ್ಯರು ವಿಧಾನ ಪರಿಷತ್ತಿನ ಸದಸ್ಯರಾದ ಡಾಕ್ಟರ್ ಧನಂಜಯ್ ಸರ್ಜಿ ಅವರ ಹೆಸರಿನಲ್ಲಿ ಶಿವಮೊಗ್ಗದ ಇಬ್ಬರು ವೈದ್ಯರಿಗೆ ಹಾಗೂ ಎನ್ಇಎಸ್ ಸಂಸ್ಥೆಯ ಕಾರ್ಯದರ್ಶಿಯವರಿಗೆ ಸ್ವೀಟ್ ಬಾಕ್ಸ್ ಕಳ್ಸಿದ್ದು ಅದರಲ್ಲಿ ವಿಷ ಸೇರಿಸಲಾಗಿದೆ ಎನ್ನಲಾಗಿತ್ತು. ಇದರ ಬಗ್ಗೆ ಶಾಸಕರಾದ ಚನ್ನಬಸಪ್ಪ( ಚೆನ್ನಿ) ದತ್ತಾತ್ರಿ ಒಳಗೊಂಡಂತೆ ಡಾ. ಸರ್ಜಿ ಅವರು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜಿ ಕೆ ಅವರನ್ನು ಭೇಟಿ ಮಾಡಿ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಕೂಡಲೇ ಇದರ ಹಿಂದಿರುವ ವ್ಯಕ್ತಿಯನ್ನು ಬಂಧಿಸಬೇಕು ಎಂದು ಮನವಿ ಸಲ್ಲಿಸಿದರು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಎಸ್ಪಿ ಮಿಥುನ್ ಕುಮಾರ್ ಅವರು ಈ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ತನಿಖೆಗಾಗಿ ಕೋಟೆ ಠಾಣೆಯ ಇನ್ಸ್ಪೆಕ್ಟರ್ ಹರೀಶ್ ಪಟೇಲ್ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಿದ್ದರು ಹರೀಶ್ ಪಟೇಲ್ ಒಳಗೊಂಡ ತಂಡ ಈ ಪ್ರಕರಣದ ಹಿಂದಿದ್ದ ಸೌಹಾರ್ದ ಪಟೇಲ್ ಎನ್ನುವ ಯುವ ವಕೀಲ ಪದವೀಧರನನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.
ಅಷ್ಟಕ್ಕೂ ಸೌಹಾರ್ದ ಪಟೇಲ್ ಈ ರೀತಿ ವರ್ತಿಸಿದ್ದು ಏಕೆ..?!
ಸೌಹಾರ್ದ್ ಪಟೇಲ್ ಕಾಲೇಜಿನಲ್ಲಿ ಓದುವಾಗ ಒಂದು ಹುಡುಗಿಯನ್ನು ಪ್ರೀತಿಸಿದ್ದು ಆ ಸಮಯದಲ್ಲಿ ಇದನ್ನು ಗಮನಿಸಿದ ಎನ್ ಇ ಎಸ್ ಸಂಸ್ಥೆಯ ಸೆಕ್ರೆಟರಿ ನಾಗರಾಜ್ ಹಾಗೂ ಕೆಲವರು ಸೇರಿ ಬುದ್ಧಿವಾದ ಹೇಳಿ ಅವರ ತಂದೆ ತಾಯಿ ಹತ್ತಿರ ವಿಷಯ ಮಾತನಾಡಿ ಆ ಹುಡುಗಿ ತಂಟೆಗೆ ಹೋಗದಂತೆ ನೋಡಿಕೊಂಡಿದ್ದರು ಆ ನಂತರ ಹುಡುಗಿ ಬೇರೆ ಒಬ್ಬರ ಜೊತೆ ಮದುವೆಯಾದಾಗ ಈತನಿಗೆ ಇವರ ಮೇಲೆ ದ್ವೇಷ ಶುರುವಾಯಿತು. ಡಾಕ್ಟರ್ ಸರ್ಜಿ ಅವರ ಸಾಮಾಜಿಕ ಜಾಲತಾಣದ ಅಭಿಮಾನಿಯಾದ ಸೌಹಾರ್ದ ಪಟೇಲ್ ಸರ್ಜಿ ಅವರ ಮೇಲೆ ವಿಶೇಷ ಗೌರವ ಇಟ್ಟುಕೊಂಡಿದ್ದ ಅವರನ್ನು ಎಲ್ಲಾ ಹಂತದಲ್ಲೂ ಫಾಲೋ ಮಾಡುತ್ತಿದ್ದ ಅವರು ಮಾಡುತ್ತಿದ್ದ ಸಾಮಾಜಿಕ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದ ನಂತರ ಕುವೆಂಪು ರಂಗಮಂದಿರದಲ್ಲಿ ಎನ್ ಇ ಎಸ್ ಕಾಲೇಜು ಸೆಕ್ರೆಟರಿ ನಾಗರಾಜ್ ಹಾಗೂ ಡಾ/ ಸರ್ಜಿ ಅವರು ಒಂದೇ ವೇದಿಕೆಯಲ್ಲಿ ಭಾಷಣ ಮಾಡುವುದನ್ನು ಕೇಳಿಸಿಕೊಂಡು ಇವರು ಭಾಷಣ ಹೀಗೆ ಮಾಡುತ್ತಾರೆ ಆದರೆ ಅದನ್ನು ಕಾರ್ಯ ರೂಪದಲ್ಲಿ ತರುವುದಿಲ್ಲ ಎಂದು ಮನನೊಂದು ಈತನಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ನೀಡಿದ ಮಾತ್ರೆಗಳನ್ನು ಆ ಸ್ವೀಟ್ ಗೆ ಮಿಕ್ಸ್ ಮಾಡಿ ಡಾಕ್ಟರ್ ಸರ್ಜಿ ಅವರ ಹೆಸರಿನಲ್ಲಿ ಈ ಸ್ವೀಟ್ ಅನ್ನು ಕಳುಹಿಸಿದರೆ ಇಬ್ಬರು ವೈದ್ಯರು ಹಾಗೂ ಸೆಕ್ರೆಟರಿ ತಿನ್ನುತ್ತಾರೆ ಎಂದು ನಂಬಿಕೊಂಡು ಅದನ್ನು ಕಳುಹಿಸಿದ್ದಾನೆ ಆದರೆ ನಿಜವಾಗಲೂ ಅದರಲ್ಲಿ ಮಾತ್ರೆ ಮಿಕ್ಸ್ ಮಾಡಿದ್ದಾನ.? ಅಥವಾ ಬೇರೆ ಏನಾದರೂ ಹಾಕಿದ್ದಾನ..? ಎನ್ನುವುದನ್ನು ಪರಿಶೀಲನೆ ಮಾಡುತ್ತಿದ್ದೇವೆ ಎನ್ನುತ್ತಾರೆ ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜಿ ಕೆ .
ಸೌಹಾರ್ದ ಪಟೇಲ್ ವಿರುದ್ಧ ಬಿತ್ತು ಭಾರತೀಯ ನ್ಯಾಯ ಸಂಹಿತೆ 123 ಕೇಸ್..!
ಮೂಲತಃ ಶಿವಮೊಗ್ಗದ ವಾಸಿಯಾಗಿದ್ದು ವೈಯಕ್ತಿಕ ದ್ವೇಷದಿಂದ ಈ ಕೃತ್ಯ ಮಾಡಿರುವ ಸೌಹಾರ್ದ ಪಟೇಲ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 123 ರ ಅಡಿಯಲ್ಲಿ ಕೇಸ್ ದಾಖಲು ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಜೈಲಿಗೆ ಕಳಿಸಲಾಗಿದೆ. ಆರೋಪ ಸಾಬೀತಾದರೆ ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
ಪ್ರಕರಣದ ಬಗ್ಗೆ ಡಾ/ ಸರ್ಜಿ ಏನಂತಾರೆ..?!
ಈತನಿಗೂ ನನಗೂ ವೈಯಕ್ತಿಕವಾಗಿ ಯಾವುದೇ ರೀತಿಯ ಸಂಬಂಧವಿಲ್ಲ ಆದರೆ ಈತ ನಾವು ಮಾಡುವ ಸಾಮಾಜಿಕ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದ ಎನ್ನುವುದು ನಂತರ ಗೊತ್ತಾಯಿತು ನಾನು ಹೋದ ವರ್ಷ ಸಂಕ್ರಾಂತಿಗೆ 50,000 ಸಾವಿರ ಎಳ್ಳು ಪ್ಯಾಕೆಟ್ ಗಳನ್ನು ಜನರಿಗೆ ಹಂಚಿದೆ ಈ ವರ್ಷವೂ ಕೊಡುವ ಆಲೋಚನೆ ಇದೆ ಆದರೆ ಈ ರೀತಿ ಪ್ರಕರಣಗಳು ನಡೆದಾಗ ಕೊಡಬೇಕಾ..? ಬೇಡವಾ ..?ಎನ್ನುವ ಅನುಮಾನ ಹುಟ್ಟುತ್ತದೆ. ಅಭಿಮಾನವನ್ನು ಈ ರೀತಿ ವ್ಯಕ್ತಪಡಿಸುವುದು ಸರಿಯಲ್ಲ ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ ಪೊಲೀಸರ ಕಾರ್ಯ ಶ್ಲಾಘನೀಯ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ.
ರಘುರಾಜ್ ಹೆಚ್.ಕೆ..9449553305…