ನಗರದ ಕೋಟೆ ಗಂಗೂರಿನ ಸುಮಾರು 34 ವರ್ಷ ವಯಸ್ಸಿನ ರವಿ ಎಂಬ ಡ್ರೈವರ್ ಕೆಲಸ ಮಾಡುವ ವ್ಯಕ್ತಿ ತನ್ನ ಸ್ನೇಹಿತ ಅಡುಗೆ ಕೆಲಸ ಮಾಡುವ ಅರುಣ್ ಎಂಬ ವ್ಯಕ್ತಿ ತನ್ನ ಹೆಂಡತಿಗೆ ನಿರಂತರವಾಗಿ ಫೋನ್ ಮಾಡುವುದು ಮೆಸೇಜ್ ಮಾಡುವುದು ಮಾಡುತ್ತಿರುವುದನ್ನು ನೋಡಿ ಏನಿದು ವಿಷಯ ನಿನ್ನ ಹತ್ತಿರ ಮಾತನಾಡಬೇಕು ಬಾ ಎಂದು ರವಿ ಅರುಣನನ್ನು ಕರೆಯುತ್ತಾನೆ.
ಶರಾವತಿ ನಗರದ ಹತ್ತಿರ ಬಂದ ಅರುಣ್ ಬರುವಾಗಲೇ ಖಾರದಪುಡಿ, ಚಾಕು, ತೆಗೆದುಕೊಂಡು ಬಂದಿರುತ್ತಾನೆ ರವಿ ಮತ್ತು ಅರುಣ್ ನಡುವೆ ಮಾತಿನ ಚಕಮಕಿ ನಡೆಯುತ್ತದೆ ಇದು ಅತಿಯಾದಾಗ ಬೈಕಿನಲ್ಲಿ ಕುಳಿತಿದ್ದ ರವಿ ಮೇಲೆ ಅಡುಗೆ ಭಟ್ಟ ಅರುಣ್ ರವಿ ಕಣ್ಣಿಗೆ ಖಾರದಪುಡಿ ಹಾಕಿ, ಚಾಕುವಿನಿಂದ ಭುಜ ಪಕ್ಕೆ ಎಲುಬುಗಳಿಗೆ ಚುಚ್ಚುತ್ತಾನೆ ನಂತರ ಓಡಿ ಹೋಗುತ್ತಾನೆ.
ಅಲ್ಲಿಗೆ ಬಂದ ರವಿ ಸ್ನೇಹಿತರು ರವಿಯನ್ನು ನಗರದ ಮೇಗನ್ ಆಸ್ಪತ್ರೆಗೆ ಸೇರಿಸುತ್ತಾರೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಆರೋಪಿ ಅರುಣ್ ತಲೆ ಮೆರೆಸಿಕೊಂಡಿದ್ದು ಪೊಲೀಸರು ಹುಡುಕಾಟದಲ್ಲಿದ್ದಾರೆ..ಪೊಲೀಸರ ತನಿಖೆಯಿಂದ ಇನ್ನಷ್ಟು ಮಾಹಿತಿ ಹೊರಬರಬೇಕಾಗಿದೆ….
ರಘುರಾಜ್ ಹೆಚ್ ಕೆ…9449553305…