ದಾವಣಗೆರೆ : ಜಿಲ್ಲೆಯ ನ್ಯಾಮತಿ ತಾಲೂಕಿನ ಎಸ್ ಬಿ ಐ ಬ್ಯಾಂಕಿನಲ್ಲಿ ಕಳೆದ ಮೂರು ತಿಂಗಳ ಹಿಂದೆ ಬರೋಬ್ಬರಿ 13 ಕೋಟಿ ಹಣ ಹಾಗೂ 17 ಕೆಜಿ ಚಿನ್ನವನ್ನು ಕದ್ದಿದ್ದ ಪ್ರಕರಣ ಇಡೀ ರಾಜ್ಯಾದ್ಯಂತ ಸಂಚಲನವನ್ನು ಉಂಟು ಮಾಡಿತ್ತು ಇಡೀ ಪೊಲೀಸ್ ವ್ಯವಸ್ಥೆಗೆ ಇದೊಂದು ಸವಾಲಾಗಿತ್ತು ಅದರಲ್ಲೂ ಈ ಪ್ರಕರಣದಲ್ಲಿ ಆರೋಪಿಗಳು ಬಹಳ ವ್ಯವಸ್ಥಿತವಾಗಿ ಸಂಚು ರೂಪಿಸಿ ಕಳ್ಳತನ ವೇಸಿಗಿದ್ದರು ದಾವಣಗೆರೆ ಪೊಲೀಸ್ ಇಲಾಖೆ ಈ ಪ್ರಕರಣದ ಹಿಂದೆ ಬಿದ್ದಿತ್ತು .
ಯುಪಿ ಮೂಲದ ತಂಡದಿಂದ ದರೋಡೆ :
ಈ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರುಗಳು ಯುಪಿ ಮೂಲದ ವ್ಯಕ್ತಿಗಳಾಗಿದ್ದು ಏಳು ಜನರ ತಂಡ ಈ ಪ್ರಕರಣದಲ್ಲಿ ಭಾಗಿಯಾಗಿದೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ಇಂದು ಮತ್ತೆ ದರೋಡೆ ಮಾಡಲು ಬಂದ ಅದೇ ತಂಡವನ್ನು ಬೆನ್ನಟ್ಟಿದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ ದರೋಡೆಕೋರರಿಗೆ ಪೊಲೀಸರು ಗುಂಡೇಟು ಹಾರಿಸಿದ್ದು ಏಳು ಜನ ಆರೋಪಿಗಳಲ್ಲಿ ಮೂವರು ತಪ್ಪಿಸಿಕೊಂಡಿದ್ದು ನಾಲ್ಕು ಜನ ಸಿಕ್ಕಿ ಬಿದ್ದಿದ್ದಾರೆ ಅದರಲ್ಲಿ ಒಬ್ಬನ ಕಾಲಿಗೆ ಗುಂಡೇಟು ಬಿದ್ದಿದೆ ಆತನನ್ನು ಪ್ರಾಥಮಿಕ ಚಿಕಿತ್ಸೆಗೆ ನ್ಯಾಮತಿಯಲ್ಲಿ ಸೇರಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಥಳಕ್ಕೆ ದಾವಣಗೆರೆಯ ಎಸ್ಪಿ ಭೇಟಿ ನೀಡಿದ್ದು ಇಲಾಖೆಯ ತನಿಖೆಯಿಂದ ಇನ್ನಷ್ಟು ಮಾಹಿತಿ ಹೊರಬರಬೇಕಾಗಿದೆ….
ರಘುರಾಜ್ ಹೆಚ್.ಕೆ..9449553305…