ದಾವಣಗೆರೆ : ಜಿಲ್ಲೆಯ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ನಿರಂತರವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಇದರಿಂದ ಬೇಸತ್ತಿರುವ ಸ್ಥಳೀಯರು ಈಗ ಪ್ರತಿಭಟನೆಗೆ ಮುಂದಾಗಿದ್ದಾರೆ.

ನಿರಂತರವಾಗಿ ಜಿಲೆಟಿನ್ ಬಳಸಿ ಕಲ್ಲು ಕೋರೆಗಳನ್ನು ಸ್ಪೋಟಿಸಿ ಸ್ಥಳೀಯ ಆಕ್ರೋಶಕ್ಕೆ ಕಾರಣರಾಗಿದ್ದಾರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳೀಯರು ಎಷ್ಟೇ ಮನವಿ ನೀಡಿದ್ದರು ತಲೆಕೆಡಿಸಿಕೊಳ್ಳುತ್ತಿಲ್ಲ ಇವರು ನೀಡುವ ಕಾಸಿಗೆ ಕೈಯೊಡ್ಡಿ ಸ್ಥಳಕ್ಕೂ ಬರುತ್ತಿಲ್ಲ ಇವರ ದಿವ್ಯ ನಿರ್ಲಕ್ಷದಿಂದ ಬೇಸತ್ತಿರುವ ಸ್ಥಳೀಯರು ತಾವೇ ಪ್ರತಿಭಟನೆ ನಡೆಸಿ ಕೆಲಸವನ್ನು ನಿಲ್ಲಿಸಿದ್ದಾರೆ.

ಇಲ್ಲಿ ಕೋರೆ ನಡೆಸುತ್ತಿರುವ ಮಾಲೀಕರಾಗಲಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಾಗಲಿ ಇಷ್ಟೆಲ್ಲಾ ಪ್ರತಿಭಟನೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರು ಇತ್ತ ಕಡೆ ಗಮನಹರಿಸುತ್ತಿಲ್ಲ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ರಶ್ಮಿ ಅವರು ಪತ್ರಿಕೆ ಕರೆ ಮಾಡಿದರೆ ಇಂತಹ ಅಕ್ರಮಗಳ ಬಗ್ಗೆ ಮಾಹಿತಿ ನೀಡಲು ಫೋನ್ ಎತ್ತುತ್ತಿಲ್ಲ..?! ದೂರು ನೀಡುವುದು ಯಾರಿಗೆ..?! ದಾವಣಗೆರೆಯ ದಕ್ಷ ಜಿಲ್ಲಾಧಿಕಾರಿಗಳೇ ಕೂಡಲೇ ಇತ್ತ ಗಮನ ಹರಿಸಿ…
ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ವಿಜ್ಞಾನಿ ರಶ್ಮಿ ಅವರೇ ಜಿಲೆಟಿನ್ ಇಟ್ಟು ಸ್ಪೋಟಕ ಸಂಬಂಧಿಸಿದಂತೆ ಸ್ಪೋಟಕದ ವಿಷಯ ಪೊಲೀಸ್ ಇಲಾಖೆಗೆ ಸಂಬಂಧಪಟ್ಟದು ಆಗಿರುತ್ತದೆ ಡಿಜೆ ಎಂ ಎಸ್ ಅನುಮತಿ ಪಡೆದು ಸ್ಪೋಟಕ ನಡೆಸಬೇಕು ಸಂಬಂಧಪಟ್ಟ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಜಂಟಿ ಕಾರ್ಯಚರಣೆ ನಡೆಸಿ ಸ್ಥಳೀಯರ ಮನವಿಗೆ ಸ್ಪಂದಿಸಿ ಜಿಲ್ಲೆಯಲ್ಲಿ ನಡೆಯುತ್ತಿರುವ ಇನ್ನೊಂದು ಸರ್ಕಾರಿ ಮರಳು ಕೋರೆಯಲ್ಲಿ ನಡೆಯುತ್ತಿರುವ ಅಕ್ರಮದಲ್ಲಿ ನಿಮ್ಮ ಪಾಲೆಷ್ಟು..?! ಇದರ ಬಗ್ಗೆ ಈಗಾಗಲೇ ತಮ್ಮಲ್ಲಿ ಮಾಹಿತಿ ಕೇಳಿ ಆಗಿದೆ ಮಾಹಿತಿ ಕೊಡಿ.. ಇಲ್ಲವಾದಲ್ಲಿ ನಿಮ್ಮ ಮೇಲೆ ಅನುಮಾನ ಬರುತ್ತದೆ… ಹಾಗೆ ಆ ಕೋರೆ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಿ… ಇಲ್ಲವಾದಲ್ಲಿ ನೇರವಾಗಿ ಜಿಲ್ಲಾಧಿಕಾರಿಗಳಿಗೆ ಹಾಗೂ ಲೋಕಾಯುಕ್ತರಿಗೆ ದೂರು ನೀಡಲಾಗುವುದು…
ರಘುರಾಜ್ ಹೆಚ್.ಕೆ..9449553305…