ಮಹಾನಗರ ಪಾಲಿಕೆಗಳಿಗೆ ಚುನಾವಣೆಗೆ ನಿಲ್ಲಲು ಸಜ್ಜಾಗುತ್ತಿರುವ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದ್ದು ಈ ವರ್ಷದಲ್ಲಿ 5 ಜಿಲ್ಲೆಗಳ ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿಎಸ್ ಸಂಗ್ರೇಶಿ ಮಹತ್ವದ ಮಾಹಿತಿ ನೀಡಿದ್ದಾರೆ.
ಮೈಸೂರು, ಶಿವಮೊಗ್ಗ, ದಾವಣಗೆರೆ, ತುಮಕೂರು ,ಹಾಗೂ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ಫಿಕ್ಸ್…!
ಸರ್ಕಾರ ಮೀಸಲಾತಿ ಪಟ್ಟಿ ಕೊಡದಿದ್ದರೂ ಚುನಾವಣೆ ನಡೆಸುತ್ತೇವೆ. ಹೈಕೋರ್ಟ್ ಗೆ ಹೋಗಿ ಹಳೆ ಮೀಸಲಾತಿಯಂತೆ ಚುನಾವಣೆ ಮಾಡುತ್ತೆವೆ. ಆದಷ್ಟು ಬೇಗ ಮಹಾನಗರ ಪಾಲಿಕೆಗಳ ಮೀಸಲಾತಿ ಕೊಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಐದು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಸಿದ್ಧವಾಗಿದೆ.
ಯಾವ ವರ್ಗಕ್ಕೂ ಅನ್ಯಾಯವಾಗದಂತೆ ಚುನಾವಣೆ ನಡೆಸುತ್ತೇವೆ ಸರ್ಕಾರದ ಆಕಾಂಕ್ಷೆ ಕೂಡ ಅದೇ ಆಗಿದೆ ಎಂದು ಹೇಳಿದ್ದಾರೆ ಈ ಮೂಲಕ ಬಹಳ ದಿನಗಳಿಂದ ಕಾಯುತ್ತಿದ್ದ ಚುನಾವಣೆ ಸಮೀಪದಲ್ಲಿ ಬರುವ ಸಾಧ್ಯತೆ ಇದೆ.
ರಘುರಾಜ್ ಹೆಚ್.ಕೆ..9449553305…