ಶಿವಮೊಗ್ಗ: ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌಧರಿಯವರ ನೇತೃತ್ವದಲ್ಲಿ ಇಂದು ಮೆಗ್ಗಾನ್ ಆಸ್ಪತ್ರೆಯ ಔಷಧ ದಾಸ್ತಾನು ಮೇಲೆ ಧಿಡೀರ್ ದಾಳಿ ನಡೆಸಲಾಗಿದ್ದು. ಈ ದಾಳಿಯಲ್ಲಿ 3.5 ಲಕ್ಷ ಔಷಧಿಗಳು ಎಂ ಆರ್ ಪಿ ದರ ಹೊಂದಿರುವುದು ಪತ್ತೆಯಾಗಿದ್ದು, ಇವುಗಳನ್ನ ವಶಕ್ಕೆ ಪಡೆದಿರುವ ಲೋಕಾಯುಕ್ತರು ತನಿಖೆ ಮುಂದುವರಿಸಿದ್ದಾರೆ.
ಮೆಗ್ಗಾನ್ ನ ಔಷಧ ದಾಸ್ತಾನುವಿನ್ನಲ್ಲಿದ್ದ ಫಾರ್ಮಸಿಸ್ಟ್ ಗೋಪಿನಾಥ ಎಂಬುವರನ್ನು ಕೆಲ ಔಷಧಗಳ ಬಗ್ಗೆ ಲೋಕಾಯುಕ್ತ ವಿಚಾರಣೆ ನಡೆಸಿದ ಸಂದರ್ಭದಲ್ಲಿ. ಲೋಕಾಯುಕ್ತ ದವರ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡದ ಗೋಪಿನಾಥ್ ಔಷಧಿಗಳಿಗೆ ಯಾವುದೇ ದಾಖಲಾತಿ ಗಳನ್ನು ನೀಡಿಲ್ಲ ಹಾಗೆ ಔಷಧ ಮೇಲೆ Not for sale ಎಂದು ಇರದೇ ಇರುವುದು ಹಲವು ಅನುಮಾನಗಳಿಗೆ ಎಡ ಮಾಡಿಕೊಟ್ಟಿದೆ.

ಎಲ್ಲಾ ಔಷಧಿಗಳ ಬಗ್ಗೆ ಎಂಆರ್ ಪಿ ದರ ನಮೂದಿಸಿರುವುದು ಪತ್ತೆಯಾಗಿದ್ದು. ಇದರ ಬಗ್ಗೆ ಸಮಂಜಸ ಉತ್ತರ ನೀಡದ ಕಾರಣ ಲೋಕಾಯುಕ್ತ 3.5 ಲಕ್ಷ ರೂ. ಮೌಲ್ಯದ ಔಷಧಗಳನ್ನು ವಶಕ್ಕೆ ಪಡೆದಿದ್ದಾರೆ.
NOT FOR SALE ಎಂದು ನಮೂದಿಸದೇರುವುದು ಹಾಗೆ ದಾಖಲಾತಿ ಇಲ್ಲದೇ ಔಷಧಿಗಳನ್ನು ಇಟ್ಟಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು ಲೋಕಾಯುಕ್ತರು ತನಿಖೆ ಮುಂದುವರಿಸಿದ್ದಾರೆ.