Home ಶಿವಮೊಗ್ಗಮಕ್ಕಳಲ್ಲಿ ಸಾಹಸ ಪ್ರವೃತಿ ಬೆಳೆಸಬೇಕು: ಅ.ನ.ವಿಜಯೇಂದ್ರರಾವ್..!

ಮಕ್ಕಳಲ್ಲಿ ಸಾಹಸ ಪ್ರವೃತಿ ಬೆಳೆಸಬೇಕು: ಅ.ನ.ವಿಜಯೇಂದ್ರರಾವ್..!

by EDITOR NEWS WARRIORS
0 comments

ವಿದ್ಯಾಭ್ಯಾಸದ ಜೊತೆಗೆ ಸಾಹಾಸ  ಪ್ರವೃತಿ ಅಭ್ಯಾಸ ಮಾಡಿಸಬೇಕು. ಆಗ ಮಾತ್ರ ಮುಂದಿನ ಪ್ರಜೆಗಳು ಯಾವುದಕ್ಕು ಅಂಜದೆ ತಮ್ಮ ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂದು ಯೂತ್ ಹಾಸ್ಟೇಲ್ಸ್ ತರುಣೋದಯ ಘಟಕ ಮಥುರಾ ಪ್ಯಾರಡೈಸ್ ನಲ್ಲಿ ಆಯೋಜಿಲಾಗಿದ್ದ ಸಂಸ್ಥಾಪಕರ ದಿನದ ಕಾರ್ಯಕ್ರಮ ಉದ್ಘಾಟಿಸಿ ಅ.ನ.ವಿಜಯೇಂದ್ರ ಮಾತನಾಡಿದರು
ಶತಮಾನದ ಹಿಂದೆಯೆ ಜರ್ಮನಿಯ ಅದ್ಯಾಪಕ ರಿಚರ್ಡ್ ಸ್ಕಿರ್ಮನ್ ಬಡ ಸರ್ಕಾರಿ ಶಾಲಾಮಕ್ಕಳಿಗೆ ಚಾರಣ ಏರ್ಪಡಿಸಿ ಈ ಸಹಾಸ ಪ್ರವೃತಿ ಬೆಳೆಸಲು ಪ್ರಾರಂಭಿಸಿದ. ರಜಾದಿನಗಳಲ್ಲಿ ರಾತ್ರಿ ಶಾಲೆಯಲ್ಲಿ ವಾಸ್ತವ್ಯ ಮಾಡಿ, ಕಡಿವೆ ವೆಚ್ಛದಲ್ಲಿ ಕಾರ್ಯಕ್ರಮ ರೂಪಿಸಲು ಪ್ರಾರಂಭಿಸಿದರು. ಇದನ್ನು ಇತರೆ ಪ್ರದೇಶಕ್ಕು ಹರಡುವಂತೆ ಮಾಡಿ, ಯೂತ್ ಹಾಸ್ಟೆಲ್ಸ್ ಹೆಸರಿನಡಿ ಪ್ರಾರಂಭಿಸಿದಿದರು. ಇದನ್ನು ಅರಿತ ಇತರ ಅಧ್ಯಾಪಕರು ತಾವು ಅಳವಡಿಸಿಕೊಂಡು, ದೇಶ, ವಿದೇಶಕ್ಕು ಹರಡಿ ಇಂದು ವಿಶ್ವಾಧ್ಯಂತ ಯಶಸ್ವಿಯಗಿ ಕಾರ್ಯಕ್ರಮ ಜರುಗುತ್ತಿದೆ ಎಂದರು.
ಛೇರ್ಮನ್ ಎಸ್.ಎಸ್.ವಾಗೇಶ್ ಮಾತನಾಡಿ, ಬಡವರ ಆಶಾಕಿರಣದಂತೆ ಇಂದು ಯೂತ್ ಹಾಸ್ಟೇಲ್ಸ್ ಕಾರ್ಯ ನಿರ್ವಹಿಸುತ್ತಿದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಸ್ಥಳಿಯ ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗುತ್ತಿದೆ. ನಗರದ ಸಾವಿರಾರು ಜನರು ನಮ್ಮ ಘಟಕದ ಮೂಲಕ ರಾಷ್ಟ್ರೀಯ ಹಿಮಾಲಯ ಚಾರಣಗಳಲ್ಲಿ ಭಾಗವಹಿಸಿದ್ದಾರೆ. ಮೂರು ಸಾವಿರಕ್ಕೆ ಅಜೀವ ಸದಸ್ಯತ್ವ ನೀಡಲಾಗುತ್ತದೆ, ಇದರ ಸದುಪಯೋಗ ಪಡಿಸಿಕೊಳ್ಳುತೆ ಕೋರಿದರು.
ಅಧ್ಯಕ್ಷತೆ ವಹಿಸಿದ್ದ ಎನ್. ಗೋಪಿನಾಥ್ ಮಾತನಾಡಿ 1909ರಲ್ಲಿ ಜರ್ಮನಿಯಲ್ಲಿ ಪ್ರಾರಂಭವಾದ ಯೂತ್ ಹಾಸ್ಟೇಲ್ಸ್ ಇಂದು ವಿಶ್ವದ ಹಲವಾರು ದೇಶಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತ, ಯುವಕರಿಗೆ ಸಹಾಸ ಪ್ರವೃತ್ತಿ ಹೆಚ್ಚಿಸಿದೆ. ಇದನ್ನು ಅರಿತ ಮಹಾರಾಜರು ಭಾರತದಲ್ಲಿಯೇ ಪ್ರಥಮ ಭಾರಿಗೆ, ಸ್ವಾತಂತ್ರ್ಯಪೂರ್ವದಲ್ಲಿಯೇ ಮೈಸೂರಿನಲ್ಲಿ ಪ್ರಾರಂಭಿಸಿದರು. ಸ್ವಾತಂತ್ರ್ಯದ ನಂತರ ಕೇಂದ್ರ ಕಛೇರಿ ದೆಹಲಿಗೆ ವರ್ಗಗೊಂಡು, ಇಂದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಪ್ರಕೃತಿ ಮಂಚಾಲೆ ಪ್ರಾರ್ಥಿಸಿದರು, ಎಮ್. ಪಿ.ನಾಗರಾಜ್ ಸ್ವಾಗತಿಸಿದರು, ಜಿ. ವಿಜಯಕುಮಾರ್ ವಂದಿಸಿದರು. ರಾಜು, ಎಮ್.ನಾಗರಾಜ್, ರವೀಂದ್ರ, ಸುಮಾರಾಣಿ, ಮಲ್ಲಿಕಾರ್ಜುನ್ ಮುಂತಾದವರು ಇದ್ದರು.

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...