
ಇದು ವೈಲ್ಡ್ ಲೈಫ್ ರೇಂಜ್ ನಲ್ಲಿ ನಡೆಯುತ್ತಿರುವ ಅನಿಮಲ್ ಹಂಟಿಂಗ್ ಸ್ಟೋರಿ ಅರಣ್ಯ ರಕ್ಷಕರ ಕರಿನೆರಳಿನಲ್ಲಿ ಕಳ್ಳ ಬೇಟೆಗಾರರ ಕಳ್ಳ ಹೆಜ್ಜೆಯ ಸ್ಟೋರಿ..
ಅಭಯಾರಣ್ಯದಲ್ಲಿ ಕಳ್ಳ ಬೇಟೆಗಾರರು ಸಕ್ರಿಯವಾಗಿದ್ದು ಆಹಾರ ಮೂಲ ಹುಡುಕಿ ಬರುವ ಕಾಡು ಪ್ರಾಣಿಗಳಿಗೆ ಕಳ್ಳ ಬೇಟೆಗಾರರಿಂದ ಸಂಚಕಾರ ಅಭಯಾರಣ್ಯದಲ್ಲಿ ಜಿಂಕೆಗಳು ಮತ್ತು ಕಾಡು ಹಂದಿ, ಕಾಡು ಕೋಳಿ, ಮೊಲಗಳ ಆಕ್ರಮ ಬೇಟೆ ನಡೆಯುತ್ತಿದೆ.
ಜಿಂಕೆ ಬೇಟೆಯಾಡಿ ಮಾಂಸ, ಚರ್ಮ, ಕೊಂಬುಗಳ ಮಾರಾಟ ಮಾಡುವ ಜಾಲ ವ್ಯಾಪಕ ವಾಗಿದೆ.
ವನ್ಯಜೀವಿ ಬೇಟೆಗೆ ಅಕ್ರಮವಾಗಿ ನಾಡ ಬಾಂಬು ಮತ್ತು ಕಬ್ಬಿಣದ ತಂತಿಯ ಉರುಳು ಗಳ ಬಳಕೆ ಮಾಡುತ್ತಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ನಾಡ ಮದ್ದುಗುಂಡು ಮತ್ತು ಉರುಳು ಬಳಸಿದ್ದಕ್ಕೆ ಸಾಕ್ಷಿ ದೊರೆತಿದೆ.
ಕಾರ್ಗತ್ತಲು ರಾತ್ರಿಯಲ್ಲಿ ಬೆಳಕು ಹರಿಯುವ ಮುನ್ನವೇ ನಡೆಯುವ ಕಳ್ಳ ಬೇಟೆಯ ಜಾಲದ ಬಗ್ಗೆ ಸಾಕ್ಷಿ ದೊರೆತಿದೆ.
ಭದ್ರಾ ಅಭಯಾರಣ್ಯ ವ್ಯಾಪ್ತಿಯ ಉಂಬ್ಳೆಬೈಲು ಅರಣ್ಯ ವಿಭಾಗದ ಲಕ್ಕಿನಕೊಪ್ಪ ಅರಣ್ಯದಲ್ಲಿ ಅಕ್ರಮ ಕಳ್ಳ ಬೇಟೆ ಜಾಲ ಪತ್ತೆಯಾಗಿದ್ದು ಅಭಯಾರಣ್ಯದಲ್ಲಿ ಜಿಂಕೆಗಳು, ಕಾಡು ಹಂದಿಗಳ ಮಾರಣ ಹೋಮ.ಕಳ್ಳ ಬೇಟೆಗೆ ಬಳಸುವ ಅರಣ್ಯದಲ್ಲಿ ನಾಡ ಬಾಂಬು, ಕಬ್ಬಿಣದ ತಂತಿಯ ಉರುಳು, ಜಿಂಕೆಯ ಮೂಳೆ, ಚರ್ಮ ಎಲ್ಲವೂ ಪತ್ತೆಯಾಗಿದ್ದು ಎಲ್ಲೆಂದರಲ್ಲಿ ಬಿದ್ದಿವೆ ವನ್ಯಜೀವಿ ಜಿಂಕೆಯ ಅಸ್ತಿಪಂಜರಗಳ ಅವಶೇಷಗಳು ಸಿಕ್ಕಿವೆ.
ಆದರೆ ಅಕ್ರಮ ಕಳ್ಳ ಬೇಟೆ ಜಾಲ ತಡೆಯಲು ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ವಿಫಲರಾಗಿದ್ದಾರೆ .
ಅರಣ್ಯ ಇಲಾಖೆಯ ವೈಫಲ್ಯಕ್ಕೆ ಕಳ್ಳ ಬೇಟೆಗಾರರ ದಾಳಿಗೆ ಸಿಲುಕಿ ಜಿಂಕೆ, ಕಾಡು ಹಂದಿ ಮೊಲ, ಕಾಡು ಕೋಳಿಗಳು ಸಾಯುತ್ತಿವೆ.
ಕಳ್ಳ ಭೇಟಿಯ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ ಯಾಕೆ..ಕಳ್ಳ ಬೇಟೆಗಾರರ ಜೊತೆ ಶಾಮೀಲಾದರೇ ಅರಣ್ಯ ಇಲಾಖೆಯ ಸಿಬ್ಬಂದಿಗಳು.
ಕಾಡುಪ್ರಾಣಿಗಳ ಹತ್ಯೆ ಮತ್ತು ಸಾಗುವಾನಿ ನಾಟಾ ಅಕ್ರಮ ಕಳ್ಳ ಸಾಗಾಣಿಕೆ ಬಗ್ಗೆ ಸ್ಥಳೀಯರಿಂದ ಅರಣ್ಯ ಇಲಾಖೆಗೆ ಸ್ಥಳೀಯರು ನಿಂರತರ ಮಾಹಿತಿಯನ್ನು ನೀಡುತ್ತಿದ್ದಾರೆ ಆದರೆ ಕಳ್ಳ ಬೇಟೆಗಾರರಿಗೆ ಅಧಿಕಾರಿಗಳು ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದಾರೆ.
ಅರಣ್ಯ ರಕ್ಷಕರೆ ಭಕ್ಷಕರಾದರೆ ವನ್ಯಜೀವಿಗಳನ್ನು ಕಾಯುವವರು ಯಾರು..!?ಅರಣ್ಯದಲ್ಲಿ ಕಳ್ಳ ಬೇಟೆ ಹೇಗೆ ನಡೆಯುತ್ತೆ ಗೊತ್ತಾ..!!
ಜಿಂಕೆಗಳು ಸಂಚರಿಸುವ ಜಾಗಗಳಲ್ಲಿ ಉರುಳು ಮತ್ತದರ ಮುಂದೆ ಆಹಾರ, ಆಹಾರದಲ್ಲಿ ನಾಡ ಬಾಂಬ್ ಇಟ್ಟು ಸ್ಕೆಚ್ ಹಾಕುತ್ತಾರೆ.ಆಹಾರದ ಜೊತೆ ನಾಡ ಬಾಂಬ್ ಇರುವ ಉಂಡೆ ತಿನ್ನಲು ಮುಂದಾಗುತ್ತಿದ್ದಂತೆ ಸಿಡಿದು ಉರುಳು ಬಿಗಿದು ಸಾವು ಗ್ಯಾರಂಟಿ .ಕಾಡಂಚಿನ ಗ್ರಾಮಗಳ ಜಾನುವಾರುಗಳು ಅರಣ್ಯದಿಂದ ಹೊರ ಬರುತ್ತಿದ್ದಂತೆ ಕಳ್ಳ ಬೇಟೆಗಾರರ ಸ್ಕೆಚ್ ರೆಡಿಯಾಗುತ್ತದೆ.
ಸತ್ತ ಜಿಂಕೆಯ ಮಾಂಸ ಕೊಂಬು ಚರ್ಮ ಬೇರ್ಪಡಿಸಿ ಮಾರಾಟ ಮಾಡುವ ಕಳ್ಳರ ಜಾಲ..!!
ಕಳ್ಳ ಬೇಟೆ ಜಾಲ ದಟ್ಟಾರಣ್ಯದಲ್ಲಿ ಕಳ್ಳ ಬೇಟ ದಟ್ಟಾರಣ್ಯದಲ್ಲಿ ಸಂಚರಿಸಿದ ವೇಳೆ ಕಬ್ಬಿಣದ ತಂತಿಯ ಉರುಳು, ಜಿಂಕೆಯ ಅಸ್ತಿ ಪಂಜರ ಪತ್ತೆಯಾಗಿದೆ.

