ತೀರ್ಥಹಳ್ಳಿ : ಪಟ್ಟಣದ ವ್ಯಾಪ್ತಿಯ ಅಪಾರ್ಟ್ಮೆಂಟ್ ಒಂದರಲ್ಲಿ ದಂಪತಿಗಳು ವಾಸವಾಗಿದ್ದರು ಆದರೆ ಗಂಡ ಹೆಂಡತಿ ರಾತ್ರಿ ಮಲಗಿದ್ದಾಗ ಮಧ್ಯರಾತ್ರಿ 12:30ಕ್ಕೆ ಒಬ್ಬ ಅಪರಿಚಿತ ವ್ಯಕ್ತಿ ಮಂಚದ ಕೆಳಗಿಂದ ಎದ್ದು ಬಂದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
- ಯಾರು ಈ ಅಪರಿಚಿತ..?! ಈತ ಕೋಣೆ ಒಳಗೆ ಹೋಗಿದ್ದು ಹೇಗೆ..?! ಏನು ಈತನ ಹಿನ್ನೆಲೆ..?!
ಗಂಡ ಹೆಂಡತಿ ಮೂರು ದಿನದ ಹಿಂದೆ ಅಪಾರ್ಟ್ಮೆಂಟ್ ಒಂದರಲ್ಲಿ ಮಲಗಿದ್ದಾಗ ಈ ಅಪರಿಚಿತ ವ್ಯಕ್ತಿ ದಿಡೀರನೆ ರಾತ್ರಿ ಸ್ತ್ರೀ ವೇಷ ಧರಿಸಿ ಮಂಚದ ಕೆಳಗಿಂದ ಎದ್ದು ಬಂದು ಮಹಿಳೆಯ ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಇದರಿಂದ ಗಾಬರಿಗೊಂಡ ಮಹಿಳೆ ತನ್ನ ಗಂಡನಿಗೆ ವಿಷಯ ತಿಳಿಸಿದ್ದಾರೆ ಆಗ ಗಂಡ ಎಚ್ಚೆತ್ತುಕೊಂಡಾಗ ಆತ ಅಲ್ಲಿಂದ ಪರಾರಿಯಾಗಿದ್ದಾನೆ .
ಯಾರು ಈತ..?!
ಈತ ತೀರ್ಥಹಳ್ಳಿಗೆ ಹೊಸಬನೇನಲ್ಲ ಕಳೆದ ಎಲ್ಲಮ್ಮಾಸೆಯ ಜಾತ್ರೆಯ ಸಮಯದಲ್ಲಿ ಸ್ತ್ರೀ ವೇಷ ಧರಿಸಿ ಎಲ್ಲರಲ್ಲೂ ಆತಂಕ ಮೂಡಿಸಿದ ವ್ಯಕ್ತಿ ಈಗ ದಂಪತಿಗಳಿದ್ದ ಕೋಣೆಯೊಳಗೆ ನುಗ್ಗಿ ಮತ್ತೆ ಅದೇ ತರ ವಾತಾವರಣ ಸೃಷ್ಟಿ ಮಾಡಿದ್ದಾನೆ ಈತ ಮಾನಸಿಕ ಅಸ್ವಸ್ಥನಾಗಿದ್ದು ಪ್ರಸ್ತುತ ಪ್ರಕರಣವನ್ನು ದಾಖಲಿಸಿಕೊಂಡಿರುವ ತೀರ್ಥಹಳ್ಳಿ ಪೊಲೀಸರು ಈತನಿಗೆ ಚಿಕಿತ್ಸೆ ಕೊಡಿಸುವುದರ ಜೊತೆಗೆ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಕೋಣೆ ಒಳಗೆ ಈತ ಹೇಗೆ ಬಂದ ಎನ್ನುವುದು ಅನುಮಾನಾಸ್ಪದ ವಿಷಯ ಮಾಹಿತಿಯ ಪ್ರಕಾರ ಈತ ಇದೇ ಅಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಎನ್ನುತ್ತಾರೆ ಆದರೆ ಕೋಣೆ ಒಳಗೆ ಹೇಗೆ ಬಂದ ..?! ಬಂದಿದ್ದು ಈಗ ದಂಪತಿಗಳಿಗೆ ಗೊತ್ತಾಗಲಿಲ್ಲ ಏಕೆ..?! ಎನ್ನುವುದು ವಿಚಾರಣೆಯಿಂದ ಹೊರ ಬರಬೇಕಾಗಿದೆ…
Thirthalli news : ರಾತ್ರಿ 12:30ಕ್ಕೆ ಗಂಡ ಹೆಂಡತಿ ಮಲಗಿದ್ದಾಗ ಮಂಚದ ಕೆಳಗಿಂದ ಎದ್ದು ಬಂದ ವ್ಯಕ್ತಿ ಯಾರು..?!
257
previous post


