ದಾವಣಗೆರೆ : ಜಿಲ್ಲೆಯ ಹೊನ್ನಾಳಿ ತಾಲೂಕಿನ ಹರಿಹರ ಹೊನ್ನಾಳಿ ಮುಖ್ಯ ಸೇತುವೆಯ ಕೆಳಗೆ ಮರಳು ತುಂಬಲು ದೋಣಿಯಲ್ಲಿ ತೆರಳುತ್ತಿದ್ದ ಇಬ್ಬರು ಹುಡುಗರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ದೋಣಿಯಲ್ಲಿ ಮುಳುಗಿದ ಯುವಕರನ್ನು ಮುಕ್ತಿಯಾರ್ ಮತ್ತು ತಿಪ್ಪೇಶ್ ಎಂದು ಗುರುತಿಸಲಾಗಿದೆ.

ಇಂದು ಬೆಳಗ್ಗೆ 11 ಗಂಟೆಗೆ ಈ ಘಟನೆ ನಡೆದಿದ್ದು ಯುವಕರ ಶವ ಇನ್ನೂ ಪತ್ತೆಯಾಗಿಲ್ಲ .

ಮರಳು ಮಾಫಿಯಾ ಯತೇಚ್ಛವಾಗಿ ನಡೆಯುತ್ತಿದ್ದು ಇದನ್ನು ತಡೆಯಬೇಕಾದ ಅಧಿಕಾರಿಗಳು ಕೈ ಬಾಯಿ, ಜೇಬು ತುಂಬಿಸಿಕೊಂಡು ಸುಮ್ಮನಿರುವುದರಿಂದ ಹಾಗೂ ತಡೆಯಲು ಪ್ರಯತ್ನ ಪಟ್ಟ ಅಧಿಕಾರಿಗಳಿಗೆ ರಾಜಕಾರಣಿಗಳು ಒತ್ತಡ ತರುವುದರಿಂದ ಈ ತರಹದ ಘಟನೆಗಳು ಹೆಚ್ಚಾಗಿವೆ ಇದಕ್ಕೆ ಮುಕ್ತಿ ಹಾಡಬೇಕಾಗಿದೆ.