Home ಭದ್ರಾವತಿBig news: ಭದ್ರಾ ನಾಲೆಗೆ ಬಿದ್ದ ನಾಲ್ವರು ಹುಡುಕಾಟದಲ್ಲಿ ಅಗ್ನಿಶಾಮಕ ದಳದವರು..! ಅಷ್ಟಕ್ಕೂ ಆಗಿದ್ದೇನು..?!

Big news: ಭದ್ರಾ ನಾಲೆಗೆ ಬಿದ್ದ ನಾಲ್ವರು ಹುಡುಕಾಟದಲ್ಲಿ ಅಗ್ನಿಶಾಮಕ ದಳದವರು..! ಅಷ್ಟಕ್ಕೂ ಆಗಿದ್ದೇನು..?!

by EDITOR NEWS WARRIORS
0 comments

 

ಭದ್ರಾವತಿ ತಾಲೂಕು ಅರಬಿಳಿಚಿಯ ನಾಲ್ವರು  ಭದ್ರಾ ಎಡದಂಡೆ ನಾಲೆಯಲ್ಲಿ ಬಟ್ಟೆ ತೊಳೆಯಲು ಬಂದಿದ್ದಾಗ ಕಾಲು ಜಾರಿ ಬಿದ್ದು  ದುರ್ಮರಣ ಹೊಂದಿದ್ದಾರೆ .

ಏನಿದು ಘಟನೆ :
ಅರಬಿಳಿಚಿಯ ನೀಲಾಬಾಯಿ ಎಂಬ ಸುಮಾರು 45 ವರ್ಷದ ಮಹಿಳೆಗೆ ಶ್ವೇತಾ ಹಾಗೂ ರವಿಕುಮಾರ್ ಎನ್ನುವ ಮಕ್ಕಳಿದ್ದು ಶ್ವೇತಾ ಗೆ ಸುಮಾರು 26 ವರ್ಷ ರವಿಕುಮಾರ್ ಗೆ ಸುಮಾರು 23 ವರ್ಷ ಶ್ವೇತಾ ನನ್ನು ಬೆಂಡಗಟ್ಟಿಗೆ ಪರಶುರಾಮ್ ಎನ್ನುವ 36 ವರ್ಷದ ವ್ಯಕ್ತಿ ಜೊತೆ ವಿವಾಹ ಮಾಡಿಕೊಡಲಾಗಿತ್ತು ಆದರೆ ಇದೇ ತಿಂಗಳ 13 /14/ 15 ರಂದು ಜಾತ್ರೆ ಇದ್ದ ಪ್ರಯುಕ್ತ ಅಳಿಯ ಪರಶುರಾಮ್ ಮತ್ತು ಮಗಳು ಶ್ವೇತಾ ತಮ್ಮ ಇಬ್ಬರು ಮಕ್ಕಳೊಂದಿಗೆ ನೀಲಾಬಾಯಿ ಅವರ ಮನೆ ಅರಬಿಳಿಚಿಗೆ ಬಂದಿದ್ದರು ಆದರೆ ಜಾತ್ರೆ ಮುಗಿಸಿ ಬಟ್ಟೆ ತೊಳೆಯಲು ಎರಡು ಬೈಕ್ ನಲ್ಲಿ ನಾಲ್ಕು ಜನ ಭದ್ರಾ ಎಡದಂಡೆ ನಾಲಿಗೆ ಬಂದಿದ್ದಾರೆ ಆ ಸಮಯದಲ್ಲಿ ನಾಲೆಗೆ ಹಾಕಿದ ರ್ರ್ ಪ್ ನಲ್ಲಿ ಜಾರಿ ಬಿದ್ದು ನೀರಿಗೆ ಬಿದ್ದಿದ್ದಾರೆ. ಈ ಸಮಯದಲ್ಲಿ ಒಬ್ಬರನ್ನು ರಕ್ಷಿಸಲು ಇನ್ನೊಬ್ಬರು ಹೋಗಿ ನಾಲ್ಕು ಜನರು ನಿರುಪಾಲಾಗಿದ್ದಾರೆ.

ಭದ್ರಾ ಎಡದಂಡೆ ನಾಲೆ 18 ರಿಂದ 20 ಅಡಿ ಆಳವಿದ್ದು ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ತಮ್ಮ ಬೋಟ್ ಗಳನ್ನು ಬಳಸಿ ನಿರುಪಾಲಾದವರನ್ನು ಹುಡುಕುವ ಶತ ಪ್ರಯತ್ನದಲ್ಲಿ ತೊಡಗಿದ್ದಾರೆ. ಹರಿಯುವ ನೀರಾದ್ದರಿಂದ ಶವಗಳು ಮುಂದೆ ಹೋಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಘಟನಾ ಸ್ಥಳಕ್ಕೆ  ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಎ ಜಿ ಕಾರಿಯಪ್ಪ ನವರು ಭೇಟಿ ನೀಡಿದ್ದು ಸ್ಥಳದಲ್ಲಿ  ಭದ್ರಾವತಿ ಡಿವೈಎಸ್ಪಿ, ಹೊಳೆಹೊನ್ನೂರು ಇನ್ಸ್ಪೆಕ್ಟರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಹಾಗೂ ಸ್ಥಳೀಯರು ಹಾಜರಿದ್ದಾರೆ.
ರಘುರಾಜ್ ಹೆಚ್‌ ಕೆ..9449553305….

Related Articles

Latest news
ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ...