Home ರಾಜ್ಯಐವರು ಲೆಕ್ಕಪರಿಶೋಧಕರಿಗೆ ಹೈಕೋರ್ಟ್ ನ ಹಿರಿಯ ವಕೀಲರ ಗರಿಮೆ..!

ಐವರು ಲೆಕ್ಕಪರಿಶೋಧಕರಿಗೆ ಹೈಕೋರ್ಟ್ ನ ಹಿರಿಯ ವಕೀಲರ ಗರಿಮೆ..!

by EDITOR NEWS WARRIORS
0 comments

ಬೆಂಗಳೂರು, :ಡಿಸೆಂಬರ್ 19: ಕರ್ನಾಟಕ ಹೈಕೋರ್ಟ್‍ಗೆ ಹಿರಿಯ ವಕೀಲರಾಗಿ ಐದು ಮಂದಿ ಭಾರತೀಯ ಲೆಕ್ಕಪರಿಶೋಧಕರನ್ನು ಆಯ್ಕೆ ಮಾಡಲಾಗಿದ್ದು, ಇವರನ್ನು ಶನಿವಾರ ನಗರದಲ್ಲಿ ಅಭಿನಂದಿಸಲಾಯಿತು.


ಭಾರತೀಯ ಲೆಕ್ಕ ಪತ್ರ ಪರಿಶೋಧಕರ ಸಂಸ್ಥೆ (ಐಸಿಎಐ)ಯಿಂದ ಎಸ್.ಎಸ್. ನಾಗನಂದ್ (2001), ಎ. ಶಂಕರ್ (2018) ಕೆ.ಎಸ್. ರವಿಶಂಕರ್, ವಿ. ರಘುರಾಮನ್, ಕೆ.ಕೆ. ಚೈತನ್ಯ (ಮೂವರು 2021ರಲ್ಲಿ) ಅವರನ್ನು ಕರ್ನಾಟಕ ಹೈಕೋರ್ಟ್‍ಗೆ ಹಿರಿಯ ವಕೀಲರನ್ನಾಗಿ ನೇಮಕ ಮಾಡಲಾಗಿದೆ. ಇವರನ್ನು ವಸಂತನಗರದ ಎಸ್. ನಾರಾಯಣನ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಶನಿವಾರ ಗೌರವಿಸಲಾಯಿತು.

ಈ ವೇಳೆ ಐಸಿಎಐ ಬೆಂಗಳೂರು ಘಟಕದ ಅಧ್ಯಕ್ಷ ಬಿ.ಟಿ. ಶೆಟ್ಟಿ ಮಾತನಾಡಿ, `2001ರಲ್ಲಿ ಒಬ್ಬರು, 2018ರಲ್ಲಿ ಒಬ್ಬರು ಹಾಗೂ ಇದೀಗ ಮೂರು ಮಂದಿ ಸೇರಿ ಒಟ್ಟಾರೆ ಐವರು ಲೆಕ್ಕಪರಿಶೋಧಕರು ಕರ್ನಾಟಕ ಹೈಕೋರ್ಟ್‍ಗೆ ಹಿರಿಯ ವಕೀಲರಾಗಿ ನೇಮಕವಾಗಿದ್ದಾರೆ. ಇವರ ಉತ್ತಮ ಕಾರ್ಯನಿರ್ವಹಣೆಯಿಂದಾಗಿ ಆಯ್ಕೆ ಮಾಡಲಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಬೆಂಗಳೂರು ಶಾಖೆಯ ಲೆಕ್ಕ ಪರಿಶೋಧಕ ಜಿ.ಎಸ್. ಪ್ರಶಾಂತ್ ಮಾತನಾಡಿ, ಎಲ್ಲಾ ಲೆಕ್ಕಪರಿಶೋಧಕರಿಗೆ ಇಂದು ಹೆಮ್ಮೆಯ ದಿನವಾಗಿದೆ.ಪಂಚ ಮಹಾರತ್ನ’ಗಳು ಎಂದು ಕರೆಯಬಹುದಾದ ನಮ್ಮ ಐವರು ಚಾರ್ಟೆಡ್ ಅಕೌಂಟೆಂಟ್‍ಗಳು ಕರ್ನಾಟಕ ಹೈಕೋರ್ಟ್‍ನ ವಕೀಲರಾಗಿ ಮಾರ್ಗದರ್ಶನ ನೀಡುತ್ತಿರುವುದು ನಮ್ಮೆಲ್ಲರಿಗೂ ಮಾದರಿಯಾಗಿದೆ. ಅವರ ಬಳಿ ವಿದ್ಯೆ ಕಲಿತವರು ಸಹಸ್ರಾರು ಸಂಖ್ಯೆಯಲ್ಲಿದ್ದಾರೆ. ನಾವೆಲ್ಲಾ ಇವರ ಮಾರ್ಗದರ್ಶನದಲ್ಲಿ ಮುಂದುವರಿಯುತ್ತೇವೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಖುಷಿಯ ಸಂಗತಿಯಾಗಿದೆ’ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಭಾರತೀಯ ಲೆಕ್ಕ ಪತ್ರ ಪರಿಶೋಧಕರ ಸಂಸ್ಥೆ (ಐಸಿಎಐ) ಉಪಾಧ್ಯಕ್ಷ ಟಿ. ಶ್ರೀನಿವಾಸ, ಕಾರ್ಯದರ್ಶಿ ಎಸ್. ದಿವ್ಯಾ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ತೆರಿಗೆ ವ್ಯಾಜ್ಯಗಳ ಕುರಿತು ಚರ್ಚೆ ನಡೆಯಿತು.


`ಐದು ಮಂದಿ ಮುಂಚೂಣಿ ಲೆಕ್ಕ ಪರಿಶೋಧಕರು ಪ್ರತಿಷ್ಠಿತ ಹೈಕೋರ್ಟ್‍ಗೆ ಆಯ್ಕೆಯಾಗಿರುವುದು ಐಸಿಎಐಗೆ ಮುಕುಟವಿಟ್ಟಂತೆ. ಅವರ ಸಲಹೆ, ಮಾರ್ಗದರ್ಶ ಸದಾ ನಮ್ಮೆಲ್ಲರಿಗೂ ಸ್ಫೂರ್ತಿಯಾಗಲಿದೆ’.


ಸಂಜಯ್ ಎಂ. ಧಾರಿವಾಲ್, ಚಾರ್ಟೆಡ್ ಅಕೌಂಟೆಂಟ್.

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305

Related Articles

Leave a Comment

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...