Home ಶಿವಮೊಗ್ಗವ್ಯಕ್ತಿಗಳಲ್ಲಿ ಪರಿಪೂರ್ಣತೆ ನಿರೀಕ್ಷಿಸಬಾರದು ಬದಲಿಗೆ ಸಕಾರಾತ್ಮಕ ಅಂಶಗಳ ಪ್ರಮಾಣವೆಷ್ಟಿದೆ ಎಂದಷ್ಟೇ ಗಮನಿಸಬೇಕು ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ಅಭಿಮತ..!!

ವ್ಯಕ್ತಿಗಳಲ್ಲಿ ಪರಿಪೂರ್ಣತೆ ನಿರೀಕ್ಷಿಸಬಾರದು ಬದಲಿಗೆ ಸಕಾರಾತ್ಮಕ ಅಂಶಗಳ ಪ್ರಮಾಣವೆಷ್ಟಿದೆ ಎಂದಷ್ಟೇ ಗಮನಿಸಬೇಕು ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ಅಭಿಮತ..!!

by EDITOR NEWS WARRIORS
0 comments

ತೀರ್ಥಹಳ್ಳಿ : ಪಟ್ಟಣದ ಬಂಟರ ಭವನದಲ್ಲಿ ವಯೋನಿವೃತ್ತಿ ಹೊಂದಿದ ಸಹೋದ್ಯೋಗಿಗಳಿಗೆ ಆರೋಗ್ಯ ಇಲಾಖಾ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತೀರ್ಥಹಳ್ಳಿ ತಾಲ್ಲೂಕು ಸರ್ಕಾರಿ ನೌಕರರ ಸಂಘ ಹಾಗೂ ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ಅವರು ಸಾಂಘಿಕ ಚಟುವಟಿಕೆಗಳು ಪರಸ್ಪರ ಸೌಹಾರ್ಧತೆಗಳನ್ನು ಬೆಸೆಯುತ್ತವೆ.ಸುಖ ಕಷ್ಟಗಳನ್ನು ಹಂಚಿಕೊಳ್ಳುವ ಅವಕಾಶಗಳನ್ನು ಒದಗಿಸುತ್ತದೆ. ಪರಸ್ಪರ ಒಡನಾಟಗಳು ನಮ್ಮ ಸಂತಸಗಳನ್ನು ಹೆಚ್ಚಿಸುತ್ತದೆ. ನೆನಪುಗಳನ್ನು ಮತ್ತಷ್ಟು ಸುಂದರವಾಗಿಸುತ್ತವೆ. ಇಂತವು ಕೇವಲ ಯೇಗ್ದಾಗಿದ್ದರಷ್ಟೇ ದಕ್ಕುವಂತವು. ಇತರರೊಂದಿಗೆ ನಾವು ವರ್ತಿಸುವ ರೀತಿ,ಸಾಮಾಜಿಕ ಸಂಘಟನಾತ್ಮಕ ಕಾರ್ಯಗಳಿಗೆ ನೀಡುವ ಮಹತ್ವ ಅಂತಹ ಯೋಗವನ್ನು ದೊರಕಿಸಬಲ್ಲದು.

ಮುಂದುವರೆದು, ವ್ಯಕ್ತಿಗಳಲ್ಲಿ ಪರಿಪೂರ್ಣತೆ ನಿರೀಕ್ಷಿಸಬಾರದು ಬದಲಿಗೆ ಸಕಾರಾತ್ಮಕ ಅಂಶಗಳ ಪ್ರಮಾಣವೆಷ್ಟಿದೆ ಎಂದಷ್ಟೇ ಗಮನಿಸಬೇಕು.ಆಗ ಸಾಕಷ್ಟು ಒಳಿತುಗಳು ಕಾಣಿಸುತ್ತವೆ. ಒಳಿತೆನಿಸಿದ್ದಕ್ಕೆ ಗೌರವಿಸುವ, ಪುಟ್ಟ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ, ಸಂತಸಗಳನ್ನು ಒಗ್ಗೂಡಿ ಸಂಭ್ರಮಿಸುವ ಮೂಲಕ ಸಹೋದ್ಯೋಗಿಗಳಲ್ಲಿ ಸಕಾರಾತ್ಮಕ ಪ್ರೇರಣೆ ತುಂಬಲು ನಿರಂತರವಾಗಿ ಶ್ರಮಿಸುತ್ತಿರುವ ಹೆಮ್ಮೆ ನಮ್ಮ ತಂಡದ್ದು ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಟರಾಜ್ ಮಾತನಾಡಿ, ನಿವೃತ್ತ ಇಬ್ಬರೂ ಸಹೋದ್ಯೋಗಿಗಳು ತಮ್ಮ ಕರ್ತವ್ಯನಿಷ್ಟೆ,ಸೌಜನ್ಯಯುತ ನಡವಳಿಕೆಗಳಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದವರು.ಇಂತವರ ನಿವೃತ್ತಿ ನಿಜಕ್ಕೂ ಬೇಸರದ ವಿಷಯ. ಅವರ ನಿವೃತ್ತ ಬದುಕಿಗೆ ಹಾರ್ದಿಕ ಶುಭ ಹಾರೈಸುವುದಾಗಿ ತಿಳಿಸಿ, ಇಂತವರನ್ನು ಗೌರವಿಸುವ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು.

ಭದ್ರಾವತಿ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯಾಧಿಕಾರಿ ಡಾ.ಶಿವಪ್ರಕಾಶ್ ಮಾತನಾಡಿ, ಸದಾ ಒಂದಿಲ್ಲೊಂದು ಕಾರ್ಯ ಚಟುವಟಿಕೆಗಳ ಮೂಲಕ ಸಂಘ ವಿಶಿಷ್ಟವಾಗಿ ಕಾರ್ಯಾಚರಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ.ಇಂತಹ ಒಳ್ಳೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ. ನಿವೃತ್ತರಿಗೆ  ಹಾರ್ದಿಕವಾಗಿ ಶುಭಾಶಯಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಪ್ರಾ.ಆ.ಕೇಂದ್ರ ಹುಂಚದಕಟ್ಟೆಯ ವೈದ್ಯಾಧಿಕಾರಿ ಡಾ.ಶೋಭಾದೇವಿ ಮಾತನಾಡಿ, ಸೇವೆಗಳ ಗುಣಮಟ್ಟ ಹೆಚ್ಚಬೇಕೆಂದರೆ ಒಳ್ಳೆಯ ಸಂಗತಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಪ್ರೇರೆಪಣೆ ನೀಡುವ ಕಾರ್ಯವನ್ನೂ ಮಾಡಬೇಕು. ನಮ್ಮ ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘ ಈ ದಿಸೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಂಘದ ಕಾರ್ಯಚಟುವಟಿಕೆಗಳು ಹೀಗೆಯೇ ಮುಂದುವರಿಯಲಿ ಎಂದು ಶುಭ ಹಾರೈಸಿದರು.

ಸಂಘದ ಖಜಾಂಚಿ ಎ ಎಂ ಜಗದೀಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಪ್ರಾ.ಆ.ಕೇಂದ್ರ ಮಾಳೂರಿನ ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಡಿ ಸಿ ಶಿವಶಂಕರ್ ಮತ್ತು ಪ್ರಾ.ಆ.ಕೇಂದ್ರ ಆಗುಂಬೆಯ ನಿವೃತ್ತ ಹೊರಗುತ್ತಿಗೆ ಚಾಲಕ ಮೋಹನ್ ರನ್ನು ಆತ್ಮೀಯವಾಗಿ ಗೌರವಿಸಲಾಯಿತು.

ಸನ್ಮಾನಿತರ ಪರವಾಗಿ ಡಿ ಸಿ ಶಿವಶಂಕರ್ ಮಾತನಾಡಿ ಧನ್ಯವಾದ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ನೂತನ ದಂಪತಿಗಳಾದ ಕೃಷ್ಣಮೂರ್ತಿ  ಮತ್ತು ಕವನ, ನಾಗರಾಜ್ ಮತ್ತು ದೇವಮ್ಮ ದಂಪತಿಗಳ ವೈವಾಹಿಕ ಬದುಕಿಗೆ ಹಾರ್ದಿಕವಾಗಿ ಶುಭಹಾರೈಸಲಾಯಿತು ಮತ್ತು ಪ್ರಾ.ಆ.ಕೇಂದ್ರ ಹುಂಚದಕಟ್ಟೆಯ ವೈದ್ಯಾಧಿಕಾರಿ ಡಾ. ಶೋಭಾದೇವಿ ಹಾಗೂ ಪ್ರಾ.ಆ.ಕೇಂದ್ರ ಮಾಳೂರಿನ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಅನಿತ ಬಿ ಸಿ ಯವರ ಜನ್ಮ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಜೆ ಸಿ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಕೆ ರಾಮಕೃಷ್ಣ, ಸಂಘದ ಕಾರ್ಯದರ್ಶಿ ಸುಭಾಷ್, ಉಪಾಧ್ಯಕ್ಷರಾದ ಯಶೋಧ, ತಿಲಕಮ್ಮ, ನಿವೃತ್ತ ಹಿರಿಯ ಪ್ರಾ.ಅ.ಸುರಕ್ಷಾಧಿಕಾರಿ ಗಿರಿಜಮ್ಮ, ಸೇರಿದಂತೆ ಸಂಘದ ಪದಾಧಿಕಾರಿಗಳು, ವಿವಿಧ ವೃಂದ ಸಂಘಗಳ ಪದಾಧಿಕಾರಿಗಳು, ಇಲಾಖಾ ಸಹೋದ್ಯೋಗಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ವತ್ಸಲಾ ಕೃಷ್ಣ ಸ್ವಾಗತಿಸಿ, ಗುರುಪ್ರಸಾದ್ ನಿರೂಪಿಸಿ, ಹೆಚ್ ಜಿ ವಿನಾಯಕ ವಂದಿಸಿದರು.

ರಘುರಾಜ್ ಹೆಚ್.ಕೆ...9449553305...

Related Articles

Leave a Comment

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...