Home ರಾಜ್ಯಒತ್ತಡದ ಜೀವನ ಹಲವು ರೋಗಗಳಿಗೆ ಆಹ್ವಾನ..!!

ಒತ್ತಡದ ಜೀವನ ಹಲವು ರೋಗಗಳಿಗೆ ಆಹ್ವಾನ..!!

by EDITOR NEWS WARRIORS
0 comments

ದಾವಣಗೆರೆ: ಇಂದಿನ ಒತ್ತಡದ ಜೀವನದಲ್ಲಿ ಅರೋಗ್ಯದ ಅನಿರೀಕ್ಷತ ಸಮಸ್ಯೆಗಳು ಎದುರಾಗುತ್ತವೆ. ಈ ನಿಟ್ಟಿನಲ್ಲಿ ಜನತೆ ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸದಾ ಜಾಗರೂಕರಾಗಿ ಇರಬೇಕೆಂದು ಭಾವಸಾರ ಇಂಡಿಯಾ ವಿಜನ್ ದಾವಣಗೆರೆ ಜಿಲ್ಲಾಧ್ಯಕ್ಷ ವಿಜಯ್‍ಕುಮಾರ್ ಕೆ.ಟಿಕಾರೆ ಅಭಿಪ್ರಾಯ ಪಟ್ಟರು.


ದಾವಣಗೆರೆಯ ಎಸ್.ಎಸ್.ನಾರಾಯಣ ಹಾರ್ಟ್ ಸೆಂಟರ್ ಹಾಗೂ ಭಾವಸಾರ ವಿಜನ್ ಇಂಡಿಯಾ, ಹಳೇ ಕುಂದುವಾಡದ ಶ್ರೀಸದ್ಗುರು ಕರಿಬಸವೇಶ್ವರ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಹಳೇ ಕುಂದುವಾಡದಲ್ಲಿ ಆಯೋಜಿಸಲಾಗಿದ್ದ ಉಚಿತ ಹೃದಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.

ಅದರಲ್ಲೂ ದುಬಾರಿಯ ಇಂದಿನ ದಿನಮಾನಗಳಲ್ಲಿ ವೈದ್ಯಕೀಯ ವೆಚ್ಚಗಳನ್ನು ಭರಿಸುವುದು. ಮಧ್ಯಮ ಮತ್ತು ಬಡವರ್ಗ ಹಾಗೂ ಗ್ರಾಮೀಣ ಜನರಿಗೆ ಕಷ್ಟದ ಕೆಲಸ. ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಉಚಿತ ಹೃದಯ ರೋಗ ತಪಾಸಣೆ ಶಿಬಿರ ಆಯೋಜಿಸಲಾಗಿದೆ. 

ಎಸ್.ಎಸ್.ನಾರಾಯಣ ಹೃದಯಾಲಯದ ವೈದ್ಯರು, ಸಿಬ್ಬಂದಿ ಅಗತ್ಯ ಇದ್ದವರಿಗೆ ಇಸಿಜಿ, 2ಡಿ ಇಕೋ ತಪಾಸಣೆ ನಡೆಸಿದ್ದಾರೆ. ಹಳೇ ಕುಂದುವಾಡ ಗ್ರಾಮದ ಗ್ರಾಮಸ್ಥರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಉಚಿತ ಹೃದಯ ರೋಗ ತಪಾಸಣೆ ಕಾರ್ಯಕ್ರಮ ಆಯೋಜಿಸಲಾಗಿದೆ. 150ಕ್ಕೂ ಹೆಚ್ಚು ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಕಾರ್ಯಾಕಾರಿ ಮಂಡಳಿ ಸದಸ್ಯ ನಿಂಗೋಜಿರಾವ್ ಗುಜ್ಜಾರ್ ಮಾತನಾಡಿ, ಉದ್ಯೋಗದಲ್ಲಿನ ನಿರಂತರ ಒತ್ತಡ, ಅನಾರೋಗ್ಯಕರ ಆಹಾರ ಕ್ರಮಗಳು ಮತ್ತು ಅಸಮರ್ಪಕ ವಿಶ್ರಾಂತಿಯು ಆರೋಗ್ಯದ ತೊಂದರೆಗೆ ಕಾರಣವಾಗಿವೆ. ಇಂತಹ ಅನಿರೀಕ್ಷಿತ ಸಮಸ್ಯೆಗಳಿಗೆ ನಮ್ಮ ಜೀವನಶೈಲಿಯೇ ಮೂಲ ಕಾರಣ. ಈಗಲಾದರೂ ನಾವುಗಳು ಎಚ್ಚೆತ್ತುಕೊಂಡು ನಮ್ಮ ಆಹಾರ ಕ್ರಮ, ಜೀವನಶೈಲಿ ಬದಲಾಯಿಸಿ ಕೊಳ್ಳಬೇಕು. 

ಇಲ್ಲವಾದಲ್ಲಿ ವಯಸ್ಸಾಗುವ ಮುನ್ನವೇ ನಮಗೆ ಮುಪ್ಪಿನಲ್ಲಿ ಬರುವ ಕಾಯಿಲೆಗಳು ಬರುವುದಂತೂ ಗ್ಯಾರೆಂಟಿ. ಇದೆಲ್ಲದಕ್ಕೂ ನಾವುಗಳು ಆಯಾ ಕಾಲದಲ್ಲಿ ಎಲ್ಲಾ ಹಂತದ ಯೋಚನೆಗಳೇ ಕಾರಣ. ಅದ್ದರಿಂದ ನಾವುಗಳು ಯೋಚನೆ ಬಿಟ್ಟು, ಅರೋಗ್ಯದತ್ತ ಗಮನ ಹರಿಸಬೇಕೆಂದು ಕರೆ ನೀಡಿದರು.


ಈ ವೇಳೆ ಕಾರ್ಯದರ್ಶಿ ನರೇಂದ್ರ ಕುಮಾರ್ ಟಿಕಾರೆ, ನಾಗವೇಣಿ ಟಿಕಾರೆ, ನಿಂಗೋಜಿರಾವ್ ಗುಜ್ಜಾರ್, ರಮೇಶ್ ತೇಲ್ಕರ್, ರಮೇಶ್ ಅಂಬರ್‍ಕರ್, ಅರುಣ್ ಗಡ್ಡಾಳೆ, ಅನಿಲ್ ಮಹಳದ್‍ಕರ್, ಕವಿತಾ ಸರ್ವದೆ, ಸುಧಾ ಟಿಕಾರೆ, ಅನ್ನಪೂರ್ಣ ಗುಜ್ಜಾರ್, ಗಣೇಶ್ ವಾದೋನೆ, ಶಂಕರ್ ಬೋಂದಾಡೆ, ಅಶೋಕ್ ನವಲೆ, ಮಂಜುನಾಥ್ ಗುಡ್ಡಾಳೆ, ಕುಂಡವಾಡ ಮಂಜುನಾಥ್, ಆಶಾ ಕಾರ್ಯಕರ್ತರು, ಎಸ್.ಎಸ್. ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ, ಶ್ರೀಸದ್ಗುರು ಕರಿಬಸವೇಶ್ವರ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಇತರರು ಇದ್ದರು.

#####################################

ರಘುರಾಜ್ ಹೆಚ್.ಕೆ….9449553305….

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...