Home ರಾಜ್ಯಧರ್ಮಸ್ಥಳದಲ್ಲಿ ಜಾಗೃತಿ ಟ್ರಸ್ಟ್ ವತಿಯಿಂದ ಸರ್ವ ಧರ್ಮದ ಕವಿಗೋಷ್ಠಿ ಆಸಕ್ತಿ ಇರುವವರು ಆಯೋಜಕರನ್ನು ಸಂಪರ್ಕಿಸಿ..!!

ಧರ್ಮಸ್ಥಳದಲ್ಲಿ ಜಾಗೃತಿ ಟ್ರಸ್ಟ್ ವತಿಯಿಂದ ಸರ್ವ ಧರ್ಮದ ಕವಿಗೋಷ್ಠಿ ಆಸಕ್ತಿ ಇರುವವರು ಆಯೋಜಕರನ್ನು ಸಂಪರ್ಕಿಸಿ..!!

by EDITOR NEWS WARRIORS
0 comments

ಬೆಂಗಳೂರು : ಅಂತರ ಜಿಲ್ಲೆ ಸರ್ವಧರ್ಮ ಕವಿಗೋಷ್ಠಿಯನ್ನು ಜಾಗೃತಿ ಟ್ರಸ್ಟ್ ಜುಲೈ 23ಮತ್ತು24 ರಂದು ಧರ್ಮಸ್ಥಳದ ನೇತ್ರಾವತಿ ಸಭಾಂಗಣದಲ್ಲಿ ಆಯೋಜಿಸಿದೆ.
ಕಾರ್ಯಕ್ರಮವು ನಡೆಯಲಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಆಸಕ್ತ ಕವಿಗಳು ಹೆಸರು ನೋಂದಾಯಿಸಿಕೊಂಡು ಭಾಗವಹಿಸಲು ಅವಕಾಶವಿದೆ.

ಜಾಗೃತಿ ಟ್ರಸ್ಟ್ ಸುಮಾರು 20 ವರ್ಷಗಳಿಂದ ನಾಡು ನುಡಿಗೆ ಸಂಬಂಧಿಸಿದ ಹತ್ತು ಹಲವು ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ.

ಧರ್ಮಸ್ಥಳದಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಭಾಗವಹಿಸುವವರಿಗೆ ಪ್ರಯಾಣಕ್ಕಾಗಿ ಬಸ್ಸಿನ ವ್ಯವಸ್ಥೆ ಮತ್ತು ವಸತಿ ವ್ಯವಸ್ಥೆ ಮಾಡಲಾಗುವುದು. ಅದರ ಖರ್ಚುವೆಚ್ಚವನ್ನು ಭಾಗವಹಿಸುವ ಕವಿಗಳು ಭರಿಸಬೇಕಾಗುತ್ತದೆ. ಭಾಷಾ ಸಾಮರಸ್ಯವನ್ನು ಬೆಸೆಯುವ ಈ ಕಾರ್ಯಕ್ರಮದ ವೇಳೆ ಸ್ಥಳ ವೀಕ್ಷಣೆಯ ವ್ಯವಸ್ಥೆಯನ್ನೂ ಮಾಡಲಾಗುವುದು. ಆಸಕ್ತರು ಜುಲೈ 15ರ ಒಳಗೆ ತಮ್ಮ ಹೆಸರುಗಳನ್ನು ನೋಂದಾಯಿಸಲು ಕೋರಲಾಗಿದೆ.

ಜಾಗೃತಿ ಟ್ರಸ್ಟ್ನ ಅಧ್ಯಕ್ಷರಾದ ಬಿ. ನಾಗೇಶ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮವು ನಡೆಯಲಿದೆ. ಹೆಚ್ಚನ ವಿವರಗಳಿಗೆ ಮತ್ತು ಹೆಸರು ನೋಂದಾಯಿಸಲು ದೂರವಾಣಿ ಸಂಖ್ಯೆ :9590939909ಗೆ ಕರೆ ಮಾಡಬಹುದು ಎಂದು ಜಾಗೃತಿ ಟ್ರಸ್ಟ್ ನ ಪ್ರಕಟಣೆ ತಿಳಿಸಿದೆ.

ರಘುರಾಜ್ ಹೆಚ್.ಕೆ…9449553305….

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...