Home ರಾಜ್ಯ“”ನ್ಯೂಸ್ ವಾರಿಯರ್ಸ್ ಪತ್ರಿಕೆ ವರದಿಯ ಫಲಶ್ರುತಿ””ತೀರ್ಥಹಳ್ಳಿ ಮೇಲಿನ ಕುರುವಳ್ಳಿ ಬಂಡೆಗೆ ಗಣೆ ಅಧಿಕಾರಿಗಳ ದಾಳಿ..!!!! 3 ಲಾರಿಗಳ ವಶ..!!! ಒಂದು ಬಂಡೆಗೆ ಭೇಟಿ ನೀಡಿ ಅಕ್ರಮಗಳನ್ನು ವಶಪಡಿಸಿಕೊಂಡು ಇನ್ನೆರಡು ಬಂಡೆಗಳನ್ನು ಬಿಟ್ಟಿದ್ದು ಏಕೆ ‌…?! ಬಡವರ ಮೇಲೆ ಮಾತ್ರ ಬ್ರಹ್ಮಾಸ್ತ್ರನಾ..?! ಶ್ರೀಮಂತರು ಇವರ ಕಣ್ಣಿಗೆ ಕಾಣಿಸುವುದಿಲ್ಲವೇ..?!????????????????????????????

“”ನ್ಯೂಸ್ ವಾರಿಯರ್ಸ್ ಪತ್ರಿಕೆ ವರದಿಯ ಫಲಶ್ರುತಿ””ತೀರ್ಥಹಳ್ಳಿ ಮೇಲಿನ ಕುರುವಳ್ಳಿ ಬಂಡೆಗೆ ಗಣೆ ಅಧಿಕಾರಿಗಳ ದಾಳಿ..!!!! 3 ಲಾರಿಗಳ ವಶ..!!! ಒಂದು ಬಂಡೆಗೆ ಭೇಟಿ ನೀಡಿ ಅಕ್ರಮಗಳನ್ನು ವಶಪಡಿಸಿಕೊಂಡು ಇನ್ನೆರಡು ಬಂಡೆಗಳನ್ನು ಬಿಟ್ಟಿದ್ದು ಏಕೆ ‌…?! ಬಡವರ ಮೇಲೆ ಮಾತ್ರ ಬ್ರಹ್ಮಾಸ್ತ್ರನಾ..?! ಶ್ರೀಮಂತರು ಇವರ ಕಣ್ಣಿಗೆ ಕಾಣಿಸುವುದಿಲ್ಲವೇ..?!????????????????????????????

by EDITOR NEWS WARRIORS
0 comments

“”ನ್ಯೂಸ್ ವಾರಿಯರ್ಸ್ ಪತ್ರಿಕೆಯ ವರದಿಯ ಸುದ್ದಿಯ ಫಲಶ್ರುತಿ”” .

ತೀರ್ಥಹಳ್ಳಿ: ನ್ಯೂಸ್ ವಾರಿಯರ್ಸ್ ‌‌ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತೀರ್ಥಹಳ್ಳಿಯ ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಮೇಲಿನ ಕುರುವಳ್ಳಿಯ ಅಕ್ರಮ ಗಣಿಗಾರಿಕೆಗೆ ಪ್ರದೇಶಕ್ಕೆ ಗಣಿ ಅಧಿಕಾರಿಗಳ ದಾಳಿ ಮಾಡಿದ್ದು 3 ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ .

ಆಶ್ರಯ ಬಡಾವಣೆಯಲ್ಲಿ ನಡೆಯುತ್ತಿದೆ ಸ್ಪೋಟಕ ಬಳಸಿ ಕಲ್ಲು ಗಣಿಗಾರಿಕೆ:

ತೀರ್ಥಹಳ್ಳಿ ಪಟ್ಟಣದ ಬುಕ್ಲಾಪುರ ಮತ್ತು ಮೇಲಿನಕುರುವಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹಾಗೂ ಆಶ್ರಯ ಬಡಾವಣೆಯ ಒಳಗೆ ಭಾರೀ ಪ್ರಮಾಣದ ಅಕ್ರಮ ಕಲ್ಲು ಗಣಿಗಾರಿಕೆ ನಡೆದು ಕೋಟ್ಯಾಂತರ ರೂಪಾಯಿಗಳ ಕಲ್ಲು ಸಾಗಾಟವಾಗುತ್ತಿತ್ತು .ಈ ಕಲ್ಲನ್ನು ತೆಗೆಯಲು ನಿರಂತರವಾಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮತ್ತು ಆಶ್ರಯ ಬಡಾವಣೆ ಒಳಗೆ ಭಾರೀ ಪ್ರಮಾಣದ ಸ್ಫೋಟಕಗಳನ್ನು ಬಳಸುತ್ತಿದ್ದರು .ಇಲ್ಲಿಯ ಜನಜೀವನ ಅಸ್ತವ್ಯಸ್ತವಾಗಿದ್ದು ಪ್ರಾಣಗಳಿಗೆ ಹಾನಿಯಾಗುವಂಥ ವ್ಯವಸ್ಥೆಯಿತ್ತು .ಇದನ್ನು ನ್ಯೂಸ್ ವಾರಿಯರ್ಸ್ ಪತ್ರಿಕೆ ಸಮಗ್ರವಾಗಿ ಸುದ್ದಿ ಮಾಡಿತ್ತು .

ಜಿಲ್ಲಾಧಿಕಾರಿಗಳು ಜಿಲ್ಲಾ ರಕ್ಷಣಾಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡ ವರದಿ :

ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ನ್ಯೂಸ್ ಪತ್ರಿಕೆಯ ಸುದ್ದಿಯನ್ನು ಗಮನಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಗಳಿಗೆ ತಕ್ಷಣ ಸ್ಥಳಕ್ಕೆ ಹೋಗಿ ವರದಿ ಸಲ್ಲಿಸಲು ತಾಕಿತ್ ಮಾಡಿದ್ದರು .ನಿನ್ನೆ ದಿನ ಸಂಜೆ ಕೇವಲ 1ಬಂಡೆಗೆ ಮಾತ್ರ ಬಂದು ಆಶ್ರಯ ಬಡಾವಣೆಗೆ ಮತ್ತು ಕುಂಬಾರಗಡಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಸರ್ವೇ ನಂಬರ್ 75ರ ಬಂಡೆಗೆ ಹೋಗದೆ ಸಣ್ಣಪುಟ್ಟ ಕಲ್ಲು ಕೆಲಸ ಮಾಡುವ ಪ್ರದೇಶಕ್ಕೆ ಹೋಗಿ ಕೆಲವು ಬೇಲಿ ಕಂಬಗಳನ್ನು ತುಂಡು ಮಾಡಿರುತ್ತಾರೆ .

ಗಣಿಗಾರಿಕೆ ಪ್ರದೇಶಕ್ಕೆ ಹಿರಿಯ ಭೂ ವಿಜ್ಞಾನಿ ಹಾಗೂ ಭೂ ವಿಜ್ಞಾನಿಯ ದಿಡೀರ್ ದಾಳಿ ಬೆಲೆಬಾಳುವ ಅಕ್ರಮ ಕಲ್ಲನ್ನು ಅಲ್ಲೇ ಬಿಟ್ಟು ಸಣ್ಣಪುಟ್ಟ ಕಾರ್ಮಿಕರಿಗೆ ತೊಂದರೆ ಕೊಟ್ಟು ಬಂದರಾ ..?!

ಮೇಲಿನಕುರುವಳ್ಳಿ ಅಕ್ರಮ ಕಲ್ಲುಗಣಿಗಾರಿಕೆ ಪ್ರದೇಶಕ್ಕೆ ಹಿರಿಯ ಭೂವಿಜ್ಞಾನಿ ವಿಂಧ್ಯ ,ಹಾಗೂ ಭೂ ವಿಜ್ಞಾನಿ ಅವಿನಾಶ್ ಅವರು ದಾಳಿ ನಡೆಸಿ 3ಲಾರಿಗಳನ್ನು ವಶಪಡಿಸಿಕೊಂಡು ತೀರ್ಥಹಳ್ಳಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ . ಆದರೆ ಸ್ಥಳದಲ್ಲಿದ್ದ ಲಕ್ಷಾಂತರ ರೂಪಾಯಿಗಳ ಅಕ್ರಮ ಕಲ್ಲು ತೆಗೆದು ದಾಸ್ತಾನು ಇಟ್ಟಿರುವುದನ್ನು ವಶಪಡಿಸಿ ಕೊಂಡಿರುವುದಿಲ್ಲ ಹಾಗೂ ಆಶ್ರಯ ಬಡಾವಣೆಯಲ್ಲಿ ಮತ್ತು ರಾಷ್ಟ್ರೀಯ ಹೆದ್ದಾರಿ ಪಕ್ಕದ ಕುಂಬಾರಗಡಿಗೆ ಲಕ್ಷಾಂತರ ರೂಪಾಯಿಗಳ ಬೆಲೆ ಬಾಳುವ ಕಲ್ಲು ಅಕ್ರಮ ದಾಸ್ತಾನು ಇರುವುದನ್ನು ನೋಡಿಯೂ ನೋಡದೆ ವಶಪಡಿಸಿಕೊಳ್ಳದೆ ಅಕ್ರಮ ದಂಧೆ ಮಾಡುವ ಶ್ರೀಮಂತರಿಗೆ ರಕ್ಷಣೆ ಮಾಡುತ್ತಿದ್ದಾರೆ ಎಂದು ಅಲ್ಲಿದ್ದ ಸಣ್ಣಪುಟ್ಟ ಕಾರ್ಮಿಕರು ಪತ್ರಿಕೆ ಜೊತೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ನ್ಯಾಯಾಲಯದ ಆದೇಶ ಲೋಕಾಯುಕ್ತದ ಆದೇಶ ಇದೆ ಆದರೂ ಈ ಆದೇಶಕ್ಕೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ..?!

ಈ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯದಂತೆ ರಾಜ್ಯ ಉಚ್ಚ ನ್ಯಾಯಾಲಯದ ಆದೇಶವಿದ್ದು ಹಾಗೂ ಲೋಕಾಯುಕ್ತ ಸಹ ಆದೇಶ ನೀಡಿರುತ್ತದೆ .ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಕೆಲವು ವ್ಯಕ್ತಿಗಳು ಕಲ್ಲು ಗಣಿಗಾರಿಕೆಯನ್ನು ತೆಗೆದು ಸರ್ಕಾರಿ ಸೊತ್ತು ಕಲ್ಲನ್ನು ಕಳ್ಳತನದ ತೆಗೆದುಕೊಂಡು ಹೋಗುತ್ತಿದ್ದು ಸರ್ಕಾರದ ಖಜಾನೆಗೆ ಕೋಟ್ಯಂತರ ರೂಪಾಯಿಗಳ ನಷ್ಟವಾಗಿರುತ್ತದೆ .ಆಕ್ರಮ ಕಲ್ಲು ಮಾಡ್ಕೊಂಡಿರೋದು 1ವೃತ್ತಿಯನ್ನು ಮಾಡಿಕೊಂಡಿದ್ದು ಪದೇಪದೆ ಪ್ರಕರಣಗಳು ದಾಖಲಾಗುತ್ತಿವೆ . ಜಿಲ್ಲಾಧಿಕಾರಿಗಳು ,ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ಈ ಅಕ್ರಮ ದಂಧೆಕೋರರಿಗೆ ಕಠಿಣ ಪ್ರಕರಣಗಳನ್ನು ದಾಖಲಿಸಿ ಜೈಲಿಗಟ್ಟುವ ಅಗತ್ಯ ಇದೆ .ಅದರಲ್ಲೂ ಮುಖ್ಯವಾಗಿ ಈ ಪ್ರದೇಶದಲ್ಲಿ ಭಾರೀ ಪ್ರಮಾಣದ ರಾಜರೋಷವಾಗಿ ಹಾಡಹಗಲೇ ಸ್ಪೋಟಕ ಬಳಕೆಯಾಗುತ್ತಿದೆ .ಇಲ್ಲಿ 3ಟ್ರ್ಯಾಕ್ಟರ್ ಗಳು ಕುಾಳಿ ಹೊಡೆಯುತ್ತಿವೆ ಇದರಿಂದ ಸ್ಪೋಟಕಗಳನ್ನು ಕುಾಳಿಗಳಿಗೆ ತುಂಬಿ ಸಿಡಿಸುತ್ತಾರೆ .ಮೊದಲು ಪೊಲೀಸ್ ಅಧಿಕಾರಿಗಳು ಈ ಟ್ರ್ಯಾಕ್ಟರ್ ಗಳನ್ನು ವಶಪಡಿಸಿಕೊಳ್ಳಲಿ .ಭಾರೀ ಪ್ರಮಾಣದ ಸ್ಫೋಟಕ ಎಲ್ಲಿಂದ ಬರುತ್ತದೆ ಎಂಬ ಮೂಲವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿಲಿ.ಇಂದು ಸಹ ಆಶ್ರಯ ಬಡಾವಣೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕುಂಬಾರ ದಡಿಗೆ ಅಕ್ರಮ ಕಲ್ಲು ಕೆಲಸವೂ ನಡೆಯುತ್ತಿತ್ತು ಬೆಳಿಗ್ಗೆ ನಾಲ್ಕರಿಂದ 5ಗಂಟೆಗೆ ಸ್ಪೋಟಕವನ್ನು ಸಿಡಿಸಿರುತ್ತಾರೆ ಎಂದು ಪತ್ರಿಕೆಗೆ ಮಾಹಿತಿ ಇದೆ.

ಖುದ್ದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಲಿ :

.ಖುದ್ದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ಆಶ್ರಯ ಬಡಾವಣೆ ಮತ್ತು ನೆಲ್ಲಕ್ಕುರುಳಿ ಗ್ರಾಮದ ಸರ್ವೆ ನಂಬರ್ 75 ರ ಕುಂಬಾರ ದಡಿಗೆ ಯಲ್ಲಿ ನಡೆಯುತ್ತಿರುವ 8-10ಎಕರೆಯಲ್ಲಿ ಅಕ್ರಮ ಕಲ್ಲು ಗಣಿಯನ್ನು ಪರಿಶೀಲನೆ ಮಾಡಿ ತಕ್ಷಣದಿಂದ ನಿಲ್ಲಿಸುವಂತೆ ಮಾಡಲಿ.ಹಾಗೂ ಆಶ್ರಯ ಬಡಾವಣೆಯ ಒಳಗೆ ನಡೆಯುತ್ತಿರುವ ಬಹುದೊಡ್ಡ ಅಕ್ರಮ ಕಲ್ಲು ಗಣಿಗಾರಿಕೆಯನ್ನು ನಿಲ್ಲಿಸಲಿ ಎಂದು ನ್ಯೂಸ್ ವಾರಿಯರ್ಸ್ ಪತ್ರಿಕೆಯ ಒತ್ತಾಯವಾಗಿದೆ…

ಇದು ಪ್ರಾರಂಭ ಅಷ್ಟೇ ಅಂತ್ಯವಲ್ಲ ನ್ಯೂಸ್ ವಾರಿಯರ್ಸ್ ಪತ್ರಿಕೆಯ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಬಂಡೆಯಲ್ಲಿ ನಡೆಯುವ ಸಮಗ್ರ ಮಾಹಿತಿಯು ಪತ್ರಿಕೆ ಲಭ್ಯವಾಗುತ್ತದೆ. ಅದನ್ನು ಜನರ ಮುಂದೆ ಹಾಗೂ ಅಧಿಕಾರಿಗಳ ಮುಂದೆ ಸಮಗ್ರ ವರದಿಯ ಮೂಲಕ ತೆರೆದಿಡಲಾಗುವುದು…ಹಾಗೂ ನ್ಯಾಯಾಲಯದ ಹಾಗೂ ಲೋಕಾಯುಕ್ತದ ಆದೇಶವನ್ನು ಉಲ್ಲಂಘನೆ ಮಾಡಿರುವುದನ್ನು ಪ್ರಶ್ನಿಸಿ ಮತ್ತೆ ನ್ಯಾಯಾಲಯದ ಮರೆಹೋಗಲಾಗುವುದು… ಎಚ್ಚರ.. ಎಚ್ಚರ…

ರಘುರಾಜ್ ಹೆಚ್.ಕೆ…9449553305…

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...