Home ರಾಜ್ಯ“ಆಶ್ರಯ ನಿವೇಶನ” ಗಳನ್ನು ರದ್ದುಗೊಳಿಸಿದ ಶಿವಮೊಗ್ಗ ಮಹಾನಗರ ಪಾಲಿಕೆ..!! ಕಾರಣವೇನು..?!

“ಆಶ್ರಯ ನಿವೇಶನ” ಗಳನ್ನು ರದ್ದುಗೊಳಿಸಿದ ಶಿವಮೊಗ್ಗ ಮಹಾನಗರ ಪಾಲಿಕೆ..!! ಕಾರಣವೇನು..?!

by EDITOR NEWS WARRIORS
0 comments



ಶಿವಮೊಗ್ಗ: ಮಹಾನಗರಪಾಲಿಕೆಯ ಆಶ್ರಯ ಯೋಜನೆಯಡಿ, ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ 1997 ನೇ ಸಾಲಿನಲ್ಲಿ ‘ಎ’ ಇಂದ ‘ಜಿ’ ಬ್ಲಾಕ್‍ವರೆಗೆ ನಿವೇಶನರಹಿತರಿಗೆ ನಿವೇಶನ ಹಂಚಲಾಗಿದ್ದು, ಫಲಾನುಭವಿಗಳು 20 ವರ್ಷಗಳಾದರೂ ಸಹ ಮನೆ ನಿರ್ಮಿಸಿಕೊಂಡು ವಾಸವಿರುವುದಿಲ್ಲ. ಆದ ಕಾರಣ ಆಶ್ರಯ ಸಮಿತಿ ಸಭೆ ನಡೆಸಿ, ಖಾಲಿ ಇರುವ ನಿವೇಶನಗಳ ಮಹಜರ್(ಸ್ಥಳ ಪರಿಶೀಲನಾ ವರದಿ) ಪಡೆದು, 543 ಖಾಲಿ ನಿವೇಶನಗಳನ್ನು ರದ್ದುಪಡಿಸಲಾಗಿರುತ್ತದೆ.


ಎ ಬ್ಲಾಕ್‍ನಲ್ಲಿರುವ ಒಟ್ಟು 44 ನಿವೇಶನಗಳು, ಬಿ ಬ್ಲಾಕ್‍ನಲ್ಲಿ 78, ಸಿ ಬ್ಲಾಕ್‍ನಲ್ಲಿ 97 ನಿವೇಶನಗಳು, ಡಿ ಬ್ಲಾಕ್‍ನಲ್ಲಿ 78, ಇ ಬ್ಲಾಕ್‍ನಲ್ಲಿ 51, ಎಫ್ ಬ್ಲಾಕ್‍ನಲ್ಲಿ 107 ಮತ್ತು ಜಿ ಬ್ಲಾಕ್‍ನಲ್ಲಿ 88 ಸೇರಿ ಒಟ್ಟು 543 ನಿವೇಶನಗಳು ಖಾಲಿ ಇರುತ್ತವೆ.
ನಿವೇಶನಗಳನ್ನು ಪಡೆದ ಫಲಾನುಭವಿಗಳು ನಿವೇಶನದಲ್ಲಿ ಮನೆ ನಿರ್ಮಾಣ ಮಾಡದೇ ಖಾಲಿ ಇರುವುದರಿಂದ ನಿವೇಶನದಾರರು ಹಕ್ಕುಪತ್ರದ ಹಿಂದೆ ಇರುವ ಷರತ್ತನ್ನು ಉಲ್ಲಂಘಿಸಿದ್ದು ಹಾಗೂ ತಮಗೆ ಮಂಜೂರಾಗಿರುವ ನಿವೇಶನಗಳಲ್ಲಿ ವಾಸಕ್ಕೆ ಹೋಗದೆ ತಾವುಗಳು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳದೆ ಇರುವುದು ಕಂಡು ಬಂದಿರುತ್ತದೆ. ಇಂತಹ ನಿವೇಶನಗಳ ಬಗ್ಗೆ ದಿನಾಂಕ: 25-05-2022 ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ಬಂದಿದ್ದ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲಾಗಿರುತ್ತದೆ.

ದಿನಾಂಕ : 10-08-2022 ರ ಆಶ್ರಯ ಸಭೆಯ ವಿಷಯ ಸಂಖ್ಯೆ 7/1 ರಲ್ಲಿ ತೀರ್ಮಾನಿಸಿರುವಂತೆ ಮನೆ ನಿರ್ಮಿಸಿಕೊಳ್ಳದ ಒಟ್ಟು 543 ಖಾಲಿ ನಿವೇಶನಗಳನ್ನು ರದ್ದು ಮಾಡಲಾಗಿರುತ್ತದೆ ಎಂಬುದನ್ನು ಈ ಸಾರ್ವಜನಿಕ ಪ್ರಕಟಣೆ ಮೂಲಕ ತಿಳಿಯಪಡಿಸಿದೆ ಎಂದು ಮಹಾನಗರಪಾಲಿಕೆ ಆಯುಕ್ತರು ತಿಳಿಸಿದ್ದಾರೆ…

ರಘುರಾಜ್ ಹೆಚ್.ಕೆ…9449553305….

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...