
ತೀರ್ಥಹಳ್ಳಿ : ಪಟ್ಟಣದ ಮೇಲಿನ ಕುರುವಳ್ಳಿ ಬಂಡೆಯಲ್ಲಿ ಇಂದು ಬೆಳಗಿನ ಜಾವ 4ಗಂಟೆಯಿಂದ 5ಗಂಟೆಯವರೆಗೆ ತೀರ್ಥಹಳ್ಳಿಯಲ್ಲಿ ಪಟ್ಟಣಕ್ಕೆ ಹೊಂದಿಕೊಂಡಿರುವ ಬುಕ್ಲಾಪುರ ಗ್ರಾಮದ ಸರ್ವೆ ನಂಬರ್ 64ರ ಕಲ್ಲು ಬಂಡೆಯಲ್ಲಿ ಸಿಡಿಸಿದ ಭಾರೀ ಸ್ಫೋಟಕಗಳ ಬಗ್ಗೆ ವಿಶೇಷ ತಂಡದಿಂದ ತನಿಖೆ ಮಾಡಿಸಿ ಮತ್ತು ಸ್ಫೋಟಕ ಎಲ್ಲಿಂದ ಬಂತು ಎಂದು ಬಯಲಿಗೆ ತರಲಿ.ತೀರ್ಥಹಳ್ಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ಬುಕ್ಲಾಪುರ ಗ್ರಾಮದ ಸರ್ವೆ ನಂಬರ್ 64 .ಸುತ್ತಲೂ ನೂರಾರು ವಾಸದ ಮನೆಗಳು ಹತ್ತಿರದಲ್ಲೇ ಇದೆ. ಸುಮಾರು ಇನ್ನೂರು ಪಟ್ಟಣ ಪಂಚಾಯಿತಿ ಆಶ್ರಯ ಮನೆಗಳು ಇರುವಂಥ ಪ್ರದೇಶ .ಇಲ್ಲಿ ನಿರಂತರವಾಗಿ ಸ್ಪೋಟಕ ಬಳಕೆಯಾಗುತ್ತದೆ .ಇಂದು ಬೆಳಗ್ಗಿನ ಜಾವ 4ಗಂಟೆಯಿಂದ 5ಗಂಟೆಯವರೆಗೆ ಭಾರೀ ಪ್ರಮಾಣದ ಸ್ಫೋಟಕಗಳನ್ನು ಸಿಡಿಸಿದ್ದಾರೆ .ಬೆಳಿಗ್ಗಿನ ಜಾವ ಜನರೆಲ್ಲ ನಿದ್ರೆಯಲ್ಲಿ ಹೋಗಿರುತ್ತಾರೆ .ಚಿಕ್ಕಮಕ್ಕಳು ಮಲಗಿರುತ್ತಾರೆ ಅಂಥ ಸಮಯದಲ್ಲಿ ಏಕಾಏಕಿ ಭಾರೀ ಶಬ್ದ ಕಂಪನ ಆದರೆ ಹೇಗಿರಬೇಡ .ಆದರೆ ಜನರು ಇದನ್ನು ಸಹಿಸಿಕೊಂಡಿದ್ದಾರೆ .ಜೀವ ಭಯದಿಂದ ಬದುಕುವಂಥ ಸ್ಥಿತಿ ಇಲ್ಲಿದೆ .
3 ಎಕರೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ :
ನಿರಂತರವಾಗಿ ಮೂರು ಎಕರೆ ಪ್ರದೇಶದಲ್ಲಿ ಸುಬ್ರಹ್ಮಣ್ಯನ ಕೃಪಾಕಟಾಕ್ಷದಿಂದ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು. ಇದರಿಂದ ಸ್ಥಳೀಯರಿಗೆ ತುಂಬಾ ತೊಂದರೆಯಾಗುತ್ತಿದ್ದು ದಕ್ಷ ಪ್ರಾಮಾಣಿಕ ಅಧಿಕಾರಿಯಾದ ಜಿಲ್ಲಾ ರಕ್ಷಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು… ಜಿಲ್ಲಾ ರಕ್ಷಣಾಧಿಕಾರಿಗಳೇ ಇಲ್ಲಿ ಸ್ಪೋಟಕ ಬಳಸಲು ಒಂದು ಕೋಡ್ ವರ್ಡನ್ನು ಬಳಸುತ್ತಾರೆ ಅದೇನೆಂದರೆ ಸ್ಪೋಟಕಕ್ಕೆ “ಬತ್ತಿ ತಾಯ್ತಾ, ದಾರ ” ಎಂದು ಇದು ಪೊಲೀಸರ ಕಣ್ತಪ್ಪಿಸಲು ಬಂಡೆಯಲ್ಲಿ ಬಳಸುವ ಕೋಡ್ ವರ್ಡ್ ತೀರ್ಥಹಳ್ಳಿಯ ಕುರುವಳ್ಳಿ ಬಂಡೆಯಲ್ಲಿ ಕೆಲವರ ಹೆಸರು ಮಾತ್ರ ಮುಂಚೂಣಿಗೆ ಬರುತ್ತಿದೆ. ಕೆಲವರು ಮಾತ್ರ ಮೌನವಾಗಿ ತಮ್ಮ ಅಕ್ರಮ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ.. ಆಕ್ರಮವಾಗಿ ಕೋಟಿ ಕೋಟಿ ಗಳಿಸಿಕೊಂಡಿದ್ದಾರೆ… ಅವೆಲ್ಲವೂ ಬಯಲಿಗೆ ಬರುತ್ತದೆ… ರಿವರ್ಸ್ ಸುಬ್ರಹ್ಮಣ್ಯನ ಪಾತ್ರವೂ ಕೂಡ… ವೆರಿ ಇಂಟರೆಸ್ಟಿಂಗ್ ಕ್ಯಾರೆಕ್ಟರ್ ರಿವರ್ಸ್ ಸುಬ್ರಮಣ್ಯ… ಜಿಲ್ಲೆಯ ದಕ್ಷ ರಕ್ಷಣಾಧಿಕಾರಿಗಳೇ ಪೊಲೀಸ್ ಇಲಾಖೆಯ ಅಧಿಕಾರಿಗಳೇ ಸ್ಪೋಟಕದ ವಿರುದ್ಧ ಕ್ರಮ ತೆಗೆದುಕೊಳ್ಳಿ ಸ್ಥಳೀಯರ ನೊಂದ ಜನರ ಧ್ವನಿಯಾಗಿ… ಸುಬ್ರಹ್ಮಣ್ಯನ ಕೃಪಾಕಟಾಕ್ಷದಿಂದ ಪಾರು ಮಾಡಿ… ಇಲ್ಲವಾದಲ್ಲಿ ನಿರಂತರವಾಗಿ ಪತ್ರಿಕೆ ಸಾಕ್ಷಿ ಸಮೇತ ವರದಿ ಪ್ರಕಟಿಸುತ್ತದೆ… ಮೇಲಿನ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ… ಎಚ್ಚರ.. ಎಚ್ಚರ… ಎಚ್ಚರ…
ರಘುರಾಜ್ ಹೆಚ್.ಕೆ…9449553305….


1 comment
Elevate your look at MenSpire Singapore—the best barber crafting precision styles in a chic, modern space. Expect top-tier service and sharp results every time.