Home ರಾಜ್ಯTHIRTHALLI BREAKING:: ಮೇಲಿನ ಕುರುವಳ್ಳಿ ಬಂಡೆಯಲ್ಲಿ “ಸ್ಪೋಟಕ” ಬಳಸಿ ಅಕ್ರಮ ಕಲ್ಲು ಗಣಿಗಾರಿಕೆ..!! ತಡೆಯಲು ಹೋದ ಅಧಿಕಾರಿಗಳ ಮೇಲೆ “ದಬ್ಬಾಳಿಕೆ”..?!! ಪ್ರಾಮಾಣಿಕ ರಾಜಕಾರಣಿ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರಿಗೆ ಇಲ್ಲಿ ನಡೆಯುತ್ತಿರುವ ಆಕ್ರಮದ ಬಗ್ಗೆ ಮಾಹಿತಿ ಇಲ್ಲವೇ..?!!

THIRTHALLI BREAKING:: ಮೇಲಿನ ಕುರುವಳ್ಳಿ ಬಂಡೆಯಲ್ಲಿ “ಸ್ಪೋಟಕ” ಬಳಸಿ ಅಕ್ರಮ ಕಲ್ಲು ಗಣಿಗಾರಿಕೆ..!! ತಡೆಯಲು ಹೋದ ಅಧಿಕಾರಿಗಳ ಮೇಲೆ “ದಬ್ಬಾಳಿಕೆ”..?!! ಪ್ರಾಮಾಣಿಕ ರಾಜಕಾರಣಿ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರಿಗೆ ಇಲ್ಲಿ ನಡೆಯುತ್ತಿರುವ ಆಕ್ರಮದ ಬಗ್ಗೆ ಮಾಹಿತಿ ಇಲ್ಲವೇ..?!!

by EDITOR NEWS WARRIORS
0 comments

ತೀರ್ಥಹಳ್ಳಿ :: ಮೇಲಿನ ಕುರುವಳ್ಳಿ ಬಂಡೆಯ ಸರ್ವೇ ನಂಬರ್ 75, 38 ,64 ,ರಲ್ಲಿ ನಿರಂತರವಾಗಿ ಸ್ಪೋಟಕ ಬಳಸಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು. ಮಾಧ್ಯಮಗಳು ನಿರಂತರವಾಗಿ ಇವರ ವಿರುದ್ಧ ವರದಿ ಮಾಡುತ್ತಿದ್ದವು ಇದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿ ಉನ್ನತ ಹಂತದ ಅಧಿಕಾರಿಗಳ ಗಮನಕ್ಕೂ ಹೋಗಿತ್ತು.

ನಿನ್ನೆ ಶಿವಮೊಗ್ಗ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅಧಿಕಾರಿಗಳು, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡದಿಂದ ದಿಢೀರ್ ದಾಳಿ ::

ನಿನ್ನೆ ಅಂದರೆ 11/ 10/ 2022 ರಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಅಧಿಕಾರಿಗಳನ್ನು ಒಳಗೊಂಡ ತಂಡದಿಂದ ಸ್ಪೋಟಕ ಬಳಸಿ ಅಕ್ರಮ ಮಾಡುತ್ತಿದ್ದ ಬಂಡೆಗೆ ದಿಢೀರ್ ದಾಳಿ ನಡೆಸಿದ್ದು. ಇಲ್ಲಿ ನಡೆಯುತ್ತಿರುವ ಅಕ್ರಮ ಕಣ್ಣಾರೆ ಕಂಡ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ವಿಂಧ್ಯಾ ಅವರು ಕೂಡಲೆ ಈ ಅಕ್ರಮವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು.

ಅಂತಹ ಸ್ಥಳಕ್ಕೆ ವೆಹಿಕಲ್ ಗಳು ಹೋಗದಂತೆ ಟ್ರಂಚ್ ಹೊಡಿಸಲು ಮುಂದಾದರು ::

ಅಕ್ರಮಗಳನ್ನು ಕಣ್ಣಾರೆ ಕಂಡ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ವಿಂದ್ಯಾ ಮತ್ತು ಅವರನ್ನು ಒಳಗೊಂಡ ತಂಡ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆ ಅಕ್ರಮಗಳನ್ನು ಮಾಡಲು ವೆಹಿಕಲ್ ಗಳು ಹೋಗದಂತೆ ತಡೆಗಟ್ಟುವ ಸಲುವಾಗಿ ಟ್ರಂಚ್ ಹೊಡೆಸಲು ಶುರು ಮಾಡಿದರು.

ಇಂದು ಅದೇ ಕೆಲಸವನ್ನು ಮುಂದುವರಿಸಲು ಶುರು ಮಾಡಿದರು :

ಇಂದು ಕೂಡ ಸ್ಥಳಕ್ಕೆ ಭೇಟಿ ನೀಡಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ವಿಜ್ಞಾನಿ ವಿಂದ್ಯಾ ಅವರನ್ನು ಒಳಗೊಂಡ ತಂಡದಿಂದ ಮತ್ತೆ ಪರಿಶೀಲನೆ ಮಾಡಲು ಶುರು ಮಾಡಿದರು…

ಅಧಿಕಾರಿಗಳ ಕಾರ್ಯಕ್ಕೆ ಅಡ್ಡಿಪಡಿಸಿದ ಬಂಡೆ ಮಾಫಿಯಾ ದ ಕಾಣದ ಕೈಗಳು :

ಅಧಿಕಾರಿಗಳಿಗೆ ಧಿಕ್ಕಾರವನ್ನು ಕೂಗುತ್ತಾ ಅಧಿಕಾರಿಗಳು ನ್ಯಾಯಯುತವಾಗಿ ಮಾಡುತ್ತಿರುವ ಕಾರ್ಯಕ್ಕೆ ಅಡ್ಡಿಪಡಿಸಲು ಪ್ರಯತ್ನಪಟ್ಟು ಅವರ ಜಿಪಿಗೆ ಮುತ್ತಿಗೆ ಹಾಕಿ ಅವರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸುತ್ತಾ ಅವರ ಕಾರ್ಯವೈಖರಿಗೆ ತಡೆಗಟ್ಟಲು ಆರಂಭಿಸಿದರು..

ಪ್ರಾಮಾಣಿಕ ರಾಜಕಾರಣಿ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರಿಗೆ ಇಲ್ಲಿ ನಡೆಯುತ್ತಿರುವ ಆಕ್ರಮದ ಬಗ್ಗೆ ಮಾಹಿತಿ ಇಲ್ಲವೇ..?!!

ರಾಜ್ಯ ರಾಜಕೀಯದಲ್ಲಿ ತನ್ನದೇ ಆದ ಹೆಸರು ಉಳಿಸಿಕೊಂಡು ಸೌಮ್ಯ ಸ್ವಭಾವದ ಭ್ರಷ್ಟರಲ್ಲದ ರಾಜಕಾರಣಿಗಳ ಪಟ್ಟಿಯಲ್ಲಿರುವ ಮಾಜಿ ಸಚಿವರು ಮಾಜಿ ಶಾಸಕರು ಆದ ಕಿಮ್ಮನೆ ರತ್ನಾಕರ್ ಅವರಿಗೆ ತೀರ್ಥಹಳ್ಳಿ ಮೇಲಿನ ಕುರವಳ್ಳಿ ಬಂಡೆಯಲ್ಲಿ ಸ್ಪೋಟಕ ಬಳಸಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ಮಾಹಿತಿ ಇಲ್ಲ… ಭವಿಷ್ಯ ಇದ್ದಿದ್ದರೆ ಅವರು ಎಂದಿಗೂ ಇಂಥವರಿಗೆ ಬೆಂಬಲ ನೀಡುತ್ತಿರಲಿಲ್ಲ… ಪ್ರಾಮಾಣಿಕ ರಾಜಕಾರಣಿಗಳಲ್ಲಿ ಒಬ್ಬರಾದ ಕಿಮ್ಮನೆ ರತ್ನಾಕರ್ ಅವರು ಒಂದು ಸಲ ಇಲ್ಲಿ ಗಣಿಗಾರಿಕೆ ನಡೆಸುತ್ತಿರುವ ಲಿಸ್ಟ್ ಅನ್ನು ತರಿಸಿಕೊಂಡು ನೋಡಲಿ ಅವರ ಕೋಟಿಗಟ್ಟಲೆ ಬೆಳೆಬಾಳುವ ಮನೆಗಳು, ಲಕ್ಷಾಂತರ ಬೆಳೆಬಾಳುವ ಕಾರುಗಳಲ್ಲಿ ಓಡಾಟ, ಕೋಟ್ಯಾಂತರರು ವ್ಯವಹಾರ, ತೀರ್ಥಹಳ್ಳಿಯ ಪುಟ್ಟ ಪಟ್ಟಣದಿಂದ ತಮಿಳುನಾಡಿನಲ್ಲಿ ಕೋಟಿಗಟ್ಟಲೆ ವ್ಯವಹಾರ, ಕೆಜಿ ,ಕೆಜಿ, ಬಂಗಾರ, ಒಬ್ಬೊಬ್ಬರ ಮನೆಯಲ್ಲಿ 150, 200 ಜನ ಕೂರಲು ವ್ಯವಸ್ಥೆ ಇರುವ ಕೋಟ್ಯಾಂತರ ಬೆಳೆಬಾಳುವ ಮನೆಗಳು ಇವೆಲ್ಲವೂ ಒಬ್ಬ ಬಡ ಕಲ್ಲು ಕಾರ್ಮಿಕನಿಂದ ಮಾಡಲು ಸಾಧ್ಯವೇ ಸರ್..?!!

ಅಕ್ರಮಕ್ಕೆ ಬ್ರೇಕ್ ಹಾಕಿ, ಅಧಿಕಾರಿಗಳಿಗೆ ಬೆಂಬಲಿಸಿ, ಸರ್ಕಾರಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸಿ :

ಬಂಡೆಯಲ್ಲಿ ಕಾರ್ಮಿಕರ ಹೆಸರು ಹೇಳಿಕೊಂಡು ಸ್ಪೋಟಕ ಬಳಸಿ ಕೋಟಿಗಟ್ಟಲೆ ಲೂಟಿ ಮಾಡುತ್ತಿರುವುದನ್ನು ತಪ್ಪಿಸಿ ಇದನ್ನು ನಿಯಂತ್ರಿಸಲು ಬರುವ ಅಧಿಕಾರಿಗಳನ್ನು ಬೆಂಬಲಿಸಿ ಸರ್ಕಾರಕ್ಕೆ ಇವರಿಂದ ಆಗುತ್ತಿರುವ ಕೋಟಿಗಟ್ಟಲೆ ನಷ್ಟವನ್ನು ತಪ್ಪಿಸಿ…

ಪತ್ರಿಕೆ ತಂಡದ ಹೋರಾಟ ಇಂಥವರ ವಿರುದ್ಧ ನಿರಂತರವಾಗಿ ಇರುತ್ತದೆ ಎಚ್ಚರ..

ರಘುರಾಜ್ ಹೆಚ್.ಕೆ…9449553305….

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...