Home ರಾಜ್ಯಮಾನವೀಯತೆ ಮೆರೆದ ಸಾಗರ ಪೋಲಿಸರು..!!

ಮಾನವೀಯತೆ ಮೆರೆದ ಸಾಗರ ಪೋಲಿಸರು..!!

by EDITOR NEWS WARRIORS
0 comments

ಪೊಲೀಸರೆಂದರೆ ಸಾಕು ಅವರಿಗೆ ಮಾನವೀಯತೆ ಇಲ್ಲ ಎನ್ನುವುದು ಸರಿಸುಮಾರು ಎಲ್ಲರಿಂದಲೂ ಕೇಳಿ ಬರೋ ಮಾತು. ಇಲ್ಲಿನ ಪೊಲೀಸ್ ಠಾಣೆಯೊಂದರಲ್ಲಿ ಎಲ್ಲರೂ ಅಚ್ಚರಿ ಪಡೋ ಘಟನೆ ನಡೆದಿದೆ, ಆದರೆ ಪೊಲೀಸ್ ಠಾಣೆಗಳಲ್ಲಿ ಇವೆಲ್ಲ ಸಾಧ್ಯನಾ ಎನ್ನುವುದಕ್ಕೆ ಇಲ್ಲಿದೆ ಉದಾಹರಣೆ.

???? ಠಾಣೆಯ ಸಿಬ್ಬಂದಿಯೊಬ್ಬರಿಗೆ ಸೀಮಂತ ನೆರವೇರಿಸಿದ ಪೊಲೀಸರು..

???? ಪೊಲೀಸ್‌ ಠಾಣೆಯಲ್ಲೇ ಕಾರ್ಯಕ್ರಮ ಮಾಡಲು ನಿರ್ಧಾರ..

???? ಸದಾ ಜಂಜಾಟದಲ್ಲೇ ಮುಳುಗಿರುವ ಪೊಲೀಸರಿಗೆ ಅಲ್ಪ ಬಿಡುವು..

ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರ ಪೇಟೆ ಪೊಲೀಸ್ ಠಾಣೆ ಮಹಿಳಾ ಸಿಬ್ಬಂದಿ ಶ್ರೀಮತಿ ಶಿಲ್ಪಾ ತುಂಬು ಗರ್ಭಿಣಿ. ಇವರಿಗೆ ಸೀಮಂತ ಕಾರ್ಯಕ್ರಮವನ್ನು ಠಾಣೆಯಲ್ಲೇ ಮಾಡುವ ನಿರ್ಧಾರ ಅಲ್ಲಿಯ ಇತರೆ ಮಹಿಳಾ ಪೊಲೀಸರು, ಸಿಬ್ಬಂದಿಯದ್ದು. ಇದಕ್ಕೆ ಠಾಣೆ ಇನ್ಸ್‌ಪೆಕ್ಟರ್‌ ಸೀತಾರಾಮ್ ಸಮ್ಮತಿಸಿ, ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಹೀಗಾಗಿ ಸೋಮವಾರ ಶಿಲ್ಪಾ ಅವರ ಸೀಮಂತ ಕಾರ್ಯಕ್ರಮ ಸಂಭ್ರಮ ಸಡಗರದಿಂದ ನೆರವೇರಿತು.

ಸದಾ ಜಂಜಾಟದಲ್ಲೇ ಮುಳುಗಿರುವ ಪೊಲೀಸರು ತಮ್ಮ ಠಾಣೆಯಲ್ಲಿ ಸೀಮಂತ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ. ತಮ್ಮ ನೆಚ್ಚಿನ ಸಿಬ್ಬಂದಿಗೆ ಸಿಹಿ ಸೇರಿದಂತೆ ನಾನಾ ಬಗೆಯ ಸೀಮಂತದ ಉಡುಗೊರೆಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಎ.ಎಸ್.ಐ ಪರಶುರಾಮ್, ಸಿಬ್ಬಂದಿಗಳಾದ ರತ್ನಾಕರ, ಯೋಗೇಶ್ , ಪ್ರವೀಣ್, ಶ್ರೀಧರ್, ಶಂಕರ್, ಗಣಪತಿ ಸೇರಿದಂತೆ ಅನೇಕರು ಹಾಜರಿದ್ದರು.

ಓಂಕಾರ ಎಸ್. ವಿ. ತಾಳಗುಪ್ಪ….

Related Articles

Leave a Comment

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...