Home ರಾಜ್ಯTHIRTHALLI BREAKING: ಆಗುಂಬೆ ಹೋಬಳಿಯ ಬಿದರಗೋಡು ಪೇಟೆಯ ಹತ್ತಿರ ಬಾಂಬೆ ಡಾಕಮ್ಮನ ತೋಟದ ಬಾವಿಯಲ್ಲಿ ಶವ ಪತ್ತೆ ..!! ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಆರೋಪಿ ಆಕೆಯನ್ನು ಕೊಲೆ ಮಾಡಲು ಕಾರಣವೇನು ಗೊತ್ತಾ..?!

THIRTHALLI BREAKING: ಆಗುಂಬೆ ಹೋಬಳಿಯ ಬಿದರಗೋಡು ಪೇಟೆಯ ಹತ್ತಿರ ಬಾಂಬೆ ಡಾಕಮ್ಮನ ತೋಟದ ಬಾವಿಯಲ್ಲಿ ಶವ ಪತ್ತೆ ..!! ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಆರೋಪಿ ಆಕೆಯನ್ನು ಕೊಲೆ ಮಾಡಲು ಕಾರಣವೇನು ಗೊತ್ತಾ..?!

by EDITOR NEWS WARRIORS
0 comments

ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಹೋಬಳಿಯ ಬಿದರಗೋಡು ಪೇಟೆಯ ಹತ್ತಿರ ಬಾಂಬೆ ಡಾಕಮ್ಮನ ತೋಟದ ಬಾವಿಯಲ್ಲಿ ನಿನ್ನೆ ಶವ ಒಂದು ಪತ್ತೆಯಾಗಿದ್ದು. ನಂತರ ಈ ಪ್ರಕರಣವನ್ನು ಬೆನ್ನತ್ತಿದ ಪೊಲೀಸರಿಗೆ ಕೊಲೆ ಮಾಡಿ ಶವವನ್ನು ತೋಟದ ಬಾವಿಯಲ್ಲಿ ಹಾಕಿದ ಸುಮಾರು 40 ವರ್ಷ ಪ್ರಾಯದ ರಾಜಪ್ಪ ಆಲಿಯಾಸ್ ರಾಜು ನನ್ನು ಬಂಧಿಸಿ ವಿಚಾರಣೆ ಒಳಪಡಿಸಿದಾಗ ಇದು ಆತ ಹಣಕ್ಕೋಸ್ಕರ ಮಾಡಿದ ಕೊಲೆ ಅಲ್ಲ… ಬದಲಿಗೆ ಕೊಲೆಯಾದ 45 ವರ್ಷದ ಪಾರ್ವತಮ್ಮನನ್ನು ಉಳಿದ ಕೂಲಿ ಕಾರ್ಮಿಕರೆಲ್ಲ ಗೊಬ್ಬರವನ್ನು ತರಲು ಹೊರಗೆ ಹೋಗಿದ್ದಾಗ ಆಕೆ ಒಬ್ಬಳೇ ಇದ್ದಾಗ ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದಾನೆ… ಆಕೆ ಇದಕ್ಕೆ ಒಪ್ಪದಿದ್ದಾಗ ಆಕೆಗೆ ಗುದ್ದಲಿಯ ಹಿಂಭಾಗದಿಂದ ತಲೆಗೆ ಹೊಡೆದಿದ್ದಾನೆ.. ನಂತರ ಆಕೆ ಸತ್ತಿದ್ದನ್ನು ಕನ್ಫರ್ಮ್ ಮಾಡಿಕೊಂಡು ಅಲ್ಲೇ ಇದ್ದ ಡ್ರಿಪ್ಪಿಂಗ್ ಪೈಪ್ ನಲ್ಲಿ ಎಳೆದುಕೊಂಡು ಹೋಗಿ ತೋಟದ ಬಾವಿಗೆ ಹಾಕಿ ಪರಾರಿಯಾಗಿದ್ದಾನೆ… ಈ ಘಟನೆ ನಿನ್ನೆ ಅಂದರೆ 18 /12/2022ರ ಬೆಳಿಗ್ಗೆ 10.30 ರ ಸುಮಾರಿಗೆ ನಡೆದಿದೆ… ನಂತರ ಆರೋಪಿ ರಾಜಪ್ಪ ಚೆನ್ನಾಗಿ ಕುಡಿದು ಪರಾರಿ ಯಾಗಲು ಯತ್ನಿಸುತ್ತಿದ್ದಾಗ ಪೊಲೀಸರು ಆತನನ್ನು ಹಿಡಿದಿದ್ದಾರೆ… ನಂತರ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ ಸತ್ಯ ಬಾಯ್ಬಿಟ್ಟಿದ್ದಾನೆ… ಮೂಲತಃ ರಾಜಪ್ಪ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಬೂದಿಪುರ ಗ್ರಾಮದ ಚಿತ್ರಹಳ್ಳಿ ಊರಿನವನು… ಕೊಲೆಯಾದ ದುರ್ದೈವಿ ಪಾರ್ವತಮ್ಮ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕು ನೆರಳಕಟ್ಟೆ ಗ್ರಾಮದ ಶಿವಗಂಗಾ ಹತ್ತಿರದವಳು… ಮೃತ ಪಾರ್ವತಮ್ಮನ ಗಂಡ ಬಿಟ್ಟಿದ್ದಾನೆ ಬೇರೆ ಮದುವೆಯಾಗಿದ್ದಾನೆ.. ಆಕೆಗೆ ಇಬ್ಬರು ಮಕ್ಕಳಿದ್ದಾರೆ… ಈಕೆಯನ್ನು ಕೊಲೆ ಮಾಡಿರುವ ರಾಜಪ್ಪನಿಗೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ… ಈತನ ಹೆಂಡತಿ ಕೂಡ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಸಮೀಪ ಕೆಲಸ ಮಾಡುತ್ತಿದ್ದಾಳೆ…

ನಿನ್ನೆ ಸ್ಥಳೀಯರು ಸುತ್ತಮುತ್ತಲಿನವರು ಇದು ಹಣಕ್ಕೋಸ್ಕರ ನಡೆದ ಕೊಲೆ ಎಂದು ಮಾತನಾಡಿಕೊಳ್ಳುತ್ತಿದ್ದರು… ಆದರೆ ಪತ್ರಿಕೆ ಹಣಕ್ಕೋಸ್ಕರ ಆದ ಕೊಲೆನಾ ..?ಅಥವಾ ಇನ್ಯಾವುದಾದರೂ ಬೇರೆ ಉದ್ದೇಶ ಇತ್ತಾ..?! ಎಂದು ಅನುಮಾನ ವ್ಯಕ್ತಪಡಿಸಿತ್ತು..‌ ಆ ಅನುಮಾನ ಈಗ ನಿಜವಾಗಿದ್ದು.. ಮೃತ ಪಾರ್ವತಮ್ಮನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದಾಗ ಆಕೆ ಒಪ್ಪದಿದ್ದಾಗ ಈತ ಆಕೆಯನ್ನು ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿರುವುದರಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.. ಗಮನಿಸಬೇಕಾದ ಸಂಗತಿ ಎಂದರೆ ಮಲೆನಾಡಿಗೆ ಬರುವ ಈ ಕಾರ್ಮಿಕರು ಬಹುತೇಕ ಎಲ್ಲಾ ಒಂದೇ ಜಿಲ್ಲೆಯವರು ಒಂದೇ ತಾಲೂಕಿನವರು ಆಗಿರುತ್ತಾರೆ. ಇಲ್ಲೂ ಕೂಡ ಮೇಸ್ತ್ರಿ ದುಗ್ಗಪ್ಪನ ಹತ್ತಿರ ಕೆಲಸ ಮಾಡಲು ಬಂದ ಕೂಲಿ ಕಾರ್ಮಿಕರು ಇವರುಗಳು ಆಗಿರುತ್ತಾರೆ…

ರಘುರಾಜ್ ಹೆಚ್.ಕೆ..9449553305…

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...