Home ರಾಜ್ಯ“ಜಾಗೃತಿ ಟ್ರಸ್ಟ್ ಸೇವಾ ಸಂಸ್ಥೆ ” ವತಿಯಿಂದ ಕುವೆಂಪು ಜಯಂತಿ ಅಂಗವಾಗಿ ಬೆಂಗಳೂರಿನಲ್ಲಿ ಏರ್ಪಡಿಸಿರುವ ಸಾಹಿತ್ಯೋತ್ಸವ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಸರ್ವರಿಗೂ ಆದರದ ಸ್ವಾಗತ ಕೋರಿದ ಜಾಗೃತಿ ಟ್ರಸ್ಟ್ ಅಧ್ಯಕ್ಷ ಬಿ ನಾಗೇಶ್..!!

“ಜಾಗೃತಿ ಟ್ರಸ್ಟ್ ಸೇವಾ ಸಂಸ್ಥೆ ” ವತಿಯಿಂದ ಕುವೆಂಪು ಜಯಂತಿ ಅಂಗವಾಗಿ ಬೆಂಗಳೂರಿನಲ್ಲಿ ಏರ್ಪಡಿಸಿರುವ ಸಾಹಿತ್ಯೋತ್ಸವ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಸರ್ವರಿಗೂ ಆದರದ ಸ್ವಾಗತ ಕೋರಿದ ಜಾಗೃತಿ ಟ್ರಸ್ಟ್ ಅಧ್ಯಕ್ಷ ಬಿ ನಾಗೇಶ್..!!

by EDITOR NEWS WARRIORS
1 comment

ಜಾಗೃತಿ ಟ್ರಸ್ಟ್ ಸೇವಾ ಸಂಸ್ಥೆ ಯು ಹಲವು ವರ್ಷಗಳಿಂದ ಕನ್ನಡ ನಾಡು ನುಡಿಗೆ ಸಂಬಂಧಿಸಿದ ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾಡಿನಾದ್ಯಂತ ನಡೆಸಿಕೊಂಡು ಬರುತ್ತಿದೆ. ಹೊರ ರಾಜ್ಯಗಳಲ್ಲೂ ಕೆಲವು ಕಾರ್ಯಕ್ರಮಗಳನ್ನು ನಡೆಸಿದೆ.
ಉದಾ: ತಮಿಳುನಾಡಿನ ಕನ್ಯಾಕುಮಾರಿಯಲ್ಲಿ.
ಇತ್ತೀಚೆಗೆ ಧರ್ಮಸ್ಥಳ,
ಕುವೆಂಪು ಅವರ ಕುಪ್ಪಳ್ಳಿ ಸೇರಿದಂತೆ ಹಲವೆಡೆ ನಡೆದ ವೈವಿಧ್ಯಮಯ ಕಾರ್ಯಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.


ಈ ಬಾರಿ ಜಾಗೃತಿ ಟ್ರಸ್ಟ್ ಮೈಸೂರಿನಲ್ಲಿ ಪುಸ್ತಕ ಬಿಡುಗಡೆ, ನಗೆ ಹಬ್ಬ ಮತ್ತು ಪ್ರಶಸ್ತಿ ವಿತರಣಾ ಸಮಾರಂಭ ಆಯೋಜಿಸಿ ಸಾಧಕ ಮಹಿಳೆಯರಿಗೆ ಕೆಂಪಮ್ಮ ಪುರಸ್ಕಾರವನ್ನು ನೀಡಿದ ಸಂಭ್ರಮವು ಅವಿಸ್ಮರಣೀಯ
ಯುವ ಕವಿಗಳಿಗೆ ವೇದಿಕೆಗಳನ್ನು ಕಲ್ಪಿಸಿ ಕೊಡುವ ಹಾಗೂ ಪ್ರೋತ್ಸಾಹ ನೀಡುವ ಕಾರ್ಯ ಯೋಜನೆಗಳು ಜಾಗೃತಿ ಟ್ರಸ್ಟ್ ನಿಂದ ನಿರಂತರವಾಗಿದೆ
30 -12 – 22 ಶುಕ್ರವಾರ ಕುವೆಂಪು ಜಯಂತಿ ಅಂಗವಾಗಿ
ಏರ್ಪಡಿಸಿರುವ ಸಾಹಿತ್ಯೋತ್ಸವ ಹಾಗೂ ಕವಿ ಗೋಷ್ಠಿ ಕಾರ್ಯಕ್ರಮ ರಾಜ್ಯಮಟ್ಟದಲ್ಲಿ ಅದ್ದೂರಿಯಾಗಿ ನಡೆಯಲಿದೆ ಒಂದು ಗಾಯನ ಹಾಗೂ ಒಂದು ಕವನ ವಾಚನ ನಿರಂತರವಾಗಿ ನಡೆಯುತ್ತಿರುತ್ತದೆ.

ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಎಂಬ ಕುವೆಂಪುರವರ ಕನ್ನಡಾಭಿಮಾನದ ಸಾಲುಗಳಿಗೆ ನಿಮ್ಮ ಗಾಯನ ಹಾಗೂ ನಿಮ್ಮ ಕವನ ವಾಚನಗಳು ಸುಮಧುರ ಮಲ್ಲಿಗೆಯಾಗಿ ಅರಳಿ ಬರಲಿ. ಕವಿ ಕಲ್ಪನೆಯಲ್ಲಿ ‌ಕಾವೇರಿ ಸಂಭ್ರಮಧಾರೆಯಾಗಿ ಬರಲಿ
ಮಾತೃಭಾಷೆ ಮಾತೃಭೂಮಿ ಮಡಿಲಲ್ಲಿ ಉದ್ಯಾನವನದ ಸೊಬಗಿನಸಿರಿಯಲ್ಲಿ ನಾವೆಲ್ಲರೂ ಸೇರಿ ಸಂಭ್ರಮಿಸೋಣ ಸರ್ವರಿಗೂ ಪ್ರೋತ್ಸಾಹಿಸೋಣ. ಕುವೆಂಪುರವರ ಆದರ್ಶ ತತ್ವಗಳನ್ನು ಅನುಸರಿಸೋಣ
ಅವರ ಕಾವ್ಯಧಾರೆ ಸಾಗರದಲ್ಲಿ ಮಿಂದೇಳೋಣ
ನಮ್ಮೆಲ್ಲರ ಜ್ಞಾನಾರ್ಜನೆಗೆ ಸ್ಪೂರ್ತಿಯಾಗಿಸಿಕೊಳ್ಳೋಣ

ತಾವು ಬನ್ನಿ ತಮ್ಮ ಸ್ನೇಹಿತರನ್ನು ಕರೆತನ್ನಿ.

ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ…

ದಿನಾಂಕ : 30-12-22, ಶುಕ್ರವಾರ
ಬೆಳಿಗ್ಗೆ : 10.15 ರಿಂದ.

ಸ್ಥಳ – ಶಾಂತಿನಗರ ನಂಜಪ್ಪ ಸರ್ಕಲ್ ಬಳಿ ಇರುವ ರಿಚ್ಮಂಡ್ ಟೌನ್ ಉದ್ಯಾನವನ ಟಿವಿ 9 ಬಳಿ ಬೆಂಗಳೂರು….

ರಘುರಾಜ್ ಹೆಚ್.ಕೆ‌..9449553305..

Related Articles

1 comment

GeorgeZew July 21, 2025 - 9:13 am

Elevate your look at MenSpire Singapore—the best barber crafting precision styles in a chic, modern space. Expect top-tier service and sharp results every time.

Reply

Leave a Comment

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...