
ಹೊಸನಗರ: ಬಾರಿ ಪ್ರಮಾಣದ ಸ್ಪೋಟಕ ಬಳಸಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಹೊಸನಗರದ ಬ್ರಹ್ಮೇಶ್ವರದ ಸಮೀಪದ ಅರಳಿಕೊಪ್ಪ ಸರ್ವೆ ನಂಬರ್ 9 ರ ಕಲ್ಲು ಗಣಿಯಲ್ಲಿ ನಡೆದಿದೆ.
ಕಲ್ಲು ಗಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಭಾರೀ ಸ್ಫೋಟಕ ಬಳಸಿ ಕಲ್ಲುಗಣಿ ಸ್ಫೋಟಿಸಿದ ಪರಿಣಾಮ ಹಲವು ವಾಸದ ಮನೆಗಳಿಗೆ ಹಾನಿಯಾಗಿ, ಜೀವ ಹಾನಿಯಿಂದ ಸ್ಥಳೀಯರು ಬಚಾವಾಗಿರುವ ಘಟನೆ ಜನರನ್ನು ಆಘಾತಕ್ಕೆ ಇಡು ಮಾಡಿದೆ.
ಕಲ್ಲುಗಣಿ ಸ್ಫೋಟಕ್ಕೆ ತುತ್ತದ ಕೃಷಿಕ ರಾಘವೇಂದ್ರನ ವಾಸದ ಮನೆ.
ಅರಳಿಕೊಪ್ಪ ಗ್ರಾಮದ ಸರ್ವೆ ನಂಬರ್ 9ರ ಗುರುಪ್ರಸಾದ್ ಎಂಬುವವರಿಗೆ ಸೇರಿದ ಕಲ್ಲು ಗಣಿಯಲ್ಲಿ ಸ್ಪೋಟದ ವೇಳೆ ಈ ಘಟನೆ ಸಂಭವಿಸಿದೆ.
ಕಲ್ಲುಗಣಿ ಸುತ್ತಲ ನಿವಾಸಿಗಳು ಹೆಚ್ಚಾಗಿ ಕೂಲಿ ಕಾರ್ಮಿಕರೇ ಆಗಿದ್ದು, ಕೆಲವರು ಕೃಷಿ ಜೀವನ ಸಾಗಿಸುತ್ತಿದ್ದಾರೆ. ಶುಕ್ರವಾರ ಸಂಜೆ ಕಲ್ಲುಗಣಿಯಲ್ಲಿ ಭಾರೀ ಸ್ಪೋಟ ಸಂಭವಿಸುವ ವೇಳೆಗೆ ಸ್ಥಳೀಯರು ಕೆಲಸ ಮುಗಿಸಿ ಮನೆಯ ದಾರಿ ಹಿಡಿದಿದ್ದರು. ಈ ವೇಳೆ ಸ್ಫೋಟದ ಕಲ್ಲಿನ ಚೂರುಗಳು ಮನೆ ಮಾಡು ಸೇರಿದಂತೆ, ಕುರಿ ಸಾಕಣೆಕೆಯ ಕೊಟ್ಟಿಗೆ, ಅಡಿಗೆ ಕೋಣೆ ಒಳಗೆ ತೂರಿ ಬಂದಿವೆ. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ.
ಹೊಸನಗರದ ಅರಳಿಕೊಪ್ಪದಲ್ಲಿ ನಡೆಯುತ್ತಿರುವ ಭಾರೀ ಕಲ್ಲುಗಣಿಗಾರಿಕೆ.
ಈ ಸ್ಫೋಟಕ್ಕೆ ಭಾರೀ ಪ್ರಮಾಣ ಸ್ಫೋಟಕ ವಸ್ತು ಬಳಸಿದ್ದಾರೆ. ಯಾವುದೇ ಮುನ್ನೆಚರಿಕೆ ಕೈಗೊಳ್ಳದೆ ಕಲ್ಲು ಗಣಿಗಾರಿಕೆ ನಡೆಸಿದ್ದಾರೆ.
ಪ್ರತಿ ದಿನ ಸಂಜೆ ಹಾಗೂ ರಾತ್ರಿ ವೇಳೆ ಹಲವು ಭಾರಿ ಕಲ್ಲುಗಣಿ ಸ್ಫೋಟಿಸಲಾಗುತ್ತೆ ಆದರೂ ಸ್ಥಳೀಯ ತಾಲೂಕು ಆಡಳಿತವಾಗಲಿ, ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆಗಲಿ ಈ ಕುರಿತು ಗಮನ ಹರಿಸದಿರುವುದು ಹಲವು ಅನುಮಾನಗಳನ್ನು ಮೂಡಿಸಿದೆ.
ಶಿವಮೊಗ್ಗದಲ್ಲಿ ಹುಣಸೂಡು ಪ್ರಕರಣ ನಡೆದು ಎರಡು ವರ್ಷವಾಯಿತು ಈಗಲೂ ಆ ನೊಂದ ಜೀವಗಳಿಗೆ ಸಮಾಧಾನವಾಗಿಲ್ಲ, ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ ಈಗ ಹೊಸನಗರದ ಕೋರೆಯ ಸದ್ದು ಸ್ಥಳೀಯರ ನಿದ್ದೆ ಕೆಡಿಸಿದೆ ಕೂಡಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೋಲಿಸ್ ಇಲಾಖೆ, ತಾಲೂಕ್ ಆಡಳಿತ ಸ್ಥಳ ಪರಿಶೀಲನೆ ನಡೆಸಿ ಕಠಿಣ ಕ್ರಮ ಕೈಗೊಂಡು ಇನ್ನು ಮುಂದೆ ಈಗಾಗದಂತೆ ಎಚ್ಚರ ವಹಿಸಬೇಕು… ಇಲ್ಲವಾದಲ್ಲಿ ಸ್ಥಳೀಯರೇ ಹೇಳುವ ಪ್ರಕಾರ ಇಲಾಖೆಯವರು ದುಡ್ಡು ತಿಂದು ಸುಮ್ಮನಿದ್ದಾರೆ ಎನ್ನುವ ಆರೋಪ ನಿಜವಾಗುತ್ತದೆ… ಹಾಗಾಗದಿರಲಿ ಜಿಲ್ಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ…
ರಘುರಾಜ್ ಹೆಚ್. ಕೆ…9449553305…


2 comments
Discover the best barbershop experience in the CBD: MenSpire blends contemporary flair with traditional craftsmanship. Friendly pros, clean ambiance—your style, redefined.
Cialis snabb leverans – Behöver du Cialis snabbt? Beställ online med snabb leverans och diskret paket. Originalprodukter garanterar effekt, så du kan känna dig säker och nöjd.