Home ರಾಜ್ಯSoraba taluk has created a record for the first time in the history of the state :14ನೇ ತಹಶೀಲ್ದಾರ್ ವರ್ಗಾವಣೆ..!! ತಹಶೀಲ್ದಾರ್ ವರ್ಗಾವಣೆಯಲ್ಲಿ ದಾಖಲೆ ಸೃಷ್ಟಿ ಮಾಡಲು ಕಾರಣವೇನು..?! ಕುಮಾರ್ ಬಂಗಾರಪ್ಪ v/s ಷಡಾಕ್ಷರಿ…ನಾ..?!!

Soraba taluk has created a record for the first time in the history of the state :14ನೇ ತಹಶೀಲ್ದಾರ್ ವರ್ಗಾವಣೆ..!! ತಹಶೀಲ್ದಾರ್ ವರ್ಗಾವಣೆಯಲ್ಲಿ ದಾಖಲೆ ಸೃಷ್ಟಿ ಮಾಡಲು ಕಾರಣವೇನು..?! ಕುಮಾರ್ ಬಂಗಾರಪ್ಪ v/s ಷಡಾಕ್ಷರಿ…ನಾ..?!!

by EDITOR NEWS WARRIORS
1 comment

ಸೊರಬ : ಇತ್ತೀಚಿಗೆ ಸಾಗರದ ಕಾರ್ಯಕ್ರಮ ಒಂದರಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಾಕ್ಷರಿ ಅವರು ಪಕ್ಕದ ತಾಲೂಕು ಸೊರಬದಲ್ಲಿ ನಿರಂತರವಾಗಿ ತಹಶೀಲ್ದಾರ್ ಗಳ ವರ್ಗಾವಣೆಯಾಗುತ್ತಿದೆ ಇದನ್ನು ನಾವು ಸಹಿಸುವುದಿಲ್ಲ ಎನ್ನುವ ಮಾತುಗಳನ್ನು ಆಡಿದ್ದರು.. ಇದಕ್ಕೆ ಪ್ರತಿಕ್ರಿಯೆ ನೀಡಿದ ಸೊರಬ ತಾಲೂಕಿನ ಬಿಜೆಪಿ ಶಾಸಕರಾದ ಕುಮಾರ್ ಬಂಗಾರಪ್ಪನವರು ವರ್ಗಾವಣೆ ಮಾಡುವುದು ನನ್ನ ಕೆಲಸವಲ್ಲ ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಾಕ್ಷರಿ ಅವರು ತಮ್ಮ ಹೇಳಿಕೆ ಹಿಂತೆಗೆದುಕೊಳ್ಳಬೇಕು ಬಹಿರಂಗ ಕ್ಷಮೆಯಾಚಿಸಬೇಕು. ತಾವು ಯಾವ ಪಕ್ಷ ಎನ್ನುವುದನ್ನು ಬಹಿರಂಗಪಡಿಸಬೇಕು ಎಂದು ತಿರುಗೇಟು ನೀಡಿದ್ದರು ‌.

ಈ ಬೆಳವಣಿಗೆಯ ನಡುವೆಯೇ 14ನೇ ತಹಶೀಲ್ದಾರ್ ವರ್ಗಾವಣೆಯಾಗಿದೆ..!!

ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಸರ್ಕಾರ ಸೊರಬದಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಡಾ// ಮೋಹನ್ ಬಸ್ವೇ ಅವರನ್ನು ಧಾರವಾಡಕ್ಕೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

ರಾಜ್ಯದ ಇತಿಹಾಸದಲ್ಲಿ ದಾಖಲೆ ಸೃಷ್ಟಿ ಮಾಡಿದ ತಹಶೀಲ್ದಾರ್ ವರ್ಗಾವಣೆ :

ರಾಜ್ಯದ ಇತಿಹಾಸದಲ್ಲೇ ಇಷ್ಟೊಂದು ಪ್ರಮಾಣದ ತಹಶೀಲ್ದಾರ್ ಗಳ ವರ್ಗಾವಣೆ ಕೇವಲ ನಾಲ್ಕು ವರ್ಷ 9 ತಿಂಗಳ ಅವಧಿಯಲ್ಲಿ ನಡೆದಿರಲಿಲ್ಲ. ಆದರೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಕೇವಲ ನಾಲ್ಕು ವರ್ಷ ಒಂಬತ್ತು ತಿಂಗಳ ಅವಧಿಯಲ್ಲಿ 14 ತಹಶೀಲ್ದಾರ್ ಗಳ ವರ್ಗಾವಣೆ ಆಗಿದೆ.

ವರ್ಗಾವಣೆಗೆ ಕಾರಣವೇನು..?!

ಸಾಮಾನ್ಯವಾಗಿ ತಹಶೀಲ್ದಾರ್ ಗಳು ಒಂದು ತಾಲೂಕಿಗೆ ವರ್ಗಾವಣೆಯಾಗಿ ಬಂದರೆ ಸುಮಾರು ಎರಡು ವರ್ಷಗಳ ಕಾಲ ಇರುತ್ತಾರೆ. ಕೌಟುಂಬಿಕ ,ಆರೋಗ್ಯ, ಅನಿವಾರ್ಯ ಪರಿಸ್ಥಿತಿ ಎದುರಾದಾಗ ಅಥವಾ ಆಡಳಿತಾತ್ಮಕ ಹಿತ ದೃಷ್ಟಿಯಿಂದ ಸರ್ಕಾರ ಅಥವಾ ಸ್ವಯಂ ಅವರೇ ಬೇರೆ ಕಡೆ ವರ್ಗಾವಣೆ ಮಾಡಿಕೊಂಡು ಹೋಗುತ್ತಾರೆ. ಆದರೆ ಸೊರಬದ ವಿಷಯದಲ್ಲಿ ಹಾಗಾಗಲಿಲ್ಲ ನಾಲ್ಕು ವರ್ಷ ಒಂಬತ್ತು ತಿಂಗಳ ಅವಧಿಯಲ್ಲಿ 14 ತಹಶೀಲ್ದಾರ್ ವರ್ಗಾವಣೆ ಆಗಿದ್ದಾರೆ. ಹಾಗಾದರೆ ಈ ನಿರಂತರ ವರ್ಗಾವಣೆಗೆ ಕಾರಣವೇನು..?! ಸೊರಬ ತಾಲೂಕಿನಲ್ಲಿ ಎಲ್ಲವೂ ಸರಿ ಇಲ್ಲ ಆಡಳಿತ ಪಕ್ಷ ಬಿಜೆಪಿಯ ಶಾಸಕರಾದ ಕುಮಾರ ಬಂಗಾರಪ್ಪ ವಿರುದ್ಧವೇ ಸ್ವಪಕ್ಷದ ಕೆಲವರು ತಿರುಗಿ ಬಿದ್ದಿದ್ದಾರೆ.. ಹಾಗೆಯೇ ಇನ್ನೊಂದು ಗುಂಪು ಕುಮಾರ್ ಬಂಗಾರಪ್ಪನವರಿಗೆ ಈ ಸಲಹ ಚುನಾವಣೆಯಲ್ಲಿ ಟಿಕೆಟ್ ನೀಡಿದರೆ ನಾವು ಅವರಿಗೆ ಬೆಂಬಲ ನೀಡುವುದಿಲ್ಲವೆಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಇವೆಲ್ಲ ವಿರೋಧಗಳ ನಡುವೆಯೂ ಶಾಸಕ ಕುಮಾರ್ ಬಂಗಾರಪ್ಪನವರು ಅಧಿಕಾರಿಗಳೊಂದಿಗೆ ಅನ್ಯುನ್ಯವಾಗಿರದೆ ಅನಗತ್ಯವಾಗಿ ಕಿರುಕುಳ ನೀಡುವುದು ಅವರ ಕೆಲಸದಲ್ಲಿ ಮೂಗು ತೂರಿಸುವುದು ಬಹಿರಂಗವಾಗಿ ಏಕವಚನದಲ್ಲಿ ಬೈಯುವುದು ಮಾಡುತ್ತಿದ್ದಾರೆ. ಎನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮಗಳಲ್ಲಿ ಹಲವುಸಲ ವರದಿಯಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸೊರಬ ತಾಲೂಕು ಒಂದರಲ್ಲಿ 14 ಜನ ತಹಶೀಲ್ದಾರ್ ಗಳು ವರ್ಗಾವಣೆಯಾಗಿರುವುದು ಅಚ್ಚರಿ ಮೂಡಿಸಿದೆ. ವರ್ಗಾವಣೆಯನ್ನು ಮುಖ್ಯಮಂತ್ರಿಗಳ ಆದೇಶದ ಮೇಲೆಯೇ ಮಾಡಬಹುದು ಆದರೆ ಸ್ಥಳೀಯ ಶಾಸಕರ ಅಭಿಪ್ರಾಯವು ಮುಖ್ಯವಾಗಿರುತ್ತದೆ. ಅದರಲ್ಲೂ ಆಡಳಿತ ಪಕ್ಷದ ಶಾಸಕರು ಬೇರೆ ಏಕೆ ಹೀಗೆ ನಿರಂತರವಾಗಿ ತಹಶೀಲ್ದಾರ್ ಗಳ ವರ್ಗಾವಣೆಯಾಗುತ್ತಿದೆ. ಕೆಲವರಂತೂ ನಾಲ್ಕು ಐದು ದಿನ ಅಷ್ಟೇ ಕಾರ್ಯ ನಿರ್ವಹಿಸಿದ್ದಾರೆ. ನಿಜವಾಗಲೂ ತಹಶೀಲ್ದಾರ್ ಗಳ ಕಾರ್ಯ ದಕ್ಷತೆಯ ಮೇಲೆ ಅನುಮಾನ ಮೂಡುತ್ತದೆ. ಇಲ್ಲವೇ ಶಾಸಕರ ಮೇಲೆ ಸರ್ಕಾರದ ಮೇಲೆ ಅನುಮಾನ ಮೂಡುತ್ತದೆ ಈ ಬೆಳವಣಿಗೆ…14 ಜನ ತಹಶೀಲ್ದಾರ್ಗಳಲ್ಲಿ ಒಬ್ಬರು ಕೂಡ ದಕ್ಷ ಪ್ರಾಮಾಣಿಕ ಉತ್ತಮ ಕಾರ್ಯ ನಿರ್ವಹಿಸುವಂತಹ ತಹಶೀಲ್ದಾರ್ಗಳು ಸೊರಬ ತಾಲೂಕಿಗೆ ಸಿಗಲಿಲ್ಲವೇ ಎನ್ನುವ ಪ್ರಶ್ನೆ ಮೂಡುತ್ತದೆ… ಜೀ ಹುಜೂರ್ ಎಂದು ಹೇಳಿದ ಕೆಲಸ ಮಾಡಿ ಕೊಡುವವರಿಗೆ ಮಾತ್ರ ಆದ್ಯತೆ ನಾ..?! ದಕ್ಷ, ಪ್ರಾಮಾಣಿಕ ,ಅಧಿಕಾರಿಗಳಿಗೆ ಬೆಲೆ ಇಲ್ಲವೇ..?!

ರಾಜ್ಯ ಸರ್ಕಾರದ ಈ ವರ್ಗಾವಣೆಯ ಬೆಳವಣಿಗೆ ಅಚ್ಚರಿ ಮೂಡಿಸಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ…

ರಘುರಾಜ್ ಹೆಚ್.ಕೆ..9449553305…

Related Articles

1 comment

mitolyn January 25, 2026 - 8:04 pm

**mitolyn**

Mitolyn is a carefully developed, plant-based formula created to help support metabolic efficiency and encourage healthy, lasting weight management.

Reply

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...