Home ರಾಜ್ಯಶಿಕಾರಿಪುರದಲ್ಲಿ ಹೊಂದಾಣಿಕೆ ರಾಜಕೀಯ ಶಿವಮೊಗ್ಗದಲ್ಲಿ ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಎಂಎಲ್ಸಿ ಶಾಂತವೀರಪ್ಪ ಗೌಡ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ..!! ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಏಕವಚನದಲ್ಲಿ ತೀವ್ರ ವಾಗ್ದಾಳಿ..!!

ಶಿಕಾರಿಪುರದಲ್ಲಿ ಹೊಂದಾಣಿಕೆ ರಾಜಕೀಯ ಶಿವಮೊಗ್ಗದಲ್ಲಿ ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಎಂಎಲ್ಸಿ ಶಾಂತವೀರಪ್ಪ ಗೌಡ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ..!! ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಏಕವಚನದಲ್ಲಿ ತೀವ್ರ ವಾಗ್ದಾಳಿ..!!

by EDITOR NEWS WARRIORS
0 comments

ಶಿವಮೊಗ್ಗದಲ್ಲಿ ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಎಂಎಲ್ಸಿ ಶಾಂತವೀರಪ್ಪ ಗೌಡ ಪತ್ರಿಕಾಗೋಷ್ಠಿ..

ನನ್ನ ಪಕ್ಷಾಂತರದ ಕಾರಣ ಎಲ್ಲರೂ ನನ್ನನ್ನು ಯಾವ ಪಕ್ಷದಲ್ಲಿ ಇದ್ದೀರಾ ಎಂದು ಕೇಳುವಂತಾಗಿದೆ..

ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ..

ಕೆಪಿಸಿಸಿ ವಕ್ತಾರನ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದೇನೆ..

ಕಾಂಗ್ರೆಸ್ ಪಕ್ಷ ಮತ್ತು ಬಿಜೆಪಿ ಎರಡು ಪಕ್ಷಗಳಲ್ಲೂ ನನಗೆ ಒಳ್ಳೆಯ ಗೌರವ ಸ್ಥಾನಮಾನ ಕೊಟ್ಟಿದ್ದಾರೆ..

ಯಡಿಯೂರಪ್ಪನವರ ಕುತಂತ್ರದಿಂದ ನನ್ನ ಅಣ್ಣನ ಮಗನಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿದೆ..

ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ನಡುವೆ ಮ್ಯಾಚ್ ಫಿಕ್ಸಿಂಗ್ ಆಗಿದೆ‌.

ಸಿದ್ದರಾಮಯ್ಯ ಒಳ್ಳೆಯ ರಾಜಕಾರಣಿ ಅರ್ಥಶಾಸ್ತ್ರಜ್ಞ ರಾಜ್ಯದಲ್ಲಿ ಒಳ್ಳೆ ಕೆಲಸ ಮಾಡುತ್ತಿದ್ದಾರೆ..

ಇಡೀ ಮಂಗನ ಹಿಂಡಿಗೆ ಗಂಡು ಮಗ ಒಂದೇ ಇರಬೇಕು ಆ ರೀತಿ ಯಡಿಯೂರಪ್ಪ ವರ್ತನೆ ಮಾಡುತ್ತಿದ್ದಾರೆ..

ನನ್ನ ತಂದೆ ಪಟೇಲರು ಪ್ರತಿ ಬಾರಿ ತರಕಾರಿ ತರಲು ಹೋದಾಗ ಎರಡು ಚೀಲ ಇರುತ್ತಿತ್ತು ಒಂದು ಚೀಲ ನಮ್ಮ ಮನೆಗೆ ಮತ್ತೊಂದು ಚೀಲ ಯಡಿಯೂರಪ್ಪನವರ ಮನೆಗೆ ಕೊಡುತ್ತಿದ್ದರು..

ಕುಡುಗೋಲು ಕಂದಲಿಕೊಂಡು ಯಡಿಯೂರಪ್ಪನವರ ಜೀವಕ್ಕೆ ಜೀವ ಕೊಟ್ಟು ರಕ್ಷಣೆ ಮಾಡಿದ್ದಕ್ಕೆ ಇಂದು ನಮಗೆ ಈ ಸ್ಥಿತಿ ತಂದಿದ್ದಾರೆ..

ಯಡಿಯೂರಪ್ಪನವರ ಕುತಂತ್ರದಿಂದ ನನ್ನ ಅಣ್ಣನ ಮಗ ನಾಗರಾಜ ಗೌಡನಿಗೆ ಕೈ ಟಿಕೆಟ್ ತಪ್ಪಿದೆ..

ಇಂದು ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾನೆ..

ವಿಜಯೇಂದ್ರ ನಂತಹ ಭ್ರಷ್ಟ ಮಗನನ್ನು ಹಡೆದಿದ್ದಾರೆ.

ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ
ಗೋಣಿ ಮಾಲತೇಶ್ ರಿಗೆ ನೀಡಿದ ಬಿ ಫಾರಂ ಕ್ಯಾನ್ಸಲ್ ಮಾಡಿ ನಮಗೆ ಸಿ ಫಾರಂ ಕೊಡುವುದಾಗಿ ಹೇಳಿದರು..

ಸಿದ್ದರಾಮಯ್ಯ ರನ್ನು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿಸಿ ಫಾರಂ ನೀಡಿದಂತೆ ತಡೆಮಾಡಲಾಗಿದೆ..

ಯಡಿಯೂರಪ್ಪನವರನ್ನು ಸೋಲಿಸಲು ಯಡಿಯೂರಪ್ಪನವರ ಮನೆತನವನ್ನು ಬುಡ ಸಮೇತ ಬೇರು ಸಮೇತ ಹಾಕಲು ನನ್ನ ಹೋರಾಟ..

ಯಡಿಯೂರಪ್ಪ ಸಂಸದರು ರಾಘವೇಂದ್ರ ಶಾಸಕನಾಗಿದ್ದಾಗ ಶಿಕಾರಿಪುರ ಪುರಸಭೆಯಲ್ಲಿ ಬಿಎಸ್ಪಿ ನಿವಾಸವಿರುವ 2 ವಾರ್ಡ್ಗಳನ್ನು ಗೆದ್ದಿದ್ದೇವೆ..

ಬಿಜೆಪಿ ಮತ್ತು ಕಾಂಗ್ರೆಸ್ ನನಗೆ ಸಮಾನ ಗೌರವ ನೀಡಿದೆ

ಯಡಿಯೂರಪ್ಪನವರ ನನಗೆ ಮೋಸ ಮಾಡಿದ್ದು

ಮಲ್ಲಿಕಾರ್ಜುನ ಖರ್ಗೆ, ಸೃರ್ಜಿವಾಲ, ಡಿಕೆಶಿ ಎಲ್ಲರೂ ಮೊನ್ನೆ ರಾತ್ರಿ ಕರೆದು ನಮಗೆ ಬಿ ಫಾರಂ ಮತ್ತು ಸಿ ಫಾರಂ ಕೊಡುವುದಾಗಿ ಹೇಳಿದರು..

ವರುಣ ಕ್ಷೇತ್ರಕ್ಕೆ ವಿಜೇಂದ್ರ ನನ್ನು ಕಣಕ್ಕಿಳಿಸುವುದಾಗಿ ಯಡಿಯೂರಪ್ಪ ಹೇಳಿದ್ದರು

ನಂತರ ಶಿಕಾರಿಪುರದ ಜನಕ್ಕೆ ಮಾತು ಕೊಟ್ಟಿದ್ದೇನೆ ಎಂದು ಯಡಿಯೂರಪ್ಪ ಪುನಃ ಹೇಳಿದ್ದಾರೆ.

ಯಡಿಯೂರಪ್ಪ ಗೋಮುಖ ವ್ಯಾಘ್ರ ಇದ್ದಂತೆ

ನಾನು ಬಿಜೆಪಿ ಬಿಟ್ಟಾಗ ಯಡಿಯೂರಪ್ಪ ಸಿಎಂ ಆಗಿದ್ದರು ನಾನು ಕಾಂಗ್ರೆಸ್ ಬಿಟ್ಟಾಗ ಸಿದ್ದರಾಮಯ್ಯ ಸಿಎಂ ಆಗಿದ್ದರು

ಇವರುಗಳ ಕುತಂತ್ರದ ರಾಜಕಾರಣಕ್ಕೆ ನಾನು ಬಲಿಯಾಗಿದ್ದೇನೆ…

ಎಂದು ಇಂದಿನ ಪತ್ರಿಕಾಗೋಷ್ಠಿಯಲ್ಲಿ ಯಡಿಯೂರಪ್ಪರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು…

ರಘುರಾಜ್ ಹೆಚ್.ಕೆ..9449553305…

Related Articles

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...