Homeರಾಜ್ಯDuplicate letter pad seal,sign : ಸಾಗರದ ಹೆಗ್ಗೋಡು ಗ್ರಾಮ ಪಂಚಾಯಿತಿಯಲ್ಲಿ ನಡೆದ ಘಟನೆ ಪಿಡಿಒ ಆಡಳಿತ ದುರ್ಬಳಕೆ..!!ಪೊಲೀಸ್ ಠಾಣೆಗೆ ದೂರು ಪ್ರಕರಣ ದಾಖಲು ..!! ಅಸಲಿಗೆ ನಡೆದಿದ್ದೇನು ..?!
Duplicate letter pad seal,sign : ಸಾಗರದ ಹೆಗ್ಗೋಡು ಗ್ರಾಮ ಪಂಚಾಯಿತಿಯಲ್ಲಿ ನಡೆದ ಘಟನೆ ಪಿಡಿಒ ಆಡಳಿತ ದುರ್ಬಳಕೆ..!!ಪೊಲೀಸ್ ಠಾಣೆಗೆ ದೂರು ಪ್ರಕರಣ ದಾಖಲು ..!! ಅಸಲಿಗೆ ನಡೆದಿದ್ದೇನು ..?!
ಶಿವಮೊಗ್ಗ : ಜಿಲ್ಲೆಯ ಸಾಗರ ತಾಲ್ಲೂಕು ಸಾಗರ ವಿಧಾನಸಭಾ ಕ್ಷೇತ್ರದ ಹೆಗ್ಗೋಡು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳ ನಕಲಿ ಸಹಿ, ಗ್ರಾಮ ಪಂಚಾಯಿತಿಯ ನಕಲಿ ಲೆಟರ್ ಪ್ಯಾಡ್, ನಕಲಿ ಸೀಲ್ ಬಳಸಿ ವಿದ್ಯುತ್ ಸಂಪರ್ಕ ಪಡೆಯಲು ಮೆಸ್ಕಾಂ ಕಛೇರಿಗೆ ನಿರಾಪೇಕ್ಷಣಾ ಪತ್ರ ಒದಗಿಸಿ ವಿದ್ಯುತ್ ಪಡೆದಿರುವ ಬಗ್ಗೆ ಸಾಗರದ ಗ್ರಾಮಾಂತರ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿ ಖೊಟ್ಟಿ ದಾಖಲೆ ಸೃಷ್ಟಿಸಿರುವವ ಸವಿತಾ ಕೋಂ ಪರಶುರಾಮ್ ವಿರುದ್ಧ ತನಿಖೆ ನೆಡೆಸುವಂತೆ ಹೆಗ್ಗೋಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ದೂರು ಸಲ್ಲಿಸಿದ ಮೇರೆಗೆ ಸಾಗರ ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ ...