ಬೆಂಗಳೂರಿನಲ್ಲಿ ನಡೆಯುತ್ತಿದ್ದ ನಕಲಿ ದಾಖಲೆ ಸೃಷ್ಟಿ ಅಕ್ರಮ ಲೇಔಟ್ ಗಳ ನಿರ್ಮಾಣ ಯಾರದೋ ಸೊತ್ತನ್ನು ಯಾರಿಗೂ ಮಾರುವುದು ಸಂಬಂಧವೇ ಇಲ್ಲದ ವ್ಯಕ್ತಿಗಳನ್ನು ಇಟ್ಟುಕೊಂಡು ದಾಖಲೆಗಳನ್ನು ನಿರ್ಮಾಣ ಮಾಡುವುದು ನಂತರ ಅದನ್ನು ಅಮಾಯಕ ವ್ಯಕ್ತಿಗಳಿಗೆ ಮಾರಾಟ ಮಾಡಿ ದುಡ್ಡು ಸಂಪಾದನೆ ಮಾಡುವುದು ಇವೆಲ್ಲ ರಾಜಧಾನಿ ಬೆಂಗಳೂರಲ್ಲಿ ನಡೆಯುತ್ತಿತ್ತು…
ಆದರೆ ಅದೀಗ ಶಿವಮೊಗ್ಗ ಜಿಲ್ಲೆಗೂ ಕಾಲಿಟ್ಟಿದ್ದು ಶಿವಮೊಗ್ಗ ನಗರ ಹಾಗೂ ತಾಲೂಕ್ ಒಂದರಲ್ಲಿ ಕೋಟ್ಯಾಂತರ ಬೆಳೆ ಬಾಳುವ ಜಮೀನನ್ನು ಅಕ್ರಮ ದಾಖಲೆಗಳನ್ನು ಸೃಷ್ಟಿ ಮಾಡಿ ಲೇಔಟ್ ಆಗಿ ಪರಿವರ್ತಿಸಿ ಸಬ್ ರಿಜಿಸ್ಟರ್ ಸಹಾಯದಿಂದ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಮುಗ್ಧ ಜನರಿಗೆ ಅಮಾಯಕರಿಗೆ ಹಂಚಿಕೆ ಮಾಡುತ್ತಿದ್ದಾರೆ.
ಒಬ್ಬೊಬ್ಬರ ಹೆಸರಿಗೆ 10 ,15, 25 ಸೈಟ್ಗಳು ಒಂದೇ ದಿನ ರಿಜಿಸ್ಟರ್ ಮಾಡಿದ್ದಾರೆ. ಕೋಟ್ಯಾಂತರ ಬೆಳೆ ಬಾಳುವ ಮನೆ …ಲಕ್ಷಾಂತರ ಬೆಳೆ ಬಾಳುವ ಕಾರಿನಲ್ಲಿ ಓಡಾಟ ಆರ್ಥಿಕವಾಗಿ ಏನು ಇಲ್ಲದ ವ್ಯಕ್ತಿಗಳಿಗೆ ಇವೆಲ್ಲ ಹೇಗೆ ಸಾಧ್ಯ…. ಯಾರ ಹೆಸರಿಗೆ ರಿಜಿಸ್ಟರ್ ಆಗಿದೆ 10 ,15 ,25 ಸೈಟ್ಗಳು…. ಯಾರು ಕಟ್ಟಿದ್ದಾರೆ ಕೋಟ್ಯಾಂತರ ಬೆಲೆಬಾಳುವ ಮನೆ…. ಯಾರ ಓಡಾಟ ಲಕ್ಷಾಂತರ ಬೆಳೆ ಬಾಳುವ ಕಾರಿನಲ್ಲಿ…. ಯಾರ ಜೊತೆ ಇವರ ಸಂಪರ್ಕ ಏನು ಇವರ ಕುಟುಂಬದ ಹಿನ್ನೆಲೆ ಎಲ್ಲವನ್ನು ವಿಸ್ತಾರವಾಗಿ…. ನಿಮ್ಮ
ನ್ಯೂಸ್ ವಾರಿಯರ್ಸ್ ಪತ್ರಿಕೆ ತನಿಖಾ ವರದಿಯ ರೂಪದಲ್ಲಿ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದು .ಶೀಘ್ರದಲ್ಲೇ ದಾಖಲೆ ಸಮೇತ ಇದರಲ್ಲಿ ಶಾಮಿಲ್ ಆಗಿರುವ ವ್ಯಕ್ತಿಗಳು ಹಾಗೂ ಆ ರಾಜಕೀಯ ಮುಖಂಡನ ಹೆಸರು ಆತನ ಅಳಿಯ ಸಬ್ ರಿಜಿಸ್ಟರ್ ಆತ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಸ್ಥಳ ಈಗ ಕಾರ್ಯನಿರ್ವಹಿಸುತ್ತಿರುವ ಸ್ಥಳ ಆತನ ಪಾತ್ರ ಎಲ್ಲವನ್ನು ವಿಸ್ತಾರವಾಗಿ ತಮ್ಮ ಮುಂದೆ ತೆರೆದಿಡಲಿದೆ…. ನಿರೀಕ್ಷಿಸಿ…
ರಘುರಾಜ್ ಹೆಚ್.ಕೆ…9449553305….

