Home ರಾಜ್ಯThere is no well-maintained road, electric light, park, drainage system in Sagar: ಸಾಗರದ ವಿಜಯನಗರದ 18ನೇ ವಾರ್ಡ್ ನ ಅವ್ಯವಸ್ಥೆ..!!

There is no well-maintained road, electric light, park, drainage system in Sagar: ಸಾಗರದ ವಿಜಯನಗರದ 18ನೇ ವಾರ್ಡ್ ನ ಅವ್ಯವಸ್ಥೆ..!!

by EDITOR NEWS WARRIORS
1 comment

ಸಾಗರ : ವಿಜಯನಗರದ 18ನೇ ವಾರ್ಡ್ನಲ್ಲಿ ಸಂಪೂರ್ಣ ವ್ಯವಸ್ಥೆ ಅಸ್ತವ್ಯಸ್ತವಾಗಿದ್ದು ವಿಜಯ ನಗರ 80ಅಡಿ ರಸ್ತೆಯ ತೇಪೆ ಕಿತ್ತುಹೋಗಿದೆ. ಸರಿಯಾದ ಪಾರ್ಕಿನ ವ್ಯವಸ್ಥೆ ಇಲ್ಲ ಲೈಟಿನ ವ್ಯವಸ್ಥೆ ಇಲ್ಲ ರಸ್ತೆಗಳು ಕಿತ್ತು ಹೋಗಿವೆ ಚರಂಡಿಯ ವ್ಯವಸ್ಥೆ ಇಲ್ಲ.

ಕಂಬಳೇರಕೇರಿ ರಸ್ತೆಯಲ್ಲಿರುವ ದಿ.ನಾರಾಯಣ ಅವರ ಮನೆ ಎದುರು ಇರುವ ವಿದ್ಯುತ್ ಕಂಬ (ಕಂಬದ ಸಂಖ್ಯೆ-71) ಈ ವಿದ್ಯುತ್ ಕಂಬಕ್ಕೆ ಬೀದಿ ದೀಪದ ವ್ಯವಸ್ಥೆಯಿಲ್ಲದ ಕಾರಣ ಬೆಳಿಗ್ಗೆ ಮುಂಚೆ ಇದೇ ಮಾರ್ಗವಾಗಿ ಕಾಲ್ನಡಿಗೆಯಲ್ಲಿ ಸಾಗುವ ವಾಯು ವಿಹಾರಿಗಳಿಗೆ ಹಾಗೂ ರಾತ್ರಿ ಓಡಾಡುವ ಸ್ಥಳೀಯರಿಗೆ ಬೀದಿ ದೀಪವಿಲ್ಲದೆ ತೊಂದರೆಯಾಗುತ್ತಿದೆ. ಈ ರಸ್ತೆಯಿಂದ ವಾಹನ ಸಂಚಾರ ವಿರಳ ಆದರೇ ಜನ ಕಾಲ್ನಡಿಗೆಯಲ್ಲೇ ಹೆಚ್ಚಾಗಿ ಸಾಗುತ್ತಾರೆ. ಕತ್ತಲಲ್ಲಿ ಟಾರ್ಚ್ ಹಾಕಿಕೊಂಡು ಸಾಗಬಹುದೇನೋ ಆದರೇ ಇತ್ತ ಬೀದಿ ದೀಪವಿಲ್ಲದೆ ಅತ್ತ ಬೀದಿ ನಾಯಿಗಳು ರಾತ್ರಿ, ಬೆಳಿಗ್ಗೆ ಮುಂಚೆ ಬೊಗಳುವುದನ್ನು ಕಂಡು ಜನ ಬೆಚ್ಚಿ ಬಿದ್ದು ಇಲ್ಲಿಂದ ಮುಂದೆ ನಡೆದುಕೊಂಡು ಹೋಗುವಂತಾಗಿದೆ!

ಇಲ್ಲಿ ಬೀದಿ ದೀಪ ಏಕೆ ಬೇಕು?

ಕಂಬಳೇರಕೇರಿ ದಿ.ನಾರಾಯಣರವರ ಮನೆ ಎದುರಿನ ರಸ್ತೆಯಿಂದ ನಿತ್ಯವೂ ವಿಜಯ ನಗರದ ಉದ್ಯಾನವನ, ಗಾಂಧೀನಗರದ ಯೋಗ ತರಗತಿಗೆ ಸಾಗುವವರಿಗೆ ಈ ಭಾಗದಲ್ಲಿ ಬೀದಿ ದೀಪವಿಲ್ಲದೆ ಕತ್ತಲಲ್ಲಿ ಸಾಗುವಂತಾಗಿದೆ.

ಎಲ್ಲೆಲ್ಲೂ ಹೈ ಮಾಸ್ಕ್ ಬೆಳಕು…

ಪ್ರಸ್ತುತ ಈಗ ಸಾಗರ ಪಟ್ಟಣದ ಎಲ್ಲೆಡೆ ಹೊಸದಾಗಿ ಹೈ ಮಾಸ್ಕ್ ಕಂಬಗಳನ್ನು ನೆಟ್ಟು ಬೆಳಕು ನೀಡಲಾಗಿದೆ. ಇದರಿಂದಾಗಿ ಸಾಗರದ ಎಷ್ಟೋ ಸ್ಥಳಗಳಲ್ಲಿ ಬೀದಿ ದೀಪವಿಲ್ಲದೆ ಸಾರ್ವಜನಿಕರಿಗೆ ಬಹಳ ದಿನಗಳಿಂದ ತೊಂದರೆಯಾಗುತ್ತಿತ್ತು, ಆದರೇ ಈಗ ಈ ಹೈ ಮಾಸ್ಕ್ ಬೆಳಕಿನಿಂದ, ರಸ್ತೆ ಅಗಲೀಕರಣದಿಂದ ಸಾಗರ ನಗರಕ್ಕೆ ಹೊಸ ಕಳೆ ಬಂದಂತಾಗಿದೆ. ಆದರೆ ಇನ್ನೂ ಎಷ್ಟೋ ಕಡೆಗಳ ಬೀದಿ ದೀಪಗಳು ಹಾಳಾಗಿದ್ದು ಹೊಸ ದೀಪ ಅಳವಡಿಸುವ ಕಾರ್ಯ ಮಾತ್ರ ಬೇಗ ನಡೆಯುವುದಿಲ್ಲ! ಏಕೆಂದರೇ, ಈ ಹೈ ಮಾಸ್ಕ್ ಕಂಬಗಳು, ಬೀದಿ ಕಂಬಗಳಲ್ಲಿರುವ ದೀಪಗಳು ಕೆಟ್ಟು ಕತ್ತಲು ಆವರಿಸಿದರೆ ಅವುಗಳನ್ನು ದುರಸ್ಥಿಗೊಳಿಸಲು ಎಷ್ಟೋ ಸಮಯ ತೆಗೆದುಕೊಳ್ಳುವ ಬೇಜವಾಬ್ದಾರಿತನ ಎಂಬುದು ಕೇವಲ ಸಾಗರ ನಗರಕ್ಕಷ್ಟೇ ಸೀಮಿತವಾಗಿಲ್ಲ ಏಕೆಂದರೇ ಎಲ್ಲೆಡೆ ಇದೇ ಕಥೆ ಮಾರಾಯ್ರೆ! ಎಲ್ಲೆಲ್ಲೂ ಹೈ ಮಾಸ್ಕ್ ಕಂಬಗಳು, ಬೀದಿ ದೀಪಗಳ ಜೊತೆ ಇದುವರೆಗೂ ಯಾರ ಗಮನಕ್ಕೂ ಬರದ ಇಂತಹ ಕೆಲವೊಂದು ಭಾಗಗಳಲ್ಲೂ ಬೀದಿ ದೀಪಗಳನ್ನು ಅಳವಡಿಸಿ ಸಾರ್ವಜನಿಕರರು ನಿತ್ಯವೂ ಅನುಭವಿಸುತ್ತಿರುವ ಸಮಸ್ಯೆಗೆ ಸ್ಪಂದಿಸಿ ಕೂಡಲೇ ಇಲ್ಲಿನ ವಿದ್ಯುತ್ ಕಂಬಕ್ಕೆ ದೀಪ ಅಳವಡಿಸುವರೋ ಎಂದು ಕಾದು ನೋಡವಂತಾಗಿದೆ.

ಕೇವಲ ಕಾಟಚಾರಕ್ಕೆ ನಿರ್ಮಿಸಿದ ವಿಜಯನಗರದ ಪಾರ್ಕ್..!!

ಸಾಗರ ಪಟ್ಟಣದ ಹೈಟೆಕ್ ರಸ್ತೆಯಾದ ವಿಜಯನಗರದ 80 ಅಡಿ ರಸ್ತೆಯ ಪಾರ್ಕಿನ ಎದುರು ಹೊಸ ಟ್ರಾನ್ಸ್ಫರ್ಮರ್. ವಿದ್ಯುತ್ ಪರಿವರ್ತಕ ಅಳವಡಿಸಿದ್ದು ಸ್ವಾಗತಾರ್ಹ. ಇದೇ ಹೊಸ ವಿದ್ಯುತ್ ಪರಿವರ್ತಕದ ಹಿಂಬದಿಯೇ ವಿಜಯನಗರದ ಪಾರ್ಕಿದೆ. ಇದನ್ನು ಪಾರ್ಕ್ ಅಂತ ಯಾವ ಯ್ಯಾಂಗಲ್ ನಲ್ಲಿ ನೋಡಿದರು ಸಹ ಇದನ್ನು “ಪಾರ್ಕ್” ಅಂತ ಕರೆಯಲಾಗುವುದಿಲ್ಲ ಮಾರಾಯ್ರೆ! ಏಕೆಂದರೇ ಕೇವಲ ಹೆಸರಿಗಷ್ಟೇ ಪಾರ್ಕ್ ಅಂತ ಮಾಡಲಾಗಿದೆ. ಯಾವುದೇ ಒಂದು ಪಾರ್ಕಿನಲ್ಲಿ ಇರಬೇಕಾದ ಕನಿಷ್ಠ ವ್ಯವಸ್ಥೆಗಳು ಇಲ್ಲಿರದಾಗಿದೆ. ಕೂರೋಕೆ ಆಸನದ ವ್ಯವಸ್ಥೆ ಇಲ್ಲ. ಒಂದು ವೇಳೆ ವಾಯು ವಿಹಾರಕ್ಕೆ ಈ ಪಾರ್ಕ್ ಒಳಗೆ ಎಂಟ್ರಿ ಕೊಟ್ರೆ, ಉಸಿರು ಕಟ್ಟುವಂತಾಗುತ್ತದೆ! ಯಾಕೆ ಹೀಗೆ ಅಂದ್ರೇ ಈಗ ಈ ಪಾರ್ಕ್ ಒಳಗಿನ ಅಷ್ಟೂ ಗಿಡಗಳು ಸರಿಯಾದ ಪಾಲನೆಯಿಲ್ಲದೆ ಒಣಗಿ ಸೊರಗಿ ಹೋಗಿದೆ. ಕನಿಷ್ಠ ಪಕ್ಷ ಆ ಗಿಡಗಳಿಗೆ ನೀರು ಹಾಕುವ ಪ್ರಯತ್ನವನ್ನು ಯಾರು ಮಾಡಲಿಲ್ಲ. ಕೇವಲ ಇಲ್ಲಿಯ ಕೌನ್ಸಿಲ್ಲರ್ ಬಗ್ಗೆಯೇ ದೂರು ಹೇಳೋದು ಬಿಟ್ರೆ ಇಲ್ಲಿಯ ಸ್ಥಳೀಯರಿಗೆ ಸಾರ್ವಜನಿಕರ ಸ್ವತ್ತಾಗಿರುವ ಈ ಪಾರ್ಕಿನ ಗಿಡ ಮರಗಳಿಗೆ ನೀರು ಹಾಕುವ ಸಾಮಾಜಿಕ ಕಳಕಳಿ, ಪ್ರಕೃತಿ ಪ್ರೇಮ ಇಲ್ಲದಂತಾಗಿದ್ದು ವಿಪರ್ಯಾಸ ಅಲ್ವೇ? ನಮ್ಮಗಳ ತಪ್ಪು ಕೆಲವೋಮ್ಮೆ ನಮಗೆ ಗೊತ್ತಾಗುವುದಿಲ್ಲ! ಅದಕ್ಕೆ ಈ ಪಾರ್ಕಿನ ಪ್ರಸ್ತುತ ಸ್ಥಿತಿಯೇ ಉತ್ತಮ ನಿದರ್ಶನವೆನ್ನಬಹುದು! ಅದು ಯಾವುದೇ ಸಾರ್ವಜನಿಕ ಸ್ವತ್ತಾಗಿರಲಿ ನಮ್ಮ ಬಳಕೆಯ ಅಂತಹ ಸ್ವತ್ತುಗಳ ಬಗ್ಗೆ ಕಾಳಜಿ ವಹಿಸೋದು ನಾಗರೀಕರಾದ ನಮ್ಮ ಕರ್ತವ್ಯವಲ್ಲವೇ? ಕೇವಲ ಅಂತಹ ಸ್ವತ್ತುಗಳ ಬಳಕೆ ಮಾಡೋದು ಬಿಟ್ರೇ ಅಂಥವುಗಳ ರಕ್ಷಣೆಗೆ ಕಾಳಜಿ ವಹಿಸದಿರುವುದು ತಪ್ಪು ಆಲ್ವಾ ಮಾರಾಯ್ರೆ! “ಪಾರ್ಕಿಗೆ ಇನ್ನೂ ಒಂದಷ್ಟು ಅನುದಾನ ಬರಬೇಕು, ಬಂದ ನಂತರದಲ್ಲಿ ಸರಿಯಾದ ವ್ಯವಸ್ಥೆ ಕಲ್ಪಿಸಲಾಗುವುದು” ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ್ ರಾಯ್ಕರ್ ತಿಳಿಸಿದ್ದಾರೆ.

ವಿಜಯ ನಗರ 80ಅಡಿ ರಸ್ತೆಯ ತೇಪೆ ಕಿತ್ತುಹೋಗುತ್ತಿದೆ!

ಕೇವಲ ಕಲ್ಲು ಮಣ್ಣಿನ ರಸ್ತೆಯಾಗಿದ್ದ ವಿಜಯ ನಗರ 80ಅಡಿ ರಸ್ತೆಯಲ್ಲಿ ನಿತ್ಯ ವಾಹನ ಸಂಚಾರಕ್ಕೆ ಈ ಹಿಂದೆ ಇಲ್ಲಿನ ಸ್ಥಳೀಯರು ಬಹಳ ತೊಂದರೆಯನ್ನು ಅನುಭವಿಸುತ್ತಿದ್ದರು. ಈ ವಾರ್ಡ್ ನ ನಗರ ಸಭೆ ಸದಸ್ಯ ಅರವಿಂದ್ ರಾಯ್ಕರ್ ರವರಿಗೆ ಈ ರಸ್ತೆಯನ್ನು ಸಂಪೂರ್ಣ ಡಾಂಬರೀಕರಣ ಮಾಡಿಸಲು ಹಲವು ಬಾರಿ ಮನವಿಯನ್ನು ಮಾಡಲಾಗಿತ್ತು. ಆಯ್ತು ಎಂದು ಇನ್ನೇನು ಡಾಂಬರೀಕರಣದ ಕಾಮಗಾರಿ ಪ್ರಾರಂಭವಾಗಬೇಕು ಅನ್ನೋವಷ್ಟರಲ್ಲಿ ಇನ್ಯಾರೋ ಇಲ್ಲಿನ ಕೆಲವರು ಇದಕ್ಕೆ ಅಡ್ಡಿ ಪಡಿಸಿ, ಸಧ್ಯಕ್ಕೆ ಡಾಂಬರೀಕರಣ ಬೇಡ! ಈ ರಸ್ತೆಗೆ ತಾತ್ಕಾಲಿಕವಾಗಿ ತೇಪೆ! ಹಾಕಿದರೆ ಸಾಕು! ಎಂಬ ಅರೆ ಬೆಂದ ಐಡಿಯಾ ಕೊಟ್ಟೆ ಬಿಟ್ರು, ಅಲ್ಲಿಗೆ “ರೋಗಿ ಬಯಸಿದ್ದು ಹಾಲು, ವೈದ್ಯ ಬರೆದು ಕೊಟ್ಟದ್ದು ಹಾಲನ್ನೇ” ಎನ್ನುವಂತಾಗಿತ್ತು. ಆದರೇ ಕೆಲ ತಿಂಗಳುಗಳ ಹಿಂದೆ ಈ ವಿಜಯ ನಗರದ 80ಅಡಿ ರಸ್ತೆಗೆ ತೇಪೆ ಹಾಕಿ ಕೈ ತೊಳೆದು ಕೊಂಡಿದ್ದರು. ಪ್ರಸ್ತುತ ಈ ರಸ್ತೆಯು ತೇಪೆಯಲ್ಲ ಕಿತ್ತು ಹೋಗಿ ಮೊದಲಿನಂತಾಗಿ ಹೋಗುತ್ತಿದೆ. ಈಗ ಈ ರಸ್ತೆಯ ಈಗಿನ ಸ್ಥಿತಿಗೆ ಯಾರು ಕಾರಣವೆಂಬ ಪ್ರಶ್ನೆಗೆ ಉತ್ತರ ಹುಡುಕಬೇಕು!

ತೇಪೆ ಹಚ್ಚಲು ಸುಮಾರು ರೂಪಾಯಿಗಳನ್ನು ವ್ಯಯಿಸಲಾಗಿದೆ. ದುಡ್ಡು ಯಾರದ್ದು ಮಾರಾಯ್ರೆ? ಏನೋ ಒಂದು ಕಾಟಚಾರಕ್ಕಾಗಿ ಇದನ್ನು ಮಾಡುವ ಬದಲಾಗಿ ಒಂದೇ ಬಾರಿ ಸಂಪೂರ್ಣ ಡಾಂಬರೀಕರಣ ಮಾಡಿ ಮುಗಿಸಿದ್ದರೇ ತೇಪೆಯ ಹಣವಾದರೂ ಉಳಿಯುತ್ತಿತ್ತು ಅಲ್ವಾ? ದುಡ್ಡು ಯಾರು ಸಹ ತಮ್ಮ ಪ್ರಾಪರ್ಟಿಯಿಂದ ತೆಗೆದು ರಸ್ತೆ, ಚರಂಡಿಗಳನ್ನು ನಿರ್ಮಿಸುವುದಿಲ್ಲ ಬಿಡಿ! ಎಂಬ ಕೆಲ ಮುಖಂಡರ ಉಡಾಫೆತನವೇ ಇದಕ್ಕೆಲ್ಲ ಮೂಲ ಕಾರಣ. ಆದರೇ ನಿಜಕ್ಕೂ ಇಷ್ಟೆಲ್ಲಾ ಎಲ್ಲಾ ಕಡೆ ಪೋಲಾಗುತ್ತಿರುವ ದುಡ್ಡು ಯಾರ ಡ್ಯಾಡಿ ಪ್ರಾಪರ್ಟಿಯದ್ದಲ್ಲ! ನಮ್ಮದೇ ಸಾರ್ವಜನಿಕರ ಹಣ! ನಮಗೆ ಗೊತ್ತಿದ್ದೂ ನಾವುಗಳು ಮೂಕ ಪ್ರೇಕ್ಷಕರು! ಎಂತಹ ವಿಪರ್ಯಾಸ ಮಾರಾಯ್ರೆ! ಕೇವಲ ನಾಲ್ಕು ಗೋಡೆಗಳ ಮಧ್ಯೆ, ಪ್ರತಿಭಟನೆಗಳಲ್ಲಿ ಕಿರುಚಾಡುವ, ಧ್ವನಿ ಎತ್ತುವ ಕೆಲ ನಗರ ಸಭೆಯ ಸದಸ್ಯರು ತಮ್ಮ ವಾರ್ಡ್ ಗಳ ಇಂತಹ ಹಲವು ಸಮಸ್ಯೆಗಳತ್ತ ಅದೇಕೆ ಗಮನಿಸುವುದಿಲ್ಲ? ಕೆಲ ನಗರ ಸಭೆಯ ಸದಸ್ಯರು ಕೇವಲ ಬೊಬ್ಬೆ ಹೊಡೆಯಲು, ಫೋಟೋ ಕ್ಲಿಕ್ಕಿಸಿಕೊಳ್ಳಲು ಅಷ್ಟೇ ಲಾಯಕ್ಕೂ ಅಂತ ಅನ್ನಿಸುತ್ತೆ! ಈಗ ಅರವಿಂದ್ ರಾಯ್ಕರ್ ರವರು ಮುಂದಿನ ವಾರ ಈ ವಿಜಯ ನಗರದ 80ಅಡಿ ರಸ್ತೆಗೆ ಡಾಂಬರೀಕರಣ ಮಾಡಲಾಗುವುದು, ಎಂದು ಈಗ ತಿಳಿಸಿದ್ದಾರೆ. ಆಯ್ತು ಓಕೆ, ಆದರೇ ಈ ತೇಪೆ ಹಚ್ಚುವ ಬದಲು, ಒಂದೇ ಬಾರಿಗೆ ಡಾಂಬರೀಕರಣ ಮಾಡಿದ್ದರೇ ತೇಪೆಗೆ ಬಳಸಿದ ಅಷ್ಟೂ ಹಣ ಉಳಿಯುತ್ತಿತ್ತು ಅಲ್ವಾ? ಬಜೆಟ್ ಮಂಡಿಸಿ ಅಷ್ಟೂ ಲಕ್ಷ ಉಳಿಸಿದ್ದೇವೆ, ಹಾಗೆ ಹೀಗೆ ಅಂತ ಅದೇನೂ ಬಜೆಟ್ ನ ಪತ್ರ ಹಿಡಿದು ದೊಡ್ಡ ಅವಾರ್ಡ್ ನ ಫೋಟೋ ಹಿಡಿದಂತೆ ಎಲ್ಲರೂ ಫೋಟೋ ಗೆ ಪೋಸು ಕೊಟ್ಟಿದ್ದೆ ಕೊಟ್ಟಿದ್ದು! ಈಗ ಹೇಳಿ ಅವೈಜ್ಞಾನಿಕವಾಗಿ ಈ ರಸ್ತೆಯ ತೇಪೆಗೆ ಬಳಸಿದ ಹಣದಂತೆ ಇನ್ನೆಷ್ಟು ಹಣವನ್ನು ಪೋಲು ಮಾಡಲಾಗಿದೆ? ಪ್ರಶ್ನೆಗೆ ಉತ್ತರಿಸಿ?
ಬೈ ದಿ ವೇ… ನಗರೋಥಾನ ಯೋಜನೆ ಅಡಿಯಲ್ಲಿ ಎಷ್ಟೋ ಕೋಟಿ ರೂಪಾಯಿಗಳು ನಗರಸಭೆಗೆ ಬಿಡುಗಡೆಯಾಗಿದೆ. ಆ ಹಣದ ಬಗ್ಗೆ ಸಧ್ಯದಲ್ಲಿಯೇ ಲೆಕ್ಕವನ್ನು ಸಾಮಾನ್ಯ ನಾಗರಿಕರು ಕೇಳುವಂತಾಗಬೇಕು.

ವರದಿ::ಶಿವಮೊಗ್ಗ ಮನ್ಸೂರ್…

Related Articles

1 comment

GeorgeZew July 20, 2025 - 12:25 pm

Elevate your look at MenSpire Singapore—the best barber crafting precision styles in a chic, modern space. Expect top-tier service and sharp results every time.

Reply

Leave a Comment

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...