Home ರಾಜ್ಯಕನ್ನಡ ಮಾಧ್ಯಮದಲ್ಲಿ ತೀರ್ಥಹಳ್ಳಿ ತಾಲೂಕಿಗೆ ಟಾಪರ್ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಶ್ರೀರಾಮ್ ಭಟ್ ..‌!!

ಕನ್ನಡ ಮಾಧ್ಯಮದಲ್ಲಿ ತೀರ್ಥಹಳ್ಳಿ ತಾಲೂಕಿಗೆ ಟಾಪರ್ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಶ್ರೀರಾಮ್ ಭಟ್ ..‌!!

by EDITOR NEWS WARRIORS
0 comments

ತೀರ್ಥಹಳ್ಳಿ: ಸರ್ಕಾರಿ ಶಾಲೆ ಎಂದರೆ ಹಿಂಜರಿಯುವ ಈಗಿನ ಕಾಲದಲ್ಲಿ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಪೋಷಕರ ಮಧ್ಯೆ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಶ್ರೀರಾಮ್ ಭಟ್ ಎನ್ನುವ ವಿದ್ಯಾರ್ಥಿ ಇಡೀ ತೀರ್ಥಹಳ್ಳಿ ತಾಲೂಕಿಗೆ ಮೊದಲ ಸ್ಥಾನ ಬಂದು ತಾನು ದಲಿತ ಶಾಲೆಗೆ ಹಾಗೂ ತಾಲೂಕಿಗೆ ಕೀರ್ತಿ ತಂದುಕೊಟ್ಟಿದ್ದಾನೆ.

ಈತನ ಈ ಸಾಧನೆಗೆ ಪೋಷಕರು , ಗ್ರಾಮಸ್ಥರು, ಶಾಲೆಯ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶ್ರೀರಾಮ್ ಭಟ್ ಮೂಲತಃ ಹೊಸೂರು ಗ್ರಾಮದ ಸದಾಶಿವ ಭಟ್ ಮತ್ತು ಶ್ರೀಮತಿ ಲತಾ ಅವರ ಪುತ್ರನಾಗಿದ್ದು, ಪ್ರಾಥಮಿಕ ಶಾಲಾ ಶಿಕ್ಷಣ ವನ್ನು ಹೊಸೂರು & ಗುಡ್ಡೇಕೇರಿ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದ್ದು, ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ ಯಾಗಿದ್ದು.. ಇತ್ತೀಚೆಗೆ ರಾಜ್ಯ ಮಟ್ಟದ E L C ರಸಪ್ರಶ್ನೆಯಲ್ಲಿ ತನ್ನ ಸಹಪಾಠಿ ಅಭಿಜ್ಞಾ ಜೊತೆಗೆ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಅತ್ಯುತ್ತಮ ಕ್ರೀಡಾಪಟುವಾಗಿದ್ದು,
ಜೊತೆಗೆ ಇತ್ತೀಚಿಗೆ, ರಾಷ್ಟ್ರೋತ್ಥಾನ ಪರಿಷತ್ತು ನಡೆಸುವ ತಪಸ್ಸು ಪರೀಕ್ಷೆಯಲ್ಲಿ ಎಲ್ಲಾ ಹಂತದಲ್ಲಿ ಉತ್ತೀರ್ಣನಾಗಿ ಉಚಿತ ಶಿಕ್ಷಣಕ್ಕೂ ಆಯ್ಕೆಯಾಗಿದ್ದಾನೆ..‌

ತೀರ್ಥಹಳ್ಳಿ ತಾಲ್ಲೂಕಿನ ಅತ್ಯಂತ ಪ್ರತಿಷ್ಠಿತ ಸರ್ಕಾರಿ ಶಾಲೆ.. ಇತ್ತೀಚಿನ ವರ್ಷಗಳಲ್ಲಿ ಆಗುಂಬೆ ಭಾಗದಲ್ಲಿ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ಬೆಳೆಯುತ್ತಿರುವ, ಕ್ರೀಡೆ, ಸಹಪಠ್ಯ ಚಟುವಟಿಕೆಗಳ ಮೂಲಕ ರಾಜ್ಯದ ಗಮನ ಸೆಳೆದಿರುವ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಹೋಬಳಿಯ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಸಾಧನೆ ಗಮನ ಸೆಳೆಯುತ್ತಿದೆ..

ಸತತ ಎರಡು ವರ್ಷದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 100 % ಫಲಿತಾಂಶ ದಾಖಲಿಸಿದ್ದು ಈ ವರ್ಷವು ಸಹ 97 % ಫಲಿತಾಂಶ ದಾಖಲಿಸಿದೆ ..

ಶ್ರೀರಾಮ್ ಭಟ್ 611, ಶ್ರೀರಕ್ಷಾ ಕೆ ವಿ 584, ಅಭಿಜ್ಞಾ ಓ ಎ, 580 ಅಂಕಗಳಿಸಿ ಶಾಲಾ ಹಂತದ ಟಾಪರ್ ಆಗಿದ್ದಾರೆ..

ಪರೀಕ್ಷೆ ಗೆ ಕುಳಿತ 38 ವಿದ್ಯಾರ್ಥಿಗಳಲ್ಲಿ, ,37 ಮಕ್ಕಳು ಉತ್ತೀರ್ಣರಾಗಿದ್ದು, 10 ಡಿಸ್ಟಿಂಕ್ಷನ್, 24 ಪ್ರಥಮ, 3 ದ್ವೀತಿಯ ಸ್ಥಾನ ಪಡೆದಿರುತ್ತಾರೆ..
,ಕನ್ನಡದಲ್ಲಿ -5, ಹಿಂದಿಯಲ್ಲಿ -,1 ಸಮಾಜ ವಿಜ್ಞಾನ ದಲ್ಲಿ 1, ವಿದ್ಯಾರ್ಥಿಗಳು 100/100 ಅಂಕಗಳಿಸಿರುತ್ತಾರೆ..

ಶಾಲಾ ಈ ಸಾಧನೆಗೆ ಶ್ರಮವಹಿಸಿದ ಎಲ್ಲಾ ಶಿಕ್ಷಕರಿಗೂ, ಮಕ್ಕಳಿಗೂ ಪೋಷಕರಿಗೂ, ಎಸ್ ಡಿ ಎಂ ಸಿ ಬಳಗಕ್ಕೂ ಕೇರ್ ವರ್ಕ್ಸ್ ಪೌಂಡೇಷನ್ ಬೆಂಗಳೂರು ಹಾಗೂ ಎಲ್ಲಾ ದಾನಿಗಳಿಗೂ, ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ ಸರ್ವರ ಪರವಾಗಿ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ….

ರಘುರಾಜ್ ಹೆಚ್.ಕೆ..9449553305..

Related Articles

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...