Home ರಾಜ್ಯSmart City shivamogga: ಸ್ಮಾರ್ಟ್ ಸಿಟಿಯವರು ನಕಲಿ ಬಿಲ್ ಸೃಷ್ಟಿಸಿ ಬಸ್ಟ್ಯಾಂಡ್ ನಿರ್ಮಾಣ ಮಾಡಿದ್ರಾ..? ಏನಿದು ಬಂಗಾರಪ್ಪ ಅಭಿಮಾನಿಗಳ ಆಕ್ರೋಶ..!

Smart City shivamogga: ಸ್ಮಾರ್ಟ್ ಸಿಟಿಯವರು ನಕಲಿ ಬಿಲ್ ಸೃಷ್ಟಿಸಿ ಬಸ್ಟ್ಯಾಂಡ್ ನಿರ್ಮಾಣ ಮಾಡಿದ್ರಾ..? ಏನಿದು ಬಂಗಾರಪ್ಪ ಅಭಿಮಾನಿಗಳ ಆಕ್ರೋಶ..!

by EDITOR NEWS WARRIORS
0 comments

ಶಿವಮೊಗ್ಗ: ಸ್ಮಾರ್ಟ್ ಸಿಟಿ ದಿನದಿಂದ ದಿನಕ್ಕೆ ಒಂದಿಲ್ಲೊಂದು ಸುದ್ದಿಯಿಂದ ಹೆಸರುವಾಸಿಯಾಗಿದೆ. ಈಗ ಅದಕ್ಕೆ ಮತ್ತೊಂದು ಹೊಸ ಸೇರ್ಪಡೆ ದಿವಂಗತ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರು ಸಾರ್ವಜನಿಕರ ಅನುಕೂಲಕ್ಕಾಗಿ ಗೋಪಾಲಗೌಡ ಬಡಾವಣೆಯಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸಲು ಅಭಿಮಾನಿ ಒಬ್ಬರಿಗೆ ತಮ್ಮ ಒಡೆತನದ ಶರಾವತಿ ಡೆಂಟಲ್ ಕಾಲೇಜ್ ನಿವೇಶನದಲ್ಲಿ ಅನುಮತಿ ನೀಡಿದ್ದು ಅವರ ಅಭಿಮಾನಿ ಗುತ್ತಿಗೆದಾರಾದ ಈಶ್ವರ ರೆಡ್ಡಿ ಎಂಬುವರು ತಮ್ಮ ಸ್ವಂತ ಖರ್ಚಿನಲ್ಲಿ ಸುಸಜ್ಜಿತ ಬಸ್ ನಿಲ್ದಾಣವನ್ನು “ಎಸ್ ಬಂಗಾರಪ್ಪ ಸಾರ್ವಜನಿಕ ಬಸ್ ನಿಲ್ದಾಣ” ಎಂದು 1996- 97 ರಲ್ಲಿ ನಿರ್ಮಿಸಿದ್ದರು.

ಆದರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ನವರು ಅದನ್ನು “ಗೋಪಾಲಗೌಡ ಬಡಾವಣೆ ಬಸ್ ನಿಲ್ದಾಣ” ಎಂದು ಮರು ನಾಮಕರಣ ಮಾಡಿ ನಕಲಿ ಬಿಲ್ಲು ಸೃಷ್ಟಿಸಿ ಬಾರಿ ಅವ್ಯವಹಾರ ಮಾಡಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ ಹಾಗೂ ಬಂಗಾರಪ್ಪ ಅವರ ಅಭಿಮಾನಕ್ಕಾಗಿ ಅವರ ಹೆಸರಿನಲ್ಲಿ ಬಸ್ ನಿಲ್ದಾಣ ಮಾಡಿರುವುದನ್ನು ತೆಗೆದು ಹಾಕಿರುವುದು ಅವರ ಅಭಿಮಾನಿಗಳಲ್ಲಿ ತೀವ್ರ ಆಕ್ರೋಶವನ್ನುಂಟುಮಾಡಿದೆ ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು ಸಂಬಂಧಪಟ್ಟವರಿಗೆ ಶಿಕ್ಷೆ ಆಗಬೇಕು ಮತ್ತೆ ಬಂಗಾರಪ್ಪ ಹೆಸರಿನಲ್ಲಿ ಮರುನಾಮಕರಣ ಆಗಬೇಕು ಎಂದು ದಿವಂಗತ ಬಂಗಾರಪ್ಪ ಅಭಿಮಾನಿಗಳ ಬಳಗ ಹಾಗೂ ಹಾಗೂ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಯೋಜಕರಾದ ಜಿಡಿ ಮಂಜುನಾಥ್ ಅವರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ರಘುರಾಜ್ ಹೆಚ್.ಕೆ.944955305.

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...