Home ಶಿವಮೊಗ್ಗಶಿವಮೊಗ್ಗ ನಗರದ ಬಂಟರ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ..!

ಶಿವಮೊಗ್ಗ ನಗರದ ಬಂಟರ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ..!

by EDITOR NEWS WARRIORS
0 comments

ಶಿವಮೊಗ್ಗ: ನಗರದ ಬಂಟರ ಭವನದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ  ಮೂರು ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಕೆ ಎಸ್ ಆರ್ ಟಿ ಸಿ ಬಸ್ಸಿನ ಲೇಡಿ ಕಂಡಕ್ಟರ್ , ಅಂಚೆ ವಿತರಕರು ಮತ್ತು ಹೋಟೆಲ್ ನಡೆಸುತ್ತಿರುವ ಮಹಿಳೆಯರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.


ಮಹಿಳಾ ಅಧ್ಯಕ್ಷರಾದ ಪುಷ್ಪ ಶೆಟ್ಟಿ ಮಾತನಾಡಿ ಶಿವಮೊಗ್ಗದಲ್ಲಿ ಬಹುದಿನದ ಕನಸು ಬಂಟರ ಭವನ ಈಗ ನನಸಾಗಿದೆ. ಈ ಬಂಟರ ಭವನದಲ್ಲಿ ಮಹಿಳಾ ಮೊದಲ ಕಾರ್ಯಕ್ರಮವಾಗಿ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನು ಸಮಾಜಮುಖಿ ಕೆಲಸಗಳನ್ನು ಕಾರ್ಯಕ್ರಮಗಳನ್ನು ಮಾಡುತ್ತೇವೆ ಎಂದರು.


ಡಾ. ಸತೀಶ್ ಕುಮಾರ್ ಶೆಟ್ಟಿ ಮಾತನಾಡಿ ಬಂಟರ ಭವನದಲ್ಲಿ ಮೊದಲನೇ ಮಹಿಳಾ ದಿನಾಚರಣೆ ಕಾರ್ಯಕ್ರಮ ವಿಶೇಷ ಮತ್ತು ವಿಭಿನ್ನವಾಗಿ ನಡೆಯಿತು. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳು ಮಾಡಲಿ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಶೇಷ ಮಹಿಳೆಯರು ನಾವು ಈ ಸಮಾಜದಲ್ಲಿ ಮಾಡುವ ಕೆಲಸ ನಮಗೆ ಮತ್ತು ನಮ್ಮ ಮನೆಯವರಿಗೆ ಹೆಮ್ಮೆಯ ವಿಷಯ ಎಂದರು. ನಮ್ಮನ್ನು ಕರೆಸಿ ಕಾರ್ಯಕ್ರಮದಲ್ಲಿ ಸನ್ಮಾನಿಸಿದ ಶಿವಮೊಗ್ಗ ಮಹಿಳಾ ಬಂಟ್ಸ್ ವಿಭಾಗಕ್ಕೆ ಧನ್ಯವಾದಗಳು ಎಂದರು.


ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ವಿಭಾಗದ ಅಧಿಕಾರಿ vinni Mathew ಶಿವಮೊಗ್ಗ ಮಹಿಳಾ ಬಂಟ್ಸ್ ಗೌರವಾಧ್ಯಕ್ಷರಾದ ಡಾ. ಅಮಿತಾ ಹೆಗ್ಡೆ ಅಧ್ಯಕ್ಷರಾದ ಪುಷ್ಪ ಶೆಟ್ಟಿ ಉಪಾಧ್ಯಕ್ಷರಾದ ಪ್ರಭಾವತಿ ಶೆಟ್ಟಿ ತಿಲಕ್ ಶೆಟ್ಟಿ ಪ್ರಧಾನ ಕಾರ್ಯದರ್ಶಿಯಾದ ವಾತ್ಸಲ್ಯ ಶೆಟ್ಟಿ ಖಜಾಂಚಿ ಜ್ಯೋತಿ ಶೆಟ್ಟಿ ನಿರ್ದೇಶಕರು ಮತ್ತು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿರಿದ್ದರು.

Related Articles

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...