Home ಬಿಜೆಪಿShivamogga breaking: ಮೋದಿ ಭಾವಚಿತ್ರಕ್ಕೆ ಬಿಗ್ ಫೈಟ್ ಕೋರ್ಟ್ ಮರೆಹೋದ ಬಿಜೆಪಿ ಜಿಲ್ಲಾಧ್ಯಕ್ಷ..!ಕಾಲಾವಕಾಶ ಕೇಳಿದ ಈಶ್ವರಪ್ಪ..! ಮುಂದೇನು..?

Shivamogga breaking: ಮೋದಿ ಭಾವಚಿತ್ರಕ್ಕೆ ಬಿಗ್ ಫೈಟ್ ಕೋರ್ಟ್ ಮರೆಹೋದ ಬಿಜೆಪಿ ಜಿಲ್ಲಾಧ್ಯಕ್ಷ..!ಕಾಲಾವಕಾಶ ಕೇಳಿದ ಈಶ್ವರಪ್ಪ..! ಮುಂದೇನು..?

by EDITOR NEWS WARRIORS
0 comments

ಶಿವಮೊಗ್ಗದಲ್ಲಿ ಮೋದಿ ಭಾವಚಿತ್ರಕ್ಕೆ ಬಿಗ್ ಫೈಟ್ ನಡೆಯುತ್ತಿದ್ದು ಮೋದಿ ಭಾವಚಿತ್ರ ಬಳಸಲು ಈಶ್ವರಪ್ಪ ಯಾರು ಮೋದಿ ಬಿಜೆಪಿಯಿಂದ ಪ್ರಧಾನಿಯಾಗಿರುವುದು  ಅವರ ಭಾವಚಿತ್ರ ಬಳಸಲು ಬಿಜೆಪಿಗೆ ಮಾತ್ರ ಅವಕಾಶವಿದೆ ಆದರೆ ಪಕ್ಷೇತರ ಅಭ್ಯರ್ಥಿಯಾಗಿ ಬಿಜೆಪಿಗೆ ಬೆಂಬಲಿಸದೆ ಚುನಾವಣೆಯಲ್ಲಿ ನಿಂತಿರುವುದರಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಈಶ್ವರಪ್ಪ ಬಳಸಲು ಅವಕಾಶವಿಲ್ಲ ಆದ್ದರಿಂದ ನ್ಯಾಯಾಲಯ ಈಶ್ವರಪ್ಪನವರಿಗೆ ಮೋದಿ ಭಾವಚಿತ್ರ ಬಳಸದಂತೆ ನಿರ್ಬಂಧ ಹೇರಬೇಕು ಎಂದು ಬಿಜೆಪಿಯ ಜಿಲ್ಲಾಧ್ಯಕ್ಷ ಟಿಡಿ ಮೇಘರಾಜ್ ರವರು ನ್ಯಾಯಾಲಯದ ಮರೆಹೋಗಿದ್ದಾರೆ.

ಖುದ್ದು ನ್ಯಾಯಾಲಯಕ್ಕೆ ಹಾಜರಾದ ಈಶ್ವರಪ್ಪ..!

ಇಂದು ಖುದ್ದು ನ್ಯಾಯಾಲಯಕ್ಕೆ ಹಾಜರಾದ ಈಶ್ವರಪ್ಪ ಮೋದಿ ಭಾವಚಿತ್ರ ತೆಗೆಯುವಂತೆ ಮನವಿ ಸಲ್ಲಿಸಿರುವ ಜಿಲ್ಲಾಧ್ಯಕ್ಷರ ಮನವಿಗೆ ನ್ಯಾಯಾಲಯ ಈಶ್ವರಪ್ಪನವರ ಉತ್ತರ ಕೇಳಿದ್ದಕ್ಕೆ ಈಶ್ವರಪ್ಪ ಸಮಯ ಅವಕಾಶ ಕೇಳಿದ್ದಾರೆ.

ಇದೇ ತಿಂಗಳ 18ಕ್ಕೆ ದಿನಾಂಕ ನಿಗದಿ ಪಡಿಸಿದ ನ್ಯಾಯಾಲಯ :

ಇದೇ ತಿಂಗಳ 18ನೇ ತಾರೀಖು ನ್ಯಾಯಲಯಕ್ಕೆ ತಮ್ಮ ಉತ್ತರ ತಿಳಿಸುವಂತೆ ನ್ಯಾಯಾಲಯ ಈಶ್ವರಪ್ಪನವರಿಗೆ ಸಮಯ ಅವಕಾಶ ನೀಡಿದೆ.

ಮುಂದೇನು..?

ಕುತೂಹಲ ಕೆರಳಿಸಿರುವ ಈ ಪ್ರಕರಣದಲ್ಲಿ ಮೋದಿ ಭಾವಚಿತ್ರ ಹಾಕಿಕೊಳ್ಳಲು ಕಾನೂನಿನಲ್ಲಿ ಈಶ್ವರಪ್ಪನವರಿಗೆ ಅವಕಾಶವಿದೆಯಾ..? ಈಶ್ವರಪ್ಪನವರು ಮೋದಿ ಭಾವಚಿತ್ರವನ್ನು ಹಾಕಿಕೊಂಡು ತಮ್ಮ ಚುನಾವಣಾ ಪ್ರಚಾರ ಮುಂದುವರಿಸಬಹುದಾ..? ನ್ಯಾಯಾಲಯ ಇದಕ್ಕೆ ಸಮ್ಮತಿ ನೀಡುತ್ತಾ..?! ಅಥವಾ ಬಿಜೆಪಿ ಪರವಾಗಿ ಬಿಜೆಪಿ ಜಿಲ್ಲಾಧ್ಯಕ್ಷರು ಸಲ್ಲಿಸಿರುವ ಮನವಿಯನ್ನು ಪುರಸ್ಕರಿಸಿ ಈಶ್ವರಪ್ಪನವರು ಮೋದಿ ಭಾವಚಿತ್ರವನ್ನು ಹಾಕಿಕೊಳ್ಳದಂತೆ ಆದೇಶ ನೀಡುತ್ತಾ..? ಎನ್ನುವ ಕುತೂಹಲ ಕೆರಳಿಸಿದ್ದು ಇದೇ ತಿಂಗಳ 18ನೇ ತಾರೀಖು ಪ್ರಕರಣ ಒಂದು ಹಂತದ ತಿರುವು ಪಡೆಯುವ ಸಾಧ್ಯತೆ ಇದೆ.

Related Articles

Latest news
ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ...