Home ಶಿವಮೊಗ್ಗಭತ್ತ ಬೆಳೆಯುವ ವಿಧಾನಗಳು..!

ಭತ್ತ ಬೆಳೆಯುವ ವಿಧಾನಗಳು..!

by EDITOR NEWS WARRIORS
0 comments

ಭತ್ತ ಬೆಳೆಯುವ ವಿಧಾನಗಳು

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಬಿ. ಎಸ್ಸಿ. ಕೃಷಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾಯಾ೯ನುಭವ ಕಾಯ೯ಕ್ರಮದ ಅಡಿಯಲ್ಲಿ ಶಿಕಾರಿಪುರ ತಾಲೂಕಿನ ನೆಲವಾಗಿಲು ಗ್ರಾಮದಲ್ಲಿ ‘ಭತ್ತ ಬೆಳೆಯುವ ವಿಧಾನಗಳು’ ಕುರಿತು ಗುಂಪು ಚರ್ಚೆ ಮತ್ತು ಪದ್ಧತಿ ಪ್ರಾತ್ಯಕ್ಷಿಕೆಯನ್ನು ಆಯೋಜಿಸಿದ್ದರು.ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಡಿ. ಎಸ್. ಆರ್ (ಡೈರೆಕ್ಟ್ ಸೀಡೆಡ್ ರೈಸ್), ಎಸ್. ಆರ್. ಐ (ಸಿಸ್ಟಮ್ ಆಫ್ ರೈಸ್ ಇಂಟೆನ್ಸಿಫಿಕೇಷನ್) ಮತ್ತು ಕೆಸರಿನಲ್ಲಿ ಭತ್ತ ನಾಟಿ ಮಾಡುವ ವಿಧಾನಗಳ ನಡುವಿನ ವ್ಯತ್ಯಾಸ, ಅನುಕೂಲ, ಅನಾನುಕೂಲಗಳ ಕುರಿತು ರೈತರೊಂದಿಗೆ ಗುಂಪು ಚರ್ಚೆ ನಡೆಸಿದರು. ನಂತರ ವಿದ್ಯಾರ್ಥಿಗಳು ತಮ್ಮ ಬೆಳೆ ಸಂಗ್ರಹಾಲಯದಲ್ಲಿ ತಾವೇ ಈ ಮೂರು ವಿಧಾನಗಳಲ್ಲಿ ಬೆಳೆದಿದ್ದ ಭತ್ತವನ್ನು ರೈತರಿಗೆ ತೋರಿಸಿ, ಬೆಳೆಯುವ ವಿಧಾನವನ್ನು ವಿವರಿಸಿ ಪದ್ಧತಿ ಪ್ರಾತ್ಯಕ್ಷಿಕೆ ಮಾಡಿದರು. 1.ಡಿ.ಎಸ್.ಆರ್ ವಿಧಾನ:ಇದರಲ್ಲಿ ಭತ್ತದ ಬೀಜಗಳನ್ನು ನೇರವಾಗಿ ಗದ್ದೆಗೆ ಹಾಕುತ್ತಾರೆ. ಈ ರೀತಿ ಬೆಳೆಯುವುದರಿಂದ ಕೂಲಿಯ ವೆಚ್ಚ ಕಡಿಮೆ ಮಾಡಬಹುದು ಹಾಗೂ ಭತ್ತವು ಬೇಗ ಕಟಾವಿಗೆ ಬರುತ್ತದೆ. ಆದರೆ ಇದರಲ್ಲಿ ಕಳೆಗಳ ನಿರ್ವಹಣೆ ಕಷ್ಟಕರವಾಗಿರುತ್ತದೆ. 2.ಎಸ್.ಆರ್.ಐ (ಸಿಸ್ಟಂ ಆಫ್ ರೈಸ್ ಇಂಟೆನ್ಸಿಫಿಕೇಶನ್) ವಿಧಾನ:ಈ ಬಗೆಯಲ್ಲಿ 8-14 ದಿನಗಳ ಭತ್ತದ ಸಸಿಗಳನ್ನು (ಏರು ಮಡಿಯಲ್ಲಿ) 25*25 ಸಮ ಅಂತರದಲ್ಲಿ ಗದ್ದೆಗೆ ನಾಟಿ ಮಾಡುತ್ತಾರೆ.

ಈ ವಿಧಾನದಲ್ಲಿ ಸಾಮಾನ್ಯವಾಗಿ ಭತ್ತ ಬೆಳೆಯಲು ಬೇಕಿರುವ ನೀರಿಗಿಂತ 15 ರಿಂದ 20% ನೀರನ್ನು ಉಳಿಸುವುದರ ಜೊತೆಗೆ ಅಕ್ಕಿಯ ಉತ್ಪಾದಕತೆಯನ್ನು ಸುಧಾರಿಸುತ್ತದೆ.3.ಕೆಸರಿನಲ್ಲಿ ನಾಟಿ ಮಾಡುವ ವಿಧಾನ:ಇದರಲ್ಲಿ ಭತ್ತವನ್ನು 21 ದಿನಗಳ ಕಾಲ ಏರು ಮಡಿ ಮಾಡಿ ಭತ್ತದ ಸಸಿಗಳನ್ನು ಬೆಳೆಸಿಕೊಳ್ಳುತ್ತಾರೆ. ನಂತರ ಕೆಸರು ಗದ್ದೆಯಲ್ಲಿ ನಾಟಿ ಮಾಡುತ್ತಾರೆ.ಸಿಸ್ಟಂ ಆಫ್ ರೈಸ್ ಇಂಟೆನ್ಸಿಫಿಕೇಶನ್ (ಎಸ್.ಆರ್.ಐ) ಭತ್ತದ ಗಿಡಗಳು ಮಣ್ಣಿನ ನೀರು ಮತ್ತು ಪೋಷಕಾಂಶಗಳನ್ನು ಸಮಥ೯ಕವಾಗಿ ಬಳಸಿಕೊಳ್ಳುತ್ತವೆ ಮತ್ತು ವಿಶೇಷವಾಗಿ ಹೆಚ್ಚು ಬೇರುಗಳ ಬೆಳವಣಿಗೆ ಉಂಟುಮಾಡುವ ಮೂಲಕ ನೀರಾವರಿ ಅಕ್ಕಿಯ ಉತ್ಪಾದಕತೆಯನ್ನು ಹೆಚ್ಚಿಸುವ ಒಂದು ವಿಧಾನವಾಗಿದೆ. ಹಾಗಾಗಿ ರೈತರು ಈ ವಿಧಾನವನ್ನು ಅಳವಡಿಸಿಕೊಳ್ಳಬೇಕೆಂದು ಉತ್ತೇಜಿಸಿದರು.

Related Articles

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...