Home ಶಿವಮೊಗ್ಗಆರೋಗ್ಯಪ್ರಾ ಆ ಕೇಂದ್ರ ಮೇಗರವಳ್ಳಿಯಲ್ಲಿ ವಿಶಿಷ್ಟವಾಗಿ ನಡೆದ ಕೃತಜ್ಞತೆ ಸಲ್ಲಿಕೆ ಕಾರ್ಯಕ್ರಮ ..!

ಪ್ರಾ ಆ ಕೇಂದ್ರ ಮೇಗರವಳ್ಳಿಯಲ್ಲಿ ವಿಶಿಷ್ಟವಾಗಿ ನಡೆದ ಕೃತಜ್ಞತೆ ಸಲ್ಲಿಕೆ ಕಾರ್ಯಕ್ರಮ ..!

by EDITOR NEWS WARRIORS

ಇಲಾಖೆಯ ಕಾರ್ಯ ಚಟುವಟಿಕೆಗಳ ಪರಿಣಾಮಕಾರಿ ಅನುಷ್ಟಾನಕ್ಕೆ ಉತ್ತಮ ಸಹಕಾರ ನೀಡುವುದರ ಜೊತೆಗೆ ಪರಸ್ಪರ ಸೌಹಾರ್ಧತೆಯಿಂದ ಕರ್ತವ್ಯ ನಿರ್ವಹಿಸಲು ಉತ್ತಮ ಸಹಕಾರ ನೀಡಿದ ಎಲ್ಲಾ ಸಹೋದ್ಯೋಗಿಗಳು ಮತ್ತು ಆಶಾ ಕಾರ್ಯಕರ್ತೆಯರಿಗೆ ಪ್ರಾ ಆ ಕೇಂದ್ರ ಮೇಗರವಳ್ಳಿಯಲ್ಲಿ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ಅತ್ಯಂತ ವಿಶಿಷ್ಟವಾಗಿ ನಡೆಯಿತು
ಪ್ರಾಸ್ತಾವಿಕ ನುಡಿಗಳನ್ನಾಡಿದ ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಸತೀಶ ಟಿ ವಿ, ಯಾವುದೇ ಸ್ಥಳ ,ಕಚೇರಿ,ಸಂಸ್ಥೆ ಅಥವಾ ಇಲಾಖೆಗಳಲ್ಲಿ ಆತ್ಮ ಸಂತೋಷದಿಂದ ಕರ್ತವ್ಯ ನಿರ್ವಹಿಸಬೇಕಿದ್ದರೆ. ಅಲ್ಲಿನ ಪರಿಸರದ ಸೌಹಾರ್ಧತೆ ಅತ್ಯಂತೇ ಮುಖ್ಯವಾಗುತ್ತದೆ. ಸುದೈವವಶಾತ್ ನಮ್ಮ ತಾಲ್ಲೂಕಿನ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲೂ ಅಂತಹ ಉತ್ತಮ ವಾತಾವರಣವಿದೆ. ಅದರಲ್ಲೂ ಮೇಗರವಳ್ಳಿಯಲ್ಲಿ ಅದು ಬಹಳ ಚೆನ್ನಾಗಿದೆ. ತಾಲ್ಲೂಕಿನ ಬಹಳ ದೊಡ್ಡ ಪ್ರಾ ಆ ಕೇಂದ್ರವಾಗಿದ್ದರೂ ತೀವ್ರ ಸಿಬ್ಬಂದಿ ಕೊರತೆಯಿಂದ ಬಳಲುತಿದ್ದರೂ ಇರುವ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರೇ ಆ ಒತ್ತಡವನ್ನು ಹೆಗಲೇರಿಸಿಕೊಂಡು ಉತ್ತಮವಾಗಿ ನಿರ್ವಹಿಸುತಿದ್ದಾರೆ. ಇಂತಹ ಪರಿಸರದಲ್ಲಿ ಕರ್ತವ್ಯ ನಿರ್ವಹಿಸುವ ಅವಕಾಶ ಸಿಕ್ಕಿರುವುದು ನಿಜಕ್ಕೂ ನನ್ನ ನನ್ನ ಅದೃಷ್ಟ. ಅದಕ್ಕಾಗಿ ಪುಟ್ಟ ಕೃತಜ್ಞತೆ ಸಲ್ಲಿಸಬೇಕಿರುವುದು ನನ್ನ ಕರ್ತವ್ಯ.ಆ ದಿಸೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಮುಂದುವರೆದು.,
ಸಿನಿಮಾ ತಾರೆಯರಿಗೆ, ದೊಡ್ಡ ದೊಡ್ಡ ಅಧಿಕಾರಸ್ಥರು ಪ್ರಭಾವಿಗಳಿಗೆ, ಈ ರೀತಿಯ ಪ್ರೀತಿ ಅಭಿಮಾನ ವ್ಯಕ್ತವಾಗುವುದು ಸಹಜ.ಆದರೆ ಅಂತಹ ಯಾವುದೇ ಹೆಚ್ಚುಗಾರಿಕೆ ಇಲ್ಲದ ನನ್ಙಂತಹ ಸಾಮಾನ್ಯನಿಬ್ಬನ ಮೇಲೆ ನೀವೆಲ್ಲಾ ಇಷ್ಟೊಂದು ಪ್ರೀತಿ ವಿಶ್ವಾಸ ಅಭಿಮಾನಗಳನ್ನು ಇರಿಸಿ ಕೊಂಡಿದ್ದೀರಿ. ನಾನು ಇಲ್ಲಿಂದ ವರ್ಗಾವಣೆಯಾಗದಂತೆ ಪ್ರಾರ್ಥಿಸಿದ್ದೀರಿ,ಕಣ್ಣೀರು ಹಾಕಿದ್ದೀರಿ. ಹರಕೆ ಹೊತ್ತಿದ್ದೀರಿ, ನಾನು ದೂರ ಹೋಗದೆ ಟಿಹೆಚ್ ಓ ಕಚೇರಿಗೆ ವರ್ಗಾವಣೆಗೊಂಡು ಹತ್ತಿರದಲ್ಲೆ ಇರುವ ಅವಕಾಶ ಸಿಕ್ಕಿದ್ದಕ್ಕೆ ನಿಟ್ಟುಸಿರು ಬಿಟ್ಟಿದ್ದೀರಿ. ಬದುಕು ಸಾರ್ಥಕವೆನಿಸುವುದು ಇಂತಹ ಕ್ಷಣಗಳಲ್ಲೇ. ಪ್ರಾಯಶಃ
ಹಣ ಆಸ್ತಿ ಅಂತಸ್ತುಗಳ ಗಳಿಕೆ ಎಂತವರಿಗೂ ಸಾಧ್ಯ.ಆದರೆ ಇಂತಹ ನಿರ್ಮಲ ಪ್ರೀತಿ ವಿಶ್ವಾಸಗಳ ಗಳಿಕೆ ಯೇಗ್ದಾಗಿದ್ದರಷ್ಟೇ ಸಾಧ್ಯ. ನಿಮ್ಮೆಲ್ಲರಿಂದಾಗಿ, ನಮ್ಮ ತಾಲ್ಲೂಕು ಆರೋಗ್ಯ ಇಲಾಖೆಯ ಸಮಸ್ತ ಸಹೃದಯಿ ಬಂಧುಗಳಿಂದ ಅಂತಹ ಯೋಗ ನನ್ನದಾಗಿದೆ.ಅದಕ್ಕಾಗಿ ನಾನು ಸದಾ ಋಣಿ ಎಂದರು.

ಈ ಸಂದರ್ಭದಲ್ಲಿ ಪ್ರಾ ಆ ಕೇಂದ್ರದ ವೈದ್ಯಾಧಿಕಾರಿ,ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರಿಗೆ ನೆನಪಿನ ಕಾಣಿಕೆ ನೀಡುವುದರ ಜೊತೆಗೆ ಪರಿಸರ ಸ್ನೇಹಿ ಪೊಟ್ಟಣಗಳಲ್ಲಿ ಹಣ್ಣಿನ ಗಿಡಗಳನ್ನು ನೀಡಿ ಸತೀಶ ಟಿ ವಿ ಮತ್ತು ರಾಜೇಶ್ವರಿ ದಂಪತಿಗಳು ಗೌರವಿಸಿದರು.

ವೈದ್ಯಾಧಿಕಾರಿ ಡಾ. ರಂಜಿತಾ ಎನ್ ಎಸ್, ಶುಶ್ರೂಷಾಧಿಕಾರಿ ನಿರ್ಮಲ, ಫಾರ್ಮಸಿ ಅಧಿಕಾರಿ ಸನ್ನಿಧಿ, ಪ್ರ ದ ಸಹಾಯಕ ನವೀನ್ ಕುಮಾರ್, ಆರೋಗ್ಯ ನಿರೀಕ್ಷಣಾಧಿಕಾರಿ ಹನುಮಂತ ರೆಡ್ಡಿ, ಪ್ರಾ ಆ ಸುರಕ್ಷಾಧಿಕಾರಿಗಳಾದ ನಾಗರತ್ನ ಎ ಜಿ, ವೀಣಾ ಎಂ ಪಿ, ಡಿ ದರ್ಜೆ ನೌಕರರಾದ ಪಾರ್ವತಿ, ಆಶಾ ಫೆಸಿಲಿಟೇಟರ್ ಗಳಾಗಿದ್ದ ತೇಜಾವತಿ, ರೇಖಾ, ಕಾರ್ಯಕರ್ತೆಯರಾದ ರೂಪ, ಅಕ್ಷತಾ,ಸವಿತ,ತೆರೇಸ ಸೇರಿದಂತೆ ಪ್ರಾ ಆ ಕೇಂದ್ರದ ಎಲ್ಲಾ ಆಶಾ ಕಾರ್ಯಕರ್ತೆಯರು ಇದ್ದರು.

 

Related Posts

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!