ವಾಟ್ಸಾಪ್ ಚಾನೆಲ್ ಟೆಲಿಗ್ರಾಂ ಚಾನೆಲ್ ವಾಟ್ಸಾಪ್ ಗ್ರೂಪ್ ಇಲಾಖೆಯ ಕಾರ್ಯ ಚಟುವಟಿಕೆಗಳ ಪರಿಣಾಮಕಾರಿ ಅನುಷ್ಟಾನಕ್ಕೆ ಉತ್ತಮ ಸಹಕಾರ ನೀಡುವುದರ …
Latest Garden Update
-
-
ವಾಟ್ಸಾಪ್ ಚಾನೆಲ್ ಟೆಲಿಗ್ರಾಂ ಚಾನೆಲ್ ವಾಟ್ಸಾಪ್ ಗ್ರೂಪ್ ‘ಆರೈಕೆ’ : ಅಂಧತ್ವ ಮುಕ್ತ ಶಿವಮೊಗ್ಗ ಅಭಿಯಾನ ಒಂದು ಉತ್ತಮ …
-
ಆರೋಗ್ಯರಾಜ್ಯಶಿವಮೊಗ್ಗ
ಶಿವಮೊಗ್ಗ: ಆರೈಕೆ – ಅಂಧತ್ವ ಮುಕ್ತ ಅಭಿಯಾನ ಯಶಸ್ವಿಯಾಗಲಿ : ಸಚಿವ ಮಧು ಬಂಗಾರಪ್ಪ..! , ಕ್ಷಣ ನೀಡಲು ಕದ್ವಾಯಿ ಆಸ್ಪತ್ರೆಯಿಂದ 4 ಕಿ.ಮೀ. ದೂರದಲ್ಲಿ ಶಾಲೆ ಆರಂಭಿಸಲಾಗುವುದು. ಮಕ್ಕಳನ್ನು ನೋಡಿಕೊಳ್ಳುವ ಪೋಷಕರಿಗೆ ಸಹ ವಸತಿ ವ್ಯವಸ್ಥೆ ಮಾಡಲಾಗುವುದು ಎಂದರು. ಶಾಸಕರಾದ ಎಸ್ ಎನ್ ಚನ್ನಬಸಪ್ಪ ಮಾತನಾಡಿ, ‘ಆರೈಕೆ’ ಸಮಾಜಕ್ಕೆ ಶಕ್ತಿ ನೀಡುವ ಕೆಲಸವಾಗಿದೆ. ಜನರು ಅನೇಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿರುವ ಇಂತಹ ಸಂದರ್ಭದಲ್ಲಿ ಮನೆ ಮನೆಗೆ ಆರೋಗ್ಯ ಕಾರ್ಯಕ್ರಮದ ಅವಶ್ಯಕತೆ ಇದೆ. ಅಂಧತ್ವ ನಿವಾರಣೆಗಾಗಿ ಹಗಲು ರಾತ್ರಿ ಕೆಲಸ ಮಾಡಿದ ಡಾ.ಮೋದಿ ಯವರು ನಮಗೆಲ್ಲ ಮಾದರಿ. ಈ ಕಾರ್ಯಕ್ರಮ ಯಶಸ್ವಿಯಾಗಿ, ನಿರಂತರವಾಗಿ ನಡೆಯಲಿ. ಜೀವನ ಪಣಕ್ಕಿಟ್ಟು ಕೆಲಸ ಮಾಡುವ ಆಶಾ-ಅಂಗವಾಡಿ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ ಎಂದರು. ವಿಧಾನ ಪರಿಷತ್ ಶಾಸಕರಾದ ಡಿ.ಎಸ್ ಅರುಣ್ ಮಾತನಾಡಿ ಕ್ಯಾನ್ಸರ್ ಪೀಡಿತ ಮಕ್ಕಳ ಶಾಲೆ ಆರಂಭಿಸುತ್ತಿರುವುದು ಅಭಿನಂದನೀಯ. ಜಿ.ಪಂ ಸಿಇಓ ರವರು ಅತ್ಯಂತ ಆಸಕ್ತಿ ವಹಿಸಿ ಆರೈಕೆಯಂತಹ ಉಪಯುಕ್ತ ಮತ್ತು ವಿನೂತನ ಚಟುವಟಿಕೆಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಗ್ಲೂಕೊಮಾ, ಪೊರೆ ಸೇರಿದಂತೆ ಇತರೆ ಕಣ್ಣಿನ ಸಮಸ್ಯೆಗಳ ಕುರಿತು ಜಾಗೃತಿ ಮುಖ್ಯ. ಈ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮುಖ್ಯವಾಗಿದೆ. ಗ್ರಾ.ಪಂ ಗಳ ಮೂಲಕವೂ ಅರಿವು ಮೂಡಿಸಬೇಕಾಗಿದೆ. ಕಣ್ಣಿಗೆ ಸಂಬಂಧಿಸಿದ ಶೇ.80 ಸಮಸ್ಯೆಗಳನ್ನು ಗುಣಪಡಿಸಬಹುದು . ಸರ್ಕಾರ ಇವನ್ನು ಗುರುತಿಸಿ ಚಿಕಿತ್ಸೆ ನೀಡಲು ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಆಶಾ ಕಾರ್ಯಕರ್ತೆಯರ ಸಹಾಯ ಧನದ ಕುರಿತು ಸರ್ಕಾರ ಗಮನಿಸಬೇಕು. ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಚೆನ್ನಾಗಿ ಕೆಲಸ ನಿರ್ವಹಿಸುತಿದ್ದು ಅಕ್ಕ ಪಕ್ಕದ ಜಿಲ್ಲೆಗಳಿಂದಲೂ ಅನೇಕ ರೋಗಿಗಳು ಬರುತ್ತಾರೆ. ಇಲ್ಲಿನ ವೈದ್ಯರಿಗೆ ಅಗತ್ಯವಾದ ಸೌಲಭ್ಯಗಳು ದೊರಕಬೇಕು ಎಂದರು. ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು ಮಾತನಾಡಿ, ಇದೊಂದು ಅತ್ಯುತ್ತಮ ಕಾರ್ಯಕ್ರಮ. ಆರೋಗ್ಯವೇ ಒಂದು ಸಂಪತ್ತಾಗಿದ್ದು, ಈ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರ ಜವಾಬ್ದಾರಿ ಹೆಚ್ಚಿದೆ. ನಿಮ್ಮ ಬಗ್ಗೆ ನಮಗೆ ಕಾಳಜಿ ಇದೆ. ಸರ್ಕಾರ ನಿಮ್ಮ ಜೊತೆ ಇದೆ ಎಂದ ಅವರು ಶಿಕ್ಷಣ ಸಚಿವರು ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಆರಂಭಿಸುತ್ತಿರುವ ಶಾಲೆ ಅತ್ಯಂತ ಅವಶ್ಯಕವಾಗಿದ್ದು, ಮಾದರಿಯಾಗಲಿದೆ ಎಂದರು. ಡಿಎಲ್ಓ ಡಾ. ಕಿರಣ್ ಮಾತನಾಡಿ, ಅಂಧತ್ವ ಕಡಿಮೆ ಮಾಡಲು ಸರ್ಕಾರ ಅನೇಕ ಯೋಜನೆ ಜಾರಿಗೊಳಿಸಿದೆ. ಆದರೆ ಜೀವನ ಶೈಲಿಯ ಬದಲಾವಣೆಯಿಂದ ವಿವಿಧ ರೀತಿಯ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಆರೈಕೆ-ಅಂಧತ್ವ ಮುಕ್ತ ಅಭಿಯಾನ ಶಿವಮೊಗ್ಗದಿಂದಲೇ ಮೊದಲ ಬಾರಿಗೆ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದ ಮೂಲಕ ಅಂಧತ್ವ್ವದ ಬಗ್ಗೆ ಸಮಗ್ರವಾಗಿ ಆಶಾ ಕಾರ್ಯಕರ್ತೆಯರ ಮೂಲಕ ವಿವರಣೆ ಪಡೆಯಲಾಗುವುದು. ಬಳಿಕ ವೈದ್ಯರು ತಪಾಸಣೆ ಮಾಡಿ, ಸಣ್ಣ ಪುಟ್ಟ ತೊಂದರೆ ಇದ್ದರೆ, ಚಿಕಿತ್ಸೆ ನೀಡುತ್ತಾರೆ. ಶಸ್ತ್ರ ಚಿಕಿತ್ಸೆ ಸೇರಿದಂತೆ ಯಾವುದೇ ಚಿಕಿತ್ಸೆ ಇದ್ದರೂ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುವುದು. ಇದು ಈ ಕಾರ್ಯಕ್ರಮದ ಉದ್ದೇಶ. ಖಾಸಗಿ ಕಣ್ಣಿನ ಆಸ್ಪತ್ರೆಗಳ ಸಹಯೋಗ ಕೂಡ ಈ ಕಾರ್ಯಕ್ರಮಕ್ಕೆ ಇದೆ. ಆಶಾ ಕಾರ್ಯಕರ್ತೆಯರ ಕಾರ್ಯ ಮತ್ತು ಸಹಕಾರ ಪ್ರಮುಖವಾಗಿದೆ ಎಂದರು. ಡಿಎಸ್ಓ ಡಾ. ನಾಗರಾಜ್ ನಾಯ್ಕ್ ಮಾತನಾಡಿ, ಸಾಂಕ್ರಾಮಿಕ ರೋಗಗಳು ಜನರನ್ನು ಹೆಚ್ಚಾಗಿ ಕಾಡುತ್ತಿದ್ದು ಪ್ರಸ್ತುತ ರೋಗ ನಿಯಂತ್ರಣಕ್ಕೆ ಸರ್ಕಾರ ಹೆಚ್ಚು ಒತ್ತು ನೀಡಿದೆ. ಗುಣಮಟ್ಟದ ನೀರು, ಒಳ ಚರಂಡಿ ವ್ಯವಸ್ಥೆ ಸೇರಿದಂತೆ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. 2024 ರಲ್ಲಿ ಗೃಹ ಆರೋಗ್ಯ ಯೋಜನಾ ಕಾರ್ಯಕ್ರಮ ಸರ್ಕಾರ ರೂಪಿಸಿದ್ದು ಇದು ಎಲ್ಲ ಜಿಲ್ಲೆಗಳಲ್ಲಿ ಜಾರಿಗೊಂಡಿದೆ. ಸಕ್ಕರೆ ಕಾಯಿಲೆ ಮತ್ತು ಬಿಪಿ ಸೇರಿ 14 ಅಸಾಂಕ್ರಾಮಿಕ ಕಾಯಿಲೆಗಳಿಗೆ ಈ ಯೋಜನೆ ಅಡಿ ಚಿಕಿತ್ಸೆ ನೀಡಲಾಗುತ್ತದೆ. ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ 14 ಕಾಯಿಲೆಗಳ ಕುರಿತು ಮಾಹಿತಿ ನೀಡುತ್ತಾರೆ. ಅಡುಗೆ ಸಿಬ್ಬಂದಿಗಳಿಗೆ ಸ್ತನ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ನೀಡಬೇಕು ಎನ್ನುವುದು ಸರ್ಕಾರದ ಘನ ಉದ್ದೇಶವಾಗಿದೆ ಎಂದರು. ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಅಲೆಮಾರಿಗಳ ಅಭಿವೃದ್ದಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ, ಕರ್ನಾಟಕ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ರವಿಕುಮಾರ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಮಾಜಿ ವಿಧಾನ ಪರಿಷತ್ ಶಾಸಕರಾದ ಆರ್ ಪ್ರಸನ್ನ ಕುಮಾರ್, ಜಿ.ಪಂ. ಸಿಇಓ ಹೇಮಂತ್ ಎನ್, ಜಿಲ್ಲಾ ಆರೋಗ್ಯ ಮತ್ತು
ವಾಟ್ಸಾಪ್ ಚಾನೆಲ್ ಟೆಲಿಗ್ರಾಂ ಚಾನೆಲ್ ವಾಟ್ಸಾಪ್ ಗ್ರೂಪ್ ‘ಆರೈಕೆ’ : ಅಂಧತ್ವ ಮುಕ್ತ ಶಿವಮೊಗ್ಗ ಅಭಿಯಾನ ಒಂದು ಉತ್ತಮ …
-
ರಾಜ್ಯಶಿವಮೊಗ್ಗ
ಶಿವಮೊಗ್ಗ ರೈಲ್ವೆ ಸ್ಟೇಷನ್ ಒಳಗೆ ಆಟೋ ನೋ ಎಂಟ್ರಿ ..! ಆಟೋ ಮಾಫಿಯಾಕ್ಕೆ ಬ್ರೇಕ್ ಹಾಕಲು ಮುಂದಾದ ಟ್ರಾಫಿಕ್ ಇನ್ಸ್ಪೆಕ್ಟರ್ ದೇವರಾಜ್..! ಬಹುದಿನಗಳ ಬೇಡಿಕೆ ಪ್ರಿಪೇಯ್ಡ್ ಆಟೋಗೆ ಸದ್ಯದಲ್ಲಿಯೇ ಚಾಲನೆ ಸಾಧ್ಯತೆ..!
ವಾಟ್ಸಾಪ್ ಚಾನೆಲ್ ಟೆಲಿಗ್ರಾಂ ಚಾನೆಲ್ ವಾಟ್ಸಾಪ್ ಗ್ರೂಪ್ ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೆ ಹೊರ ರಾಜ್ಯಗಳಿಂದ ಜಿಲ್ಲೆಗಳಿಂದ …
-
ಆರೋಗ್ಯತೀರ್ಥಹಳ್ಳಿ
ತೀರ್ಥಹಳ್ಳಿ ಜೆ ಸಿ ಆಸ್ಪತ್ರೆಯ ನೂತನ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದಿಂದ ಆತ್ಮೀಯ ಸ್ವಾಗತ..!
ವಾಟ್ಸಾಪ್ ಚಾನೆಲ್ ಟೆಲಿಗ್ರಾಂ ಚಾನೆಲ್ ವಾಟ್ಸಾಪ್ ಗ್ರೂಪ್ ತೀರ್ಥಹಳ್ಳಿ ಜೆ ಸಿ ಆಸ್ಪತ್ರೆಯ ನೂತನ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ …
-
ಶಿವಮೊಗ್ಗ
Big news: ಶಿವಮೊಗ್ಗ ಜೈಲಿನ ಕರ್ಮಕಾಂಡ..! ಮನ ಪರಿವರ್ತನೆಯ ಕೇಂದ್ರ ಮನರಂಜನೆಯ ತಾಣವಾಗುತ್ತಿದೆ ಹೇಗೆ..?! ಮುಖ್ಯ ಅಧಿಕ್ಷಕ ರಂಗನಾಥ್ ಪಾತ್ರವೇನು..?!
ವಾಟ್ಸಾಪ್ ಚಾನೆಲ್ ಟೆಲಿಗ್ರಾಂ ಚಾನೆಲ್ ವಾಟ್ಸಾಪ್ ಗ್ರೂಪ್ ಶಿವಮೊಗ್ಗ: ನಗರದ ಹೊರವಲಯದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹ ದಿನದಿಂದ ದಿನಕ್ಕೆ …
-
ರಾಜ್ಯರಾಷ್ಟ್ರೀಯಶಿವಮೊಗ್ಗ
ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಪತ್ರ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರದಲ್ಲಿ ಏನಿದೆ..?!
ವಾಟ್ಸಾಪ್ ಚಾನೆಲ್ ಟೆಲಿಗ್ರಾಂ ಚಾನೆಲ್ ವಾಟ್ಸಾಪ್ ಗ್ರೂಪ್
-
ವಾಟ್ಸಾಪ್ ಚಾನೆಲ್ ಟೆಲಿಗ್ರಾಂ ಚಾನೆಲ್ ವಾಟ್ಸಾಪ್ ಗ್ರೂಪ್ ಶಿವಮೊಗ್ಗ: ನಗರದ ಬೊಮ್ಮನಕಟ್ಟೆ ನಿವಾಸಿ 28 ವರ್ಷ ವಯಸ್ಸಿನ ಪವನ್ …