Home ಶಿವಮೊಗ್ಗಆರೋಗ್ಯತೀರ್ಥಹಳ್ಳಿ ಜೆ ಸಿ ಆಸ್ಪತ್ರೆಯ ನೂತನ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದಿಂದ ಆತ್ಮೀಯ ಸ್ವಾಗತ..!

ತೀರ್ಥಹಳ್ಳಿ ಜೆ ಸಿ ಆಸ್ಪತ್ರೆಯ ನೂತನ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದಿಂದ ಆತ್ಮೀಯ ಸ್ವಾಗತ..!

by EDITOR NEWS WARRIORS
0 comments

ತೀರ್ಥಹಳ್ಳಿ ಜೆ ಸಿ ಆಸ್ಪತ್ರೆಯ ನೂತನ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದಿಂದ ಆತ್ಮೀಯ ಸ್ವಾಗತ..!


ಈ ಹಿಂದೆ ತೀರ್ಥಹಳ್ಳಿ ತಾಲ್ಲೂಕು ಆರೋಗ್ಯಾಧಿಕಾರಿಗಳಾಗಿ ತಮ್ಮ ವಿಭಿನ್ನ ಕಾರ್ಯ ಯೋಜನೆಯಿಂದ ಇಲಾಖೆಯ ಕಾರ್ಯ ಚಟುವಟಿಕೆಗಳಿಗೆ ಹೊಸ ಹುರುಪು ಉತ್ಸಾಹ ತುಂಬಿದ್ದ ಪ್ರಸ್ತುತ ಶ್ರೀ ಜೆ ಸಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾಗಿ ಆಗಮಿಸಿರುವ ಡಾ. ಪ್ರಕಾಶ್ ಕೆ ಎಸ್, ಕೀಲು ಮತ್ತು ಮೂಳೆ ತಜ್ಞ ವೈದ್ಯಾಧಿಕಾರಿ ಡಾ.ಗಣೇಶ್ ನಾಯಕ್, ಅರಿವಳಿಕೆ ತಜ್ಞ ವೈದ್ಯಾಧಿಕಾರಿ ಡಾ.ವಿನಯ್, ಮಕ್ಕಳ ತಜ್ಞ ವೈದ್ಯಾಧಿಕಾರಿಗಳಾದ ಡಾ.ಷಣ್ಮುಖ ಪ್ರಿಯ ಮತ್ತು ಡಾ.ಸುಪ್ರೀತ್, ಕಿವಿ ಮೂಗು ಗಂಟಲು ತಜ್ಞ ವೈದ್ಯಾಧಿಕಾರಿ ಡಾ.ಕವಿತ. ವೈದ್ಯಾಧಿಕಾರಿ ಡಾ.ಸೈಯದ್ , ಶುಶ್ರೂಷಣಾಧಿಕಾರಿಗಳಾದ ಶ್ರೀಕಾಂತ್ ,ಲಕ್ಷ್ಮಿ ಮತ್ತು ಶೈಲಾರವರನ್ನು ಆತ್ಮೀಯವಾಗಿ ಸ್ವಾಗತಿಸಿ ತೀರ್ಥಹಳ್ಳಿ ತಾಲ್ಲೂಕಿನ ಜನತೆಗೆ ಅವರಿಂದ ಉತ್ತಮ ಆರೋಗ್ಯ ಸೇವೆಗಳು ದೊರಕಲಿ ಎಂದು ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಸತೀಶ ಟಿ ವಿ, ಖಜಾಂಚಿ ರಾಘವೇಂದ್ರ ಸಿ ಡಿ, ಜೆ ಸಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯಾಧಿಕಾರಿ ಡಾ.ರಂಗಸ್ವಾಮಿ, ಮೇಟ್ರನ್ ಜಯಲಕ್ಷ್ಮಿ, ಸಂಘದ ಉಪಾಧ್ಯಕ್ಷೆ ತಿಲಕಮ್ಮ, ಪದಾಧಿಕಾರಿಗಳಾದ ರಾಜಪ್ಪ, ಸತೀಶ್, ಹನುಮಂತ ರೆಡ್ಡಿ, ಗಿರಿ ಡಿ ಟಿ, ಪ್ರಮೀಳ, ತಿಪ್ಪೇಶ್, ಸಂದೀಪ, ಯಶೋಧ, ಶರಾವತಿ,ಸಂತೋಷ,ದಯಾನಂದ ಮತ್ತಿತರರಿದ್ದರು.

 

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...