
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ ಸುಸಜ್ಜಿತವಾದ ಸುಮಾರು 54 ಜನ ವಿಚಾರಣಾಧೀನ ಆರೋಪಿತರನ್ನು ಬಂಧಿಸಿಡಲು ತಯಾರಾಗಿರುವ ಸಾಗರದ ಉಪ ಕಾರಾಗೃಹ ಇನ್ನೂ ಬಿಡುಗಡೆಯ ಭಾಗ್ಯವನ್ನು ಕಂಡಿಲ್ಲ.
ಸಾಗರ, ಹೊಸನಗರ, ಸೊರಬ ವ್ಯಾಪ್ತಿಯ ಆರೋಪಿತರು ಮಾನ್ಯ ನ್ಯಾಯಾಲಯದ ಆದೇಶ ಮೇರೆಗೆ ಇದೆ ಕಾರಾಗೃಹಕ್ಕೆ ಶಿಕ್ಷೆಯ ತೀರ್ಪಿ ಗೆ ಒಳ ಪಡೆದವರನ್ನು ಸಾಗರದ ಉಪ ಕಾರಾಗೃಹಗಳಲ್ಲಿ ಬಂದಿಸಿ ಇಡಲಾಗುತ್ತದೆ.ಆದರೇ ಈ ಕಾರಾಗೃಹ ಕಳೆದ ಹಲವು ವರ್ಷಗಳಿಂದ ರಿಪೇರಿ ಎಂಬ ಕುಂಟುನೆಪವೊಡ್ಡಿ ಮುಚ್ಚಿದ್ದು ಈ ಉಪ ಕಾರಾಗೃಹ ಇದುವರೆಗೂ ಪ್ರಾರಂಭವಾಗಿಲ್ಲ, ಸಾಗರದ ಉಪ ಕಾರಾಗೃಹ ಸುತ್ತಲೂ ಅತ್ಯಾಧುನಿಕ ಮೂರನೇ ಕಣ್ಣು(ಸಿ. ಸಿ. ಕ್ಯಾಮೆರಾ ) ಗಳು ಅಳವಡಿಸಿದ್ದಲ್ಲದೇ,ಕರ್ನಾಟಕ ಲೋಕೋಪಯೋಗಿ ಇಲಾಖೆಯಿಂದ ಉಪ ಕಾರಾಗೃಹ ರಿಪೇರಿ ಮುಗಿದು ವರ್ಷಗಳೇ ಕಳೆದರೂ ಬಂಧಿಖಾನೆ ಇಲಾಖೆಯ ಮುಖ್ಯಸ್ಥರ ಬೇಜವಾಬ್ದಾರಿತನದಿಂದ ಸುಸಜ್ಜಿತ ಉಪ ಕಾರಾಗೃಹ ಪ್ರಾರಂಭವಾಗದೇ ಇರುವುದರಿಂದ ಸರಕಾರದ ಭೋಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ,
ಆರೋಪಿತರನ್ನು ಮಾನ್ಯ ನ್ಯಾಯಾಲಯದಿಂದ ಶಿವಮೊಗ್ಗದ ಮಾಚೇನಹಳ್ಳಿಯ ಕೇಂದ್ರ ಕಾರಾಗ್ರಹಕ್ಕೆ ಕರೆದುಕೊಂಡು ಹೋಗಿ ಬಿಟ್ಟುಬರುವುದು, ಅಲ್ಲದೇ ಆರೋಪಿತರ ವಿಚಾರಣಾ ದಿನಾಂಕದಂದು ಪುನಃ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಸಾಗರ,ಸೊರಬ, ಹೊಸನಗರ ಮಾನ್ಯ ನ್ಯಾಯಾಲಯಗಳಿಗೆ ಕರೆದುಕೊಂಡು ಬರುವುದು ಇದೆಲ್ಲಾ ಪೊಲೀಸ್ ಇಲಾಖೆ ನಿರ್ವಹಿಸುತ್ತಿರುವುದು ಕಷ್ಟಕರವಾಗಿರುತ್ತದೆ. ಅಲ್ಲದೇ ಆರೋಪಿತರ ಕುಟುಂಬದವರು ಭೇಟಿ ಮಾಡಲು ದೂರದ ಶಿವಮೊಗ್ಗ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಹೋಗಿಬರಲು ಸಹ ಎಲ್ಲೋ ಒಂದುಕಡೆ ಹರಸಾಹಸ ಆಗುತ್ತಿರುವ ಹಿನ್ನೆಲೆ ಕೂಡಲೇ ಸಾಗರದ ಉಪ ಕಾರಾಗೃಹ ಪ್ರಾರಂಭ ಮಾಡಿ ಸರ್ಕಾರಕ್ಕೆ ಆಗುತ್ತಿರುವ ನಷ್ಟ,ಆರೋಪಿತರಿಗೆ ಹಾಗೂ ಅವರ ಸಂಬಂಧಿಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಆದಷ್ಟು ಬೇಗ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಪ್ರಾರಂಭಿಸಲು ಅಧಿಕಾರಿಗಳಿಗೆ ಆದೇಶ ನೀಡಬೇಕೆಂದು ಸ್ಥಳೀಯರ ಒತ್ತಾಯ…
ವರದಿ..ಓಂಕಾರ ಎಸ್, ವಿ ತಾಳಗುಪ್ಪ…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899…