ತೀರ್ಥಹಳ್ಳಿ ತಾಲ್ಲೂಕು ಪೋಲಿಸ್ ಇಲಾಖೆಗೆ ತೀರ್ಥಹಳ್ಳಿ ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಭಿನಂದನೆ…

ಅಕ್ರಮ ಮದ್ಯ ಮಾರಾಟ ತಡೆಯಲು ಹೋದ ಮಹಿಳಾ ಪಿಡಿಓ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ದುಷ್ಕರ್ಮಿಯನ್ನು ತ್ವರಿತವಾಗಿ ಪತ್ತೆ ಹಚ್ಚಿ ಬಂದಿಸಿ ಸೂಕ್ತ ಕಾನೂನು ಕ್ರಮ ಜರುಗಿಸಿದ ತೀರ್ಥಹಳ್ಳಿ ಪೋಲಿಸ್ ಇಲಾಖೆಗೆ ರಾಜ್ಯ ಸರ್ಕಾರಿ ನೌಕರರ ಸಂಘ ತೀರ್ಥಹಳ್ಳಿ ಶಾಖೆ ಪ್ರಶಂಸೆ ವ್ಯಕ್ತಪಡಿಸಿದೆ.
ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿ ಅಗತ್ಯ ಸೂಚನೆ ನೀಡಿದ ಗೃಹ ಮಂತ್ರಿಗಳಾದ ಆರಗ ಜ್ಞಾನೇಂದ್ರರವರಿಗೆ, ಸಂಘದ ಮನವಿಗೆ ಕಾಳಜಿ,ಬದ್ದತೆಗಳಿಂದ ಸ್ಪಂದಿಸಿ ತಕ್ಷಣ ಸೂಕ್ತ ಕಾನೂನು ಕ್ರಮವಹಿಸಿದ ಉಪಪೋಲಿಸ್ ಅಧೀಕ್ಷಕರಾದ ಶಾಂತವೀರರವರಿಗೆ, ಪೋಲಿಸ್ ವೃತ್ತ ನಿರೀಕ್ಷಕರಾದ ಸಂತೋಷ್ ಮತ್ತವರ ತಂಡಕ್ಕೆ ಹಾಗೂ ಹಲ್ಲೆಗೀಡಾದ ಅಧಿಕಾರಿಗೆ ನೈತಿಕ ಸ್ಥೈರ್ಯ ತುಂಬಲು ಸಹಕರಿಸಿದ ಸಂಘದ ರಾಜ್ಯಾಧ್ಯಕ್ಷರಾದ ಸಿ ಎಸ್,ಷಡಾಕ್ಷರಿ, ತಾಲ್ಲೂಕು ತಹಶಿಲ್ದಾರ್ ಡಾ.ಶ್ರೀಪಾದ್,ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಆಶಾಲತಾ, ತಾಲ್ಲೂಕಿನ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಬಳಗಕ್ಕೆ, ಸಂಘದ ಅಧ್ಯಕ್ಷ ಟಿ ವಿ ಸತೀಶ,ಕಾರ್ಯದರ್ಶಿ ರಾಮು ಬಿ,ಖಜಾಂಚಿ ಪವಿತ್ರ ಹೆಚ್ ಸಿ,ಉಪಾಧ್ಯಕ್ಷ ರಾಘವೇಂದ್ರ ಎಸ್,ಮತ್ತಿತರ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899..