
ಆತ್ಮೀಯ ಸ್ನೇಹಿತ,ಪತ್ರಕರ್ತರಾದ ನಾಗರಾಜ್ ಅವರಿಗೆ ನಿರಂತರವಾಗಿ ತಮ್ಮ ಛಾಯಾಗ್ರಹಣಕ್ಕೆ ಪ್ರಶಸ್ತಿಗಳು ಲಭಿಸಿವೆ. ಈಗ ಅದಕ್ಕೆ ಮತ್ತೊಂದು ಸೇರ್ಪಡೆ ರಾಷ್ಟ್ರೀಯ ಪ್ರಶಸ್ತಿ ಸೇರಿಕೊಂಡಿದೆ. ಛಾಯಾಗ್ರಾಹಕರಾಗಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿವಮೊಗ್ಗ ಪತ್ರಿಕಾ ರಂಗದಲ್ಲಿ ತನ್ನದೇ ಆದ ಸ್ನೇಹ ಬಳಗವನ್ನು ಹೊಂದಿರುವ ನಡೆನುಡಿಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಶಿವಮೊಗ್ಗ ನಾಗರಾಜ್ ಹವ್ಯಾಸಿ ಮತ್ತು ಅಮೆಚ್ಯುರ್ ಫೋಟೋಗ್ರಾಫರ್ ಸಹ ಆಗಿದ್ದಾರೆ .
ಇತ್ತೀಚೆಗೆ ಪುಣೆಯ ದಿ.ಫೋಟೋಗ್ರಾಫಿಕ್ ಸೊಸೈಟಿ ವತಿಯಿಂದ ಆಯೋಜಿಸಲಾಗಿದ್ದ ಫೋಟೋಗ್ರಫಿ ರಾಷ್ಟ್ರೀಯ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನು ಪಡೆದು ಬೆಳ್ಳಿ ಪದಕವನ್ನು ಗಳಿಸಿರುತ್ತಾರೆ .ಶಿವಮೊಗ್ಗ ಪತ್ರಕರ್ತರ ಸಮುದಾಯಕ್ಕೆ ಇದೊಂದು ಹೆಮ್ಮೆಯ ಸಂಗತಿಯಾಗಿದೆ .
ಶಿವಮೊಗ್ಗ ನಾಗರಾಜ್ ರವರು ಈ ಹಿಂದೆ ಅನೇಕ ರಾಷ್ಟ್ರೀಯ ಫೋಟೋಗ್ರಫಿ ಸ್ಪರ್ಧೆಯಲ್ಲಿ ಭಾಗವಹಿಸಿ ನ್ಯೂಯಾರ್ಕ್, ಬಾಂಗ್ಲಾದೇಶ ,ಮೆಸಿಡೊನಿಯ,ಶ್ರೀಲಂಕಾ ಮುಂತಾದ ದೇಶಗಳಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ ಹತ್ತಾರು ಪ್ರಶಸ್ತಿಗಳನ್ನು ಪಡೆದು ಪದಕಗಳನ್ನು ಗಳಿಸಿರುತ್ತಾರೆ .
ಇವರು ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದ ಸಮಯದಲ್ಲಿ ತೆಗೆದಂತಹ ಫೋಟೋ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿತ್ತು .ಹತ್ತಾರು ಪ್ರಾಣಿ, ಪಕ್ಷಿಗಳ ವಿಭಿನ್ನ ದೃಷ್ಟಿಯ ಫೋಟೋಗಳನ್ನು ಕ್ಲಿಕ್ಕಿಸಿದ ಕೀರ್ತಿ ಇವರದು .
ಕೊರೋನಾ ಭೀಕರ ರೋಗ ಹರಡುತ್ತಿರುವ ಸಮಯದಲ್ಲಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಎದುರು ರೋಗಿಯು ಓರ್ವರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಸಮಯದಲ್ಲಿ ಪೋಷಕರ ಮತ್ತು ರೋಗಿಯ ಸಂಬಂಧಿಕರ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳ ದುಗುಡ ಹಾಗೂ ರೋಗಿಯ ಕಾಪಾಡಲು ಶ್ರಮಿಸುತ್ತಿರುವ ದೃಶ್ಯವನ್ನು ಕ್ಲಿಕ್ಕಿಸಿದ ಕೀರ್ತಿ ಫೋಟೋಗ್ರಫಿ ಸ್ಪರ್ಧೆ ಯಲ್ಲಿ ಬಹುಮಾನ ಗಳಿಸುವಲ್ಲೂ ಮುಖ್ಯ ಪಾತ್ರ ವಹಿಸಿತ್ತು . ಉತ್ತಮ ಛಾಯಾಗ್ರಾಹಕ ಪ್ರಶಸ್ತಿಗೆ ಪಾತ್ರರಾಗಿದ್ದರು.
ನಾಗರಾಜ್ ಅವರಿಗೆ ನ್ಯೂಸ್ ವಾರಿಯರ್ಸ್ ಪತ್ರಿಕಾ ತಂಡದ ವತಿಯಿಂದ ಅಭಿನಂದನೆಗಳು ನಿಮಗೆ ಇನ್ನಷ್ಟು ಪ್ರಶಸ್ತಿಗಳು ಲಭಿಸಲಿ.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7862830899…