
ಇಂದು ಕನಕ ದಾಸರ ಜಯಂತಿ ಪ್ರಯುಕ್ತ ಶಿವಮೊಗ್ಗ ನಗರದ ಬಿ. ಹೆಚ್ ರಸ್ತೆ, ಶಿವಪ್ಪನಾಯಕ ವೃತ್ತ ವನ್ನು ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರು ಶಿವಪ್ಪನಾಯಕ ಪ್ರತಿಮೆಯ ಸುತ್ತಲೂ ಹಾಗೂ ಸಾರ್ವಜನಿಕರ ತಂಗುದಾಣವನ್ನು ಸ್ವಚ್ಛತೆ ಮಾಡುವುದರ ಮೂಲಕ 534 ಕನಕದಾಸರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಚನ್ನವೀರಪ್ಪ ಗಾಮನಗಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಎಂ.ಶ್ರೀಕಾಂತ್, ತಾಲ್ಲೂಕು ಪಂಚಾಯತ್ ಸದಸ್ಯರಾದ ಕೆ.ಇ.ಕಾಂತೇಶ್,ಟ್ರಾಫಿಕ್ ಪೊಲೀಸ್ ಇನ್ಸ್ಪೆಕ್ಟರ್ ಸಿದ್ದೆ ಗೌಡ್ರು , ಪಾಲಿಕೆ ಸದಸ್ಯರಾದ ಶ್ರೀಮತಿ ರೇಖಾ ರಂಗನಾಥ್, ಟಿವಿಸಿ ಸದಸ್ಯರಾದ ಶೇಷಯ್ಯ ಕನ್ನಡ ಕಾರ್ಮಿಕ ರಕ್ಷಣ ವೇದಿಕೆಯ ಜಿಲ್ಲಾಧ್ಯಕ್ಷರಾದ ವಾಟಾಳ್ ಮಂಜುನಾಥ, ಬೀದಿ ಬದಿ ವ್ಯಾಪಾರಸ್ಥರ ಪದಾಧಿಕಾರಿಗಳಾದ ಶರತ್, ಶ್ರೀಮತಿ ರಂಗಮ್ಮ ಹನುಮಂತಪ್ಪ, ಶ್ರೀಮತಿ ಪುಷ್ಪ, ಶ್ರೀಧರ್, ನಾಗರಾಜ್, ರವಿ, ನದೀಮ್ ಖಾನ್, ಅಣ್ಣಪ್ಪ, ಹಾಗೂ ಬೀದಿ ಬದಿ ವ್ಯಾಪಾರಸ್ಥರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899…