
ಕೋವಿಡ್ ಸಾಂಕ್ರಮಿಕ ಕಾಯಿಲೆಯಿಂದ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿತ್ತು. ಆದರೆ ನೆರೆಯ ಕೇರಳದಲ್ಲಿ ಈ ಪ್ರಮಾಣ ಹೆಚ್ಚಾಗಿತ್ತು.
ಇದನ್ನು ಮನಗಂಡ ಸರ್ಕಾರ ಕೇರಳದಿಂದ ಬರುವ ಹಾಗೂ ಹೋಗುವವರಿಗೆ ಕಡ್ಡಾಯವಾಗಿ ಟೆಸ್ಟ್ ಮಾಡಿಸಬೇಕು ಎನ್ನುವ ನಿಯಮ ಜಾರಿಗೊಳಿಸಿತ್ತು.
(ನಿಯಮ ಉಲ್ಲಂಘಿಸಿದ ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ಸಂಸ್ಥೆ ಉಲ್ಲಂಘಿಸಿದೆ)
15 ದಿನಗಳ ಹಿಂದೆ ಬಂದ ಕೇರಳದ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಮಾಡಿಸಲಿಲ್ಲ:
ಕೇರಳದಿಂದ 15 ದಿನಗಳ ಹಿಂದೆ ಬಂದ ನರ್ಸಿಂಗ್ ವಿದ್ಯಾರ್ಥಿಗಳಿಗೆ ನಂಜಪ್ಪ ಲೈಫ್ ಕೇರ್ ಸಂಸ್ಥೆ ಯಾವುದೇ ಪರೀಕ್ಷೆ ಗೆ ಒಳಪಡಿಸದೆ ಕಾರ್ಯನಿರ್ವಹಿಸಲು ಆಸ್ಪತ್ರೆಯೊಳಗೆ ಬಿಟ್ಟು ಕೊಂಡಿದ್ದು .
ನಂತರ ಆ ವಿದ್ಯಾರ್ಥಿಗಳಲ್ಲಿ ಕೆಲವು ಲಕ್ಷಣ ಕಂಡು ಬಂದ ನಂತರ ಪರೀಕ್ಷೆಗೊಳಪಡಿಸಿದಾಗ ಪ್ರಾಥಮಿಕ ಹಂತದಲ್ಲಿ ಅಧಿಕೃತವಾಗಿ 23ಕ್ಕೂ ಅಧಿಕ ಜನ ಪಾಸಿಟಿವ್ ಎಂದು ದೃಢಪಟ್ಟಿದೆ.
ಆದರೆ ಆಸ್ಪತ್ರೆಯ ಸಿಬ್ಬಂದಿಗಳು, ಉಳಿದ ನರ್ಸಿಂಗ್ ವಿದ್ಯಾರ್ಥಿಗಳ ಟೆಸ್ಟ್ ಮಾಡಿಸಿದ್ದು ಅವರ ಫಲಿತಾಂಶ ಇನ್ನೂ ಹೊರಬಂದಿಲ್ಲ.
ನಂಜಪ್ಪ ಲೈಫ್ ಕೇರ್ ಸಂಸ್ಥೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ , ಸಂಬಂಧಿಕರ, ಕಥೆಯೇನು?
ಇದೆಲ್ಲ ಒಂದು ಕಡೆಯಾದರೆ ನಂಜಪ್ಪ ಲೈಫ್ ಕೇರ್ ನಲ್ಲಿ ವಿವಿಧ ಕಾಯಿಲೆಗಳ ಗೋಸ್ಕರ ಬಂದು ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು, ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಹೋಗಿರುವ ವ್ಯಕ್ತಿಗಳು, ಚಿಕಿತ್ಸೆ ಪಡೆಯುತ್ತಿದ್ದ ವರನ್ನು ನೋಡಿಕೊಂಡು ಹೋಗಲು ಬಂದ ಸಂಬಂಧಿಕರು, ಸ್ನೇಹಿತರು, ಅವರೆಲ್ಲರ ಕಥೆ ಏನು? ಅವರೆಲ್ಲರಿಗೂ ಟೆಸ್ಟ್ ಮಾಡಿಸಬೇಕು ಅವರ ಮನೆಯಲ್ಲಿ ಮಕ್ಕಳಿರುತ್ತಾರೆ ಈಗ ಅವರು ಕೂಡ ಶಾಲೆಗಳಿಗೆ ಹೋಗುತ್ತಿದ್ದಾರೆ. ಇದು ಎಲ್ಲಾ ಕಡೆ ಹರಡುವ ಸಾಧ್ಯತೆ ಇದೆ.
ಜಿಲ್ಲಾಧಿಕಾರಿಗಳ ಆದೇಶವನ್ನು ಧಿಕ್ಕರಿಸಿದ ಆಸ್ಪತ್ರೆ ಮಾಡಿದ ಎಡವಟ್ಟಿನಿಂದ ಇಡೀ ಜಿಲ್ಲೆಗೆ ಆಪತ್ತು:
ಜಿಲ್ಲಾಧಿಕಾರಿಗಳ ಆದೇಶವನ್ನು ಮೀರಿ ಹೊರರಾಜ್ಯಗಳಿಂದ ಬಂದ ವಿದ್ಯಾರ್ಥಿಗಳನ್ನು ಯಾವುದೇ ಪರೀಕ್ಷೆಗೆ ಒಳಪಡಿಸದೆ ಆಸ್ಪತ್ರೆ ಒಳಗೆ ಬಿಟ್ಟು ಕೊಂಡಿದ್ದು ಶಿಕ್ಷಾರ್ಹ ಅಪರಾಧವಾಗಿದ್ದು. ಆಸ್ಪತ್ರೆ ಮಾಡಿದ ಎಡವಟ್ಟಿನಿಂದ ಇಡೀ ಜಿಲ್ಲೆಯೇ ಆಪತ್ತು ಎದುರಿಸುವ ಆತಂಕ ಎದುರಾಗಿದೆ.
ಹೊರ ಜಿಲ್ಲೆಗಳಿಂದಲೂ ನಂಜಪ್ಪ ಲೈಫ್ ಕೇರ್ ಗೆ ರೋಗಿಗಳು ಆಗಮಿಸುತ್ತಿದ್ದರು:
ದಾವಣಗೆರೆ ,ಚಿಕ್ಕಮಗಳೂರು, ಜಿಲ್ಲೆಗಳಿಂದಲೂ ನಂಜಪ್ಪ ಲೈಫ್ ಕೇರ್ ಗೆ ರೋಗಿಗಳು ಆಗಮಿಸುತ್ತಿದ್ದು ಅವರು ಆತಂಕ ಪಡುವ ಪರಿಸ್ಥಿತಿ ಎದುರಾಗಿದೆ. ಸದ್ಯಕ್ಕೆ ಶಿವಮೊಗ್ಗ ಲೈಫ್ ಕೇರ್ ಸೀಲ್ ಡೌನ್ ಆಗಿದೆ ಒಪಿಡಿ ಬಂದ್ ಆಗಿದೆ. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಒಂದಂಕಿ ಯಲ್ಲಿದ್ದ ಸಾಂಕ್ರಮಿಕ ಕಾಯಿಲೆ ಮತ್ತೆ ಹರಡಿದರೆ ಅದಕ್ಕೆ ನಂಜಪ್ಪ ಲೈಫ್ ಕೇರ್ ನೇರ ಹೊಣೆಯಾಗುತ್ತದೆ.