
ರಾಜ್ಯದ ಪ್ರತಿಷ್ಠಿತ ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಸ್ಥಾನದ ಚುನಾವಣೆ ದಿನದಿಂದ ದಿನಕ್ಕೆ ಗರಿಗೆದರಿದ್ದು ಅಧಿಕಾರ ಹಿಡಿಯಲು ಭದ್ರಾವತಿ- ತೀರ್ಥಹಳ್ಳಿ ಆಕಾಂಕ್ಷಿಗಳ ನಡುವೆ ಜಿದ್ದಾಜಿದ್ದಿನ ಹೋರಾಟ ಶುರುವಾಗಿದೆ.
ತೀರ್ಥಹಳ್ಳಿ ಮಲೆನಾಡು ಗೌಡರ ಪಾರುಪತ್ಯ ಜಾಸ್ತಿ:
ಶಿವಮೊಗ್ಗ ಮತ್ತು ಉತ್ತರ ಕನ್ನಡಜಿಲ್ಲೆ ಒಳಗೊಂಡ ಈ ಕ್ಷೇತ್ರದಲ್ಲಿ ಮೊದಲಿನಿಂದಲೂ ತೀರ್ಥಹಳ್ಳಿ ಮಲೆನಾಡು ಗೌಡರ ಪಾರುಪತ್ಯ ಹೆಚ್ಚು ಮತ ಕ್ಷೇತ್ರದಲ್ಲಿ ತೀರ್ಥಹಳ್ಳಿ, ಭದ್ರಾವತಿಯಲ್ಲಿ ಹೆಚ್ಚು ಮತದಾರರು ಇದ್ದಾರೆ. ಶಿವಮೊಗ್ಗ ನಂತರದಸ್ಥಾನದಲ್ಲಿದೆ. ಕಳೆದ ಎರಡು ಅವಧಿಗೆ ಅಧ್ಯಕ್ಷರಾಗಿದ್ದ ಡಿ.ವಿ. ರಮೇಶ್ ಅವರು ಈ ಬಾರಿ ಕಣದಿಂದದೂರ ಉಳಿದಿದ್ದಾರೆ.
ಒಂಬತ್ತು ಮಂದಿ ಕಣದಲ್ಲಿದ್ದಾರೆ:
ಕಣದಲ್ಲಿ 9 ಮಂದಿ ಅಭ್ಯರ್ಥಿಗಳಿದ್ದು 9 ಮಂದಿಯಲ್ಲಿ ರಜನಿಕಾಂತ, ಕೆ.ಎಸ್.ರವಿಕುಮಾರ್ ಶಿವಮೊಗ್ಗದವರಾಗಿದ್ದರೆ ಶಶಿಧರಎಚ್.ಡಿ., ಎಸ್.ಕೆ.ಧರ್ಮೇಶ್, ಚೇತನ ಹೆಗ್ಡೆ,ಲೋಕೇಶ್ ಎಸ್.ವಿ., ಕುಮಾರ್ ತೀರ್ಥಹಳ್ಳಿತಾಲೂಕಿನವರು. ಭದ್ರಾವತಿ ತಾಲೂಕಿನಿಂದ ಎಸ್.ಕುಮಾರ್, ನಾಗರಾಜ ಟಿ.ಎನ್. ಕಣದಲ್ಲಿದ್ದಾರೆ.
ಮೂರು ಜನ ಅಭ್ಯರ್ಥಿಗಳು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ:
ಭದ್ರಾವತಿ: ತಾಲೂಕಿನಿಂದ ಈಬಾರಿ ಒಮ್ಮತದ ಅಭ್ಯರ್ಥಿಯಾಗಿ ಜಿಪಂ ಮಾಜಿಸದಸ್ಯ ಎಸ್. ಕುಮಾರ್ ಅವರು ಕಣಕ್ಕಿಳಿದಿದ್ದು ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ಮಾಜಿ ಶಾಸಕದಿ.ಎಂ.ಜೆ. ಅಪ್ಪಾಜಿ ಒಡನಾಡಿಯಾಗಿರುವ ಇವರು ಕ್ಷೇತ್ರದಾದ್ಯಂತ ಓಡಾಡುತ್ತಿದ್ದು ಪ್ರಬಲ ಪೈಪೋಟಿ ಒಡ್ಡಿದ್ದಾರೆ.
ತೀರ್ಥಹಳ್ಳಿ : ಭದ್ರಾವತಿಯ ಎಸ್ ಕುಮಾರ್ ಗೆ ಪ್ರಬಲ ಪೈಪೋಟಿ ಒಡ್ಡಿರುವುದು ತೀರ್ಥಹಳ್ಳಿಯ ಎಸ್.ಕೆ.ಧರ್ಮೇಶ್. ಅವರು ವೃತ್ತಿಯಿಂದ ಗುತ್ತಿಗೆದಾರರಾಗಿದ್ದು ಕ್ಷೇತ್ರದಲ್ಲಿ ಪರಿಚಯ ಹೊಂದಿದ್ದು. ಕಳೆದ ಒಂದು ವರ್ಷದಿಂದ ಚುನಾವಣೆ ತಯಾರಿಯಲ್ಲಿದ್ದಾರೆ. 20 ವರ್ಷಗಳಿಂದ ಸಮಾಜಸೇವೆಯಲ್ಲಿ ಗುರುತಿಸಿಕೊಂಡಿದ್ದೇನೆ ಹಾಗಾಗಿ ಗೆಲ್ಲುವ ವಿಶ್ವಾಸವಿದೆ ಎನ್ನುವ ನಿರೀಕ್ಷೆ ಇವರದು.
ಸೈಲೆಂಟ್ ಆಗಿದ್ದು ಪೈಪೋಟಿ ನೀಡುತ್ತಿರುವ ವಕೀಲರು:
ಕಳೆದ ಬಾರಿ ಚುನಾವಣೆಗೆ ನಿಂತು ಸೋತಿರುವ ಸರಳ ಲೋಕೇಶ್ ಅವರು ಇವರಿಬ್ಬರ ನಡುವೆ ಪೈಪೋಟಿ ನೀಡುತ್ತಿದ್ದಾರೆ. ವೃತ್ತಿಯಿಂದ ವಕೀಲರಾಗಿರುವ ಎಸ್.ವಿ. ಲೋಕೇಶ್ ಅವರು ಹೆಸರು ಸ್ಪರ್ಧಾಕಣದಲ್ಲಿ ಬಲವಾಗಿ ಕೇಳಿಬರುತ್ತಿದೆ. ಮಲೆನಾಡು ಭಾಗದಲ್ಲಿ ಹೆಚ್ಚು ಸಕ್ರಿಯವಾಗಿರುವ ಇವರು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.
ಶಿವಮೊಗ್ಗದ ಕೆ.ಎಸ್. ರವಿಕುಮಾರ್ ಭ್ರಷ್ಟಾಚಾರರಹಿತ ಆಡಳಿತ ನೀಡುವ ಭರವಸೆ ಮೇಲೆ ಮತಕೇಳುತ್ತಿದ್ದಾರೆ.
ರಾಜ್ಯದ ಪ್ರತಿಷ್ಠಿತ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಹಣಬಲ ಇತ್ತೀಚಿಗೆ ಹೆಚ್ಚಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ ಅದು ಈ ಚುನಾವಣೆಯಲ್ಲಿ ಯಾವ ರೀತಿ ಪ್ರಭಾವ ಬೀರುತ್ತದೆ ಕಾದುನೋಡಬೇಕು.
ಒಟ್ಟಾರೆಯಾಗಿ ಸಮಾಜಕ್ಕೆ ಒಂದಷ್ಟು ಒಳ್ಳೆಯ ಕಾರ್ಯವನ್ನು ಮಾಡುವ ವ್ಯಕ್ತಿ ಆಯ್ಕೆಯಾಗಿ ಬಂದರೆ ಎಲ್ಲರಿಗೂ ಒಳಿತು.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899.