
ತೀರ್ಥಹಳ್ಳಿ: ಮಲೆನಾಡಿನ ಹೆಬ್ಬಾಗಿಲು ತೀರ್ಥಹಳ್ಳಿಗೆ ಎಳ್ಳಮಾಸೆ ಜಾತ್ರೆಯೆಂದರೆ ಎಲ್ಲಿಲ್ಲದ ಸಡಗರದ ಹಬ್ಬ ಬರಿ ತೀರ್ಥಹಳ್ಳಿಯ ಜನರಷ್ಟೇ ಅಲ್ಲದೆ ಬೇರೆ ಬೇರೆ ಜಿಲ್ಲೆಗಳಿಂದ ತಾಲೂಕುಗಳಿಂದಲೂ ಕೂಡ ಜಾತ್ರೆಗೆ ಜನರು ತಂಡೋಪತಂಡವಾಗಿ ಆಗಮಿಸುತ್ತಾರೆ.
ನಾಳೆ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ:
ಇಂತಹ ಜಾತ್ರೆಗೆ ಯಶಸ್ವಿಯಾಗಿ ಸಡಗರದಿಂದ ಸಂಭ್ರಮದಿಂದ ನಡೆಯುವ ಸಲುವಾಗಿ ನಾಳೆ ಅಂದರೆ ಶನಿವಾರ ದಿನಾಂಕ 18 /12 2021 ರಂದು ಸಂಜೆ 6 ಗಂಟೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ರವರ ಅಧ್ಯಕ್ಷತೆಯಲ್ಲಿ ತೀರ್ಥಹಳ್ಳಿ ಪಟ್ಟಣದ ರಥ ಬೀದಿಯಲ್ಲಿರುವ ಶ್ರೀ ರಾಮ ಮಂದಿರ ಸಭಾಭವನದಲ್ಲಿ ,ತೀರ್ಥಹಳ್ಳಿಶ್ರೀ ರಾಮೇಶ್ವರ ದೇವಸ್ಥಾನದ ಎಳ್ಳಮವಾಸ್ಯೆ ಮತ್ತು ತೆಪ್ಪೋತ್ಸವದ ಬಗ್ಗೆ ಧಾರ್ಮಿಕ/ ಆಧ್ಯಾತ್ಮಿಕ /ಸಾಂಸ್ಕೃತಿಕ/ ಪಾರಂಪರಿಕ/ ಸಾಮಾಜಿಕ/ ಶೈಕ್ಷಣಿಕ/ ಕಾರ್ಯಕ್ರಮಗಳ ಪೂರ್ವಭಾವಿ ಚರ್ಚೆಗಳು ನಡೆಯಲಿದ್ದು.
ಸಾರ್ವಜನಿಕರಿಗೆ , ಚುನಾಯಿತ ಪ್ರತಿನಿಧಿಗಳಿಗೆ,ಆಸಕ್ತರಿಗೆ ಮುಕ್ತ ಆಹ್ವಾನ:
ಈ ಬಗ್ಗೆ ಸಾರ್ವಜನಿಕರ ಸಭೆಯನ್ನು ಕರೆಯಲಾಗಿದೆ .ತಾಲ್ಲೂಕಿನ ಎಲ್ಲಾ ಚುನಾಯಿತ ಪ್ರತಿನಿಧಿಗಳು ,ಆಸಕ್ತ ನಾಗರಿಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ,ಹಾಗೂ ವಿವಿಧ ಸಮಿತಿಗಳ ಸದಸ್ಯರು ಗಳು, ಪದಾಧಿಕಾರಿಗಳು ಸಭೆಗೆ ಹಾಜರಾಗಿ ತಮ್ಮ ಸಲಹೆ ಗಳನ್ನು ನೀಡಿ ನಾಡಹಬ್ಬ ಎಳ್ಳಮವಾಸ್ಯೆ ಮತ್ತು ತೆಪ್ಪೋತ್ಸವ ವಿಜ್ರಂಭಣೆಯಿಂದ ನಡೆಯಲು ಅವಕಾಶ ಮಾಡಿಕೊಡಬೇಕೆಂದು ಸಮಸ್ತ ರಲ್ಲಿ ತೀರ್ಥಹಳ್ಳಿ ತಾಲ್ಲೂಕು ತಹಶೀಲ್ದಾರ್, ಡಾ/ಎಸ್ .ಬಿ. ಶ್ರೀಪಾದ್ ಅವರು ಆತ್ಮೀಯ ಆಮಂತ್ರಣ ನೀಡಿದ್ದಾರೆ.
ಸಭೆ ನಡೆಯುವ ಸ್ಥಳ: ಶ್ರೀ ರಾಮಮಂದಿರ ಸಭಾಭವನ ರಥಬೀದಿ ತೀರ್ಥಹಳ್ಳಿ .
ದಿನಾಂಕ :18–12–2021ರ ಸಂಜೆ 6 ಗಂಟೆಗೆ.
ಸುದ್ದಿ ಮತ್ತು ಜಾಹೀರಾತುಗಳು ನೀಡಲು ಸಂಪರ್ಕಿಸಿ:9449553305…