
ತೀರ್ಥಹಳ್ಳಿ: ತಾಲೂಕಿನ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್ 75 ಮತ್ತು,38 ರಲ್ಲಿ ಗಣಿಗಾರಿಕೆ ಲೀಸ್ ಅವಧಿ ಮುಗಿದಿತ್ತು .
ಟೆಂಡರ್ ಅವಧಿ ಮುಗಿದಿದ್ದರೂ ಕೂಡ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಭ್ರಷ್ಟರು:
ಟೆಂಡರ್ ಅವಧಿ ಮುಗಿದಿದ್ದರೂ ಕೂಡ ಕೆಲವು ಭ್ರಷ್ಟರು ಅಕ್ರಮ ಕಲ್ಲು ಗಣಿಗಾರಿಕೆ ಯನ್ನು ನಡೆಸುತ್ತಿದ್ದರು.
ಅಕ್ರಮ ಕಲ್ಲು ಗಣಿಗಾರಿಕೆ ಯನ್ನು ಬಂದ್ ಮಾಡಿಸಿದ ಅಧಿಕಾರಿಗಳು:
ಗಣಿಗಾರಿಕೆಯ ವಿರುದ್ಧ ಪತ್ರಿಕೆಗಳು ನಿರಂತರವಾಗಿ ವರದಿಯನ್ನು ಪ್ರಕಟಿಸುತ್ತಿದ್ದವು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಅಕ್ರಮ ಕಲ್ಲು ಗಣಿಗಾರಿಕೆ ಯನ್ನು ಬಂದ್ ಮಾಡಿಸಿದ್ದರು.
ಅಧಿಕಾರಿಗಳಿಗೆ ಸೆಡ್ಡುಹೊಡೆದು ರಸ್ತೆ ನಿರ್ಮಿಸಿದ ಭ್ರಷ್ಟರು:
ಅಕ್ರಮ ಕಲ್ಲು ಗಣಿಗಾರಿಕೆಯನ್ನು ತಡೆಯುವ ಸಲುವಾಗಿ ಅಧಿಕಾರಿಗಳು ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದಲ್ಲಿ ಟ್ರೆಂಚ್ ಹೊಡೆದು ನಿಲ್ಲಿಸಿದರು. ಆದರೆ ಅದನ್ನು ಲೆಕ್ಕಿಸದೆ ಈ ಭ್ರಷ್ಟರು ತಮ್ಮದೇ ರಸ್ತೆ ನಿರ್ಮಿಸಿಕೊಂಡು ಕಲ್ಲು ಗಣಿಗಾರಿಕೆಯನ್ನು ನಡೆಸುತ್ತಿದ್ದಾರೆ.
ಇಂದು ದಿಡೀರ್ ದಾಳಿ ನೀಡಿದ ಅಧಿಕಾರಿಗಳು:
ಕಾನೂನು ಬಾಹಿರವಾಗಿ ಅಕ್ರಮ ಕಲ್ಲು ಕ್ವಾರಿ ನಡೆಸುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಇಂದು
ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳ ದೂರಿನನ್ವಯ ತೀರ್ಥಹಳ್ಳಿ ಪೊಲೀಸ್ ಇಲಾಖೆ ಮತ್ತು ತಾಲೂಕಾಡಳಿತ ಕ್ರಮಕ್ಕೆ ಮುಂದಾಗಿದ್ದು ಸರ್ವೆ ನಂಬರ್ 75 ರಲ್ಲಿ ಅಕ್ರಮ ಕಲ್ಲುಕೋರೆಯಲ್ಲಿ ಅವರದೇ ಆದಂತಹ ದಾರಿಯನ್ನು ನಿರ್ಮಿಸಿದ ರಸ್ತೆಯನ್ನು ಮುಚ್ಚಿ ಟ್ರಂಚ್ ತೆಗೆದು ಮುಚ್ಚಿದ್ದಾರೆ.

ಇದು ಶಾಶ್ವತ ಕ್ರಮವಲ್ಲ ಪುನಹ ಇಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಶುರುವಾಗುತ್ತದೆ:
ಇದು ತಾತ್ಕಾಲಿಕ ಕ್ರಮವಾಗಿದ್ದು ಶಾಶ್ವತವಲ್ಲ
ಅಧಿಕಾರಿಗಳ ಕಣ್ಣು ತಪ್ಪಿಸಿ ರಾತ್ರೋರಾತ್ರಿ ಪ್ರತಿದಿನ ಇಲ್ಲಿ ಲಕ್ಷಾಂತರ₹ ಅಕ್ರಮ ಕಲ್ಲು ಸಾಗಾಟವಾಗುತ್ತಿರುವ ಬಗ್ಗೆ ಸ್ಥಳೀಯರು ಆರೋಪಿಸುತ್ತಿದ್ದು.
ಟೆಂಡರ್ ಪ್ರಕ್ರಿಯೆ ಮುಗಿಯುವ ತನಕ ಕಣ್ಗಾವಲಿಗೆ ಅಧಿಕಾರಿಗಳನ್ನು ನೇಮಿಸಿ:
ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆ, ಟೆಂಡರ್ ಪ್ರಕ್ರಿಯೆ ಮುಗಿಯುವ ತನಕ ಲಕ್ಷಾಂತರ₹ ಸರ್ಕಾರದ ಖನಿಜ ಸಂಪನ್ಮೂಲ ಉಳಿಸಿಕೊಳ್ಳುವ ಸಲುವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು,ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಕಣ್ಗಾವಲಿಗೆ ಸಿಬ್ಬಂದಿಯನ್ನು ನೇಮಕ ಮಾಡಿ ಮತ್ತು ಕಲ್ಲು ಕ್ವಾರೆಗೆ ಯಾರೂ ಪ್ರವೇಶಿಸದಂತೆ ಕಾನೂನು ನಿರ್ಬಂಧ ಹೇರಬೇಕು.
ಇಲ್ಲವಾದಲ್ಲಿ ಅಧಿಕಾರಿಗಳ ಕಣ್ಣುತಪ್ಪಿಸಿ ಅಕ್ರಮ ಕಲ್ಲುಗಣಿಗಾರಿಕೆ ಟೆಂಡರ್ ಪ್ರಕ್ರಿಯೆ ಶುರುವಾಗುವ ಮುನ್ನವೇ ಪ್ರತಿ ದಿನ ನಡೆಯುತ್ತದೆ. ಇದನ್ನು ತಪ್ಪಿಸಲು ಟೆಂಡರ್ ಪ್ರಕ್ರಿಯೆ ಮುಗಿಯುವ ತನಕ ಕಣ್ಗಾವಲು ಅಧಿಕಾರಿಗಳನ್ನು ನೇಮಿಸಬೇಕು. ಆ ಮೂಲಕ ಸರ್ಕಾರಕ್ಕೆ ಆಗುತ್ತಿರುವ ಲಕ್ಷಾಂತರ ವಂಚನೆಯ ಹಣವನ್ನು ಉಳಿಸಬೇಕು. ಎನ್ನುವುದು ಸ್ಥಳೀಯರ ಹಾಗೂ ಪತ್ರಿಕೆಯ ಆಗ್ರಹ.

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305..