
ಸಾಗರ: ತಾಲೂಕಿನ ತುಮರಿ ಸಮೀಪ ಇಂದು ಬೆಳಿಗ್ಗೆ 12 ಗಂಟೆ ಸುಮಾರಿಗೆ ಸಂಸ್ಥೆ ಬಳಿ ರಾಷ್ಟ್ರಿಯ ಹೆದ್ದಾರಿಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಎಸ್ ರಂಗಪ್ಪರವರ ಕಾರು ಮತ್ತು ಬೈಕ್ ಗೆ ಢಿಕ್ಕಿ ಹೊಡೆದು ಗಾಯಾಳು ಕಾಲಿಗೆ ತೀವ್ರ ಪೆಟ್ಟು ಬಿದ್ದಿತ್ತು.
ಖುದ್ದು ಹಾಜರಿದ್ದು ಕುಟುಂಬದವರಿಗೆ ಧೈರ್ಯ ತುಂಬಿ ಚಿಕಿತ್ಸಾ ವೆಚ್ಚವನ್ನು ಬರಿಸಿದ ಅಧಿಕಾರಿ:
ಬೈಕ್ ಸವಾರರಿಗೆ ತುಮರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದಾಗ ಖುದ್ದು ಹಾಜರಿದ್ದ ಐ ಎ ಎಸ್ ಅಧಿಕಾರಿ ಕುಟುಂಬದವರಿಗೆ ದೈರ್ಯ ತುಂಬಿದರು.
ಗಾಯಾಳು ಕೇಶವ್ (24 ) ಕೌಟುಂಬಿಕ ಹಿನ್ನೆಲೆಯನ್ನು ವಿಚಾರಿಸಿದ ರಂಗಪ್ಪ ಹೆಚ್ಚಿನ ಚಿಕೆತ್ಸೆಗೆ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಿದರು. ತುಮರಿ 108 ಆಂಬುಲೆನ್ಸ್ ಮೂಲಕ ಗಾಯಾಳು ಕುಂದಾಪುರ ಕಳಿಸಿದ್ದು ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದು ಪೂರ್ಣ ವೆಚ್ಚವನ್ನು ಅಧಿಕಾರಿ ಭರಿಸಿ ಮಾನವೀಯತೆ ಮೆರಿದಿದ್ದಾರೆ.
ಘಟನೆ ನಡೆದಾಗ ಸ್ಥಳಕ್ಕೆ ಆಗಮಿಸಿದ ತುಮರಿಯ ಜನಪರ ಹೋರಾಟಗಾರರ ವೇದಿಕೆ:
ಬೆಳಿಗ್ಗೆ ಘಟನೆ ನಡೆದಾಗ ಸ್ಥಳಕ್ಕೆ ಆಗಮಿಸಿದ ತುಮರಿಯ ಜನಪರ ಹೋರಾಟ ವೇದಿಕೆ ಸದಸ್ಯರಾದ ಜಿ. ಟಿ ಸತ್ಯನಾರಾಯಣ, ಸಂತೋಷ್ ಕುಮಾರ್ ಶೆಟ್ಟಿ, ಅಣ್ಣಪ್ಪ ಆಚಾರ್ಯ ಮುಂತಾದವರು ಗಾಯಾಳು ಆಸ್ಪತ್ರೆಗೆ ಖಾಸಗಿ ವಾಹನದಲ್ಲಿ ಕರೆದೊಯ್ದು ತುಮರಿ ಆಸ್ಪತ್ರೆಗೆ ಧಾಖಲಿಸುವೆ ಕೆಲಸ ಮಾಡಿದ್ದರು. ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೆ ಗಾಯಾಳು ಕುಟುಂಬ ಹಿನ್ನೆಲೆ ಮತ್ತು ಮನೆಯಲ್ಲಿ ದುಡಿಯುವ ಏಕೈಕ ಮಗ ಎಂಬ ವಿಚಾರವನ್ನು ಮನಗಾಣಿಸಿ ಕೊಟ್ಟಿದ್ದರು.
ನಂತರ ಸಿಗಂದೂರು ದೇವಿಯ ದರ್ಶನ ಪಡೆದ ಅಧಿಕಾರಿ:
ಅಫಘಾತ ನಂತರ ಸಿಗಂದೂರು ದೇವಾಲಯ ದರ್ಶನ ಪಡೆದ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ರಂಗಪ್ಪನವರು ಗಾಯಾಳು ಚೇತರಿಕೆ ಕಾಣುವ ತನಕ ಕನಿಷ್ಠ 3 ತಿಂಗಳು ಸಂಬಳ ರೀತಿಯಲ್ಲಿ ಹಣಕಾಸು ನೆರವು ನೀಡುವುದಾಗಿ ತಿಳಿಸಿದರು. ಹತ್ತು ಸಾವಿರ ಹಣವನ್ನು ಸ್ಥಳದಲ್ಲಿಯೇ ಗಾಯಾಳು ಕುಟುಂಬದವರಿಗೆ ನೀಡಿದರು.
ಅಧಿಕಾರಿಯ ಈ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಗ್ರಾಮಸ್ಥರು:
ಹಿರಿಯ ಶ್ರೇಣಿ ಅಧಿಕಾರಿಯ ಈ ಮಾನವೀಯ ನೆಲೆಯ ನಡವಳಿಕೆಗೆ ತುಮರಿ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮತ್ತೆ ಕೈಕೊಟ್ಟ 108 ಆಂಬುಲೆನ್ಸ್ ವಾಹನ:
ಇತ್ತೀಚಿಗಷ್ಟೇ ತುಮರಿ 108 ಅವ್ಯವಸ್ಥೆ ಪ್ರತಿಭಟನೆ ಹಿನ್ನೆಲೆಯಲ್ಲಿ ಬದಲಿ ವಾಹನ ಜಾರಿಯಿದ್ದು 108 ಕರೆ ಮಾಡಿದರೆ ತುಮರಿ ವಾಹನ ಲಭ್ಯವಿಲ್ಲ ಎಂದೇ ಕಂಟ್ರೋಲ್ ರೂಮ್ ನಿಂದ ಉತ್ತರ ಬರುತ್ತಾ ಇದೆ.
ದ್ವೀಪದ ನಾಗರಿಕರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗುತ್ತ ಇದೆ. ಇಂದು ಕೂಡ ಅಪಘಾತ ನಡೆದು 108 ಕರೆ ಮಾಡಿದರೂ ವಾಹನ ಲಭ್ಯವಿಲ್ಲ ಎನ್ನುವ ಉತ್ತರ ಬಂದಿದೆ.
ಈ ಕಾರಣ ಜನಪರ ಹೋರಾಟ ವೇದಿಕೆ ಸದಸ್ಯರು ಗಾಯಾಳು ವನ್ನು ಆಸ್ಪತ್ರೆಗೆ ತರಲು ತರಲು ಖಾಸಗಿ ವಾಹನ ಬಲಸಬೇಕಾಯಿತು. ತುಮರಿಯ 108 ವಾಹನವು ಚಂದ್ರಗುತ್ತಿಯಲ್ಲಿ ನೋಂದಣಿ ಆಗಿರುವ ವಾಹನ ಆಗಿದ್ದು ಜಿಲ್ಲೆಯಲಿ ತುಮರಿಗೆ ತುರ್ತಾಗಿ ವಾಹನ ಬದಲಾವಣೆ ಮಾಡಿರುವುದು ಕಂಟ್ರೋಲ್ ರೂಮ್ ಗಮನಕ್ಕೆ ಬಾರದೆ ಇರುವ ತಾಂತ್ರಿಕ ಕಾರಣದಿಂದ 108 ಜನರಿಗೆ ಇದ್ದು ಇಲ್ಲದಂತೆ ಆಗಿದೆ.
ಕೂಡಲೇ ಸಂಬಂಧಪಟ್ಟ ಆರೋಗ್ಯ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು ಎನ್ನುವುದು ಸ್ಥಳೀಯರ ಹಾಗೂ ಜನಪರ ಹೋರಾಟಗಾರರ ವೇದಿಕೆಯ ಆಗ್ರಹ.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…