ರಾಜ್ಯ ಸರ್ಕಾರಿ ನೌಕರರ ಸಂಘ ತೀರ್ಥಹಳ್ಳಿ ತಾಲ್ಲೂಕು ಶಾಖೆಯ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಗೃಹ ಸಚಿವರಿಗೆ ಮನವಿ ಸಲ್ಲಿಕೆ..!

ತೀರ್ಥಹಳ್ಳಿ: ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರ ಮಾದರಿ ವೇತನ ಭತ್ಯೆ ನೀಡುವಂತೆ,ನೌಕರರ ಹಿತಕ್ಕೆ ಮಾರಕವಾಗಿರುವ ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಹಾಗೂ ಸರ್ಕಾರಿ ನೌಕರರ ಇತರೆ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಂತೆ ಕೋರಿ ಗೃಹ ಸಚಿವ ಆರಗ ಜ್ಞಾನೇಂದ್ರರವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘ ತೀರ್ಥಹಳ್ಳಿ ತಾಲ್ಲೂಕು ಶಾಖೆಯ ವತಿಯಿಂದ ಮನವಿ ಸಲ್ಲಿಸಲಾಯಿತು.
ಸಕಾರಾತ್ಮಕವಾಗಿ ಸ್ಪಂದಿಸಿದ ಗೃಹಸಚಿವರು:
ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಬೇಡಿಕೆಗಳನ್ನು ಈಡೇರಿಸುವ ದಿಸೆಯಲ್ಲಿ ಪ್ರಯತ್ನಿಸಲಾಗುವುದು ಎಂದರು.
ಸಂಘದ ಅಧ್ಯಕ್ಷ ಟಿ ವಿ ಸತೀಶ,ಕಾರ್ಯದರ್ಶಿ ರಾಮು ಬಿ,ಖಜಾಂಚಿ ಹೆಚ್ ಸಿ ಪವಿತ್ರ, ಉಪಾಧ್ಯಕ್ಷರಾದ ರಾಘವೇಂದ್ರ ಎಸ್,ಸುಷ್ಮಾ ಎಸ್ ಪಿ, ಜಂಟಿ ಕಾರ್ಯದರ್ಶಿಗಳಾದ ಎ ಎಂ ಜಗದೀಶ,ಸತೀಶ್ ಟಿ ಆರ್, ಕೌಶಿಕ್, ಎಲ್ಲಪ್ಪ ವಡ್ಡರ್,ಸಂಘಟನಾ ಕಾರ್ಯದರ್ಶಿಗಳಾದ ಸುಧೀರ್ ,ರಮೇಶ್, ನತಾಲಬಾಯಿ ಮಂಜುನಾಥ್ ಕೆ ಆರ್, ನಾಗೇಶ್, ಗಣೇಶ್ ಮೂರ್ತಿ, ಕ್ರೀಡಾ ಕಾರ್ಯದರ್ಶಿ ಜಯಪ್ರಕಾಶ್, ಸಾಂಸ್ಕ್ರತಿಕ ಕಾರ್ಯದರ್ಶಿ ದೇವೇಂದ್ರಪ್ಪ, ಆರೋಗ್ಯ ಇಲಾಖಾ ನೌಕರರ ಸಂಘದ ಉಪಾಧ್ಯಕ್ಷೆ ತಿಲಕಮ್ಮ, ಪದಾಧಿಕಾರಿಗಳಾದ ಶಿವಶಂಕರ್, ಗೀತ, ತನುಜ,ಪ್ರಮೀಳ, ಶ್ವೇತ, ವಿಜಯಲಕ್ಷ್ಮಿ, ತಾಲ್ಲೂಕು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ, ಖಜಾಂಚಿ ಉಷಾ, ಪದಾಧಿಕಾರಿಗಳಾದ ಗುರುಪ್ರಸಾದ್, ಕುಸುಮ, ಶ್ರೀನಿವಾಸ್, ರೂಪ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷ ಉಮೇಶ್, ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಎಂ ಸಿ ಮಂಜುನಾಥ್,ತಾಲ್ಲೂಕು ಕಾರ್ಯದರ್ಶಿ ಲಕ್ಷ್ಮಣ್, ಪುಟ್ಟಪ್ಪ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಗೋಪಾಲಕೃಷ್ಣ, ವೀರೇಶ್, ಶ್ರೀಧರ್ ಸೇರಿದಂತೆ ವಿವಿಧ ವೃಂದ ಸಂಘಗಳ ಪದಾಧಿಕಾರಿಗಳು,ಸದಸ್ಯರು ಹಾಗೂ ಹೊಸನಗರ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು,ಸದಸ್ಯರು ಇದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ: 9449553305…