
ತೀರ್ಥಹಳ್ಳಿ: ತಾಲೂಕಿನ ಮೇಗರವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಥಳೀಯವಾಗಿ ಲಭ್ಯವಾಗುವ ಮರಳು ವಸತಿ ಫಲಾನುಭವಿಗಳಿಗೆ ಇಲ್ಲ ಆದರೆ ಕೈಮರದ ಕಂಟ್ರಾಕ್ಟರ್ ಸುಧಾಕರ್ ಎಂಬುವವರು ಈ ದಿನ ಜೆಸಿಬಿ ಬಳಸಿ ಹತ್ತರಿಂದ ಹದಿನೈದು ಟ್ರ್ಯಾಕ್ಟರ್ ಮರಳು ಹೊಡೆದದ್ದಾದರೂ ಹೇಗೆ…..? ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತಿಯ ಸದಸ್ಯರಾದ ಅಜಿತ್ ಅಣ್ಣುವಳ್ಳಿ. ಜೀನತ್ ಬಾನು ಹಾಗೂ ಲಕ್ಷ್ಮಿ ನರಸಿಂಹ ಆಕ್ಷೇಪ ವ್ಯಕ್ತಪಡಿಸಿ ವಸತಿ ಫಲಾನುಭವಿಗಳಿಗೆ ಇರುವ ಮರಳನ್ನು ಖಾಸಗಿ ಕಂಟ್ರಾಕ್ಟರ್ ಗೆ ನೀಡಿದ್ದನ್ನು ಖಂಡಿಸಿ ಮರಳು ಹೊಡೆಯುವುದನ್ನು ನಿಲ್ಲಿಸಿದ ಘಟನೆ ಜರುಗಿದೆ .
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಿ:
ವಸಂತಿ ಫಲಾನುಭವಿಗಳಿಗೆ ಮನೆ ಕಟ್ಟಿಕೊಳ್ಳಲು ಅನುಕೂಲವಾಗುವ ದೃಷ್ಟಿಯಿಂದ ಸ್ಥಳೀಯರಿಗೆ ಲಭ್ಯವಾಗುವ ಮರಳನ್ನು ಅಗತ್ಯಕ್ಕೆ ಅನುಗುಣವಾಗಿ ಸ್ಥಳೀಯರಿಗೆ ನೀಡಬೇಕು. ಅದು ಬಿಟ್ಟು ಗುತ್ತಿಗೆದಾರರಿಗೆ ಗುತ್ತಿಗೆ ನೀಡುತ್ತಾರೆಯೇ ವಿನಹ ಮರಳು ನೀಡುತ್ತೇವೆ ಎಂದು ಎಲ್ಲೂ ಹೇಳಿರುವುದಿಲ್ಲ. ಹಾಗಾಗಿ ಆ ಜವಾಬ್ದಾರಿ ಗುತ್ತಿಗೆದಾರರದ್ದು ಇದನ್ನು ಗ್ರಾಮ ಪಂಚಾಯತಿಯವರು ತಿಳಿದುಕೊಂಡರೆ ಒಳ್ಳೆಯದು.
ಹಾಗೆ ಮುಂದೆ ಹೀಗಾಗದಂತೆ ಎಚ್ಚರ ವಹಿಸಿ ಸ್ಥಳೀಯರಿಗೆ ಮರಳು ಸಿಗುವಂತೆ ಮಾಡಬೇಕು.ಎನ್ನುವುದು ಊರಿನ ಗ್ರಾಮಸ್ಥರ ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯ..
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305