ಶಿವಮೊಗ್ಗ: ನಕಲಿ ಪರವಾನಿಗೆಯನ್ನು ಸೃಷ್ಟಿಸಿಕೊಂಡು ವೈದ್ಯ ವೃತ್ತಿ ಮಾಡುತ್ತಿದ್ದ ಆರೋಪಿ ಹಕೀಂ ಅಲಿಯಾಸ್ ಡಾ.ಅಮೀರ್ ಜಾನ್‍ಗೆ 2ನೇ ಜೆಎಂಎಫ್‍ಸಿ ನ್ಯಾಯಾಲಯ ಒಟ್ಟು 03 ವರ್ಷ ಕಾರಾಗೃಹವಾಸ ಸಜೆ ಮತ್ತು ರೂ.15 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಶಿವಮೊಗ್ಗ ನಗರದ ವಸತಿಗೃಹವೊಂದರಲ್ಲಿ ಬೋರ್ಡ್ ಹಾಕಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ ವೈದ್ಯನೆಂದು ಹೇಳಿಕೊಂಡು ಕಲಂ ನಂ-12 ರಲ್ಲಿ ವೈದ್ಯ ವೃತ್ತಿ ನಡೆಸುತ್ತಿದ್ದು, ಸಾಕ್ಷಿಗಳೊಂದಿಗೆ ದಾಳಿ ನಡೆಸಿ ನಕಲಿ ವೈದ್ಯ ವೃತ್ತಿಗೆ ಬಳಸಿದ ಔಷಧಿಗಳು, ಬೋರ್ಡ್, ಇತರೆ ವಸ್ತುಗಳನ್ನು ವಶಪಡಿಸಿಕೊಂಡು ಭಾರತ ದಂಡ ಸಂಹಿತೆಯ ಕಲಂ 465, 420 ರೀತ್ಯಾ ಆರೋಪವೆಸಗಿದ್ದಾನೆ ಎಂದು ದೊಡ್ಡಪೇಟೆ ಪೊಲೀಸರು ಪ್ರಕರಣ ದಾಖಲಿಸಿ, ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವೈದ್ಯನಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ:
ಪ್ರಕರಣವನ್ನು ಶಿವಮೊಗ್ಗ ಮಾನ್ಯ 2ನೇ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಆರೋಪಿಗೆ ನ್ಯಾಯಾಧೀಶರಾದ ಎಸ್.ಆರ್.ಸನ್ಮತಿ ಇವರು ಐಪಿಸಿ ಕಲಂ 465 ಅಪರಾಧಕ್ಕೆ 1 ವರ್ಷ ಕಾರಾಗೃಹವಾಸ ಸಜೆ ಮತ್ತು ರೂ. 5 ಸಾವಿರ ದಂಡ ಹಾಗೂ ಕಲಂ 420 ಅಪರಾಧಕ್ಕೆ 02 ವರ್ಷಗಳ ಕಾರಾಗೃಹ ವಾಸ ಸಜೆ ಮತ್ತು ರೂ.10 ಸಾವಿರ ದಂಡ ವಿಧಿಸಿ ಜ.25 ರಂದು ತೀರ್ಪು ನೀಡಿರುತ್ತಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಜಿ.ಕೆ.ಕಿರಣ್‍ಕುಮಾರ್ ಪ್ರಕರಣದ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು. (ಮಾಹಿತಿ ಕರ್ನಾಟಕ ವಾರ್ತೆ)
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305