Wednesday, April 30, 2025
Google search engine
Homeರಾಷ್ಟ್ರೀಯಅಮೆಜಾನ್ ಕಂಪನಿಯಿಂದ ರಾಷ್ಟ್ರಕ್ಕೆ ಅವಮಾನ..! ಕ್ರಮ ತೆಗೆದುಕೊಳ್ಳುತ್ತಾ ಭಾರತ ಸರ್ಕಾರ ?

ಅಮೆಜಾನ್ ಕಂಪನಿಯಿಂದ ರಾಷ್ಟ್ರಕ್ಕೆ ಅವಮಾನ..! ಕ್ರಮ ತೆಗೆದುಕೊಳ್ಳುತ್ತಾ ಭಾರತ ಸರ್ಕಾರ ?

ಅಮೆಜಾನ್’ ಮೇಲೆ ತಕ್ಷಣ ಕ್ರಮ ಕೈಗೊಳ್ಳಿ ! – ಸುರಾಜ್ಯ ಅಭಿಯಾನ

ಭಾರತದ ರಾಷ್ಟ್ರಧ್ವಜ ಮತ್ತು ಭಾರತದ ನಕಾಶೆ ಅಂದರೆ ನಕ್ಷೆಯು ಕೋಟಿಗಟ್ಟಲೆ ಭಾರತೀಯರ ರಾಷ್ಟ್ರೀಯ ಭಾವೈಕ್ಯದ ವಿಷಯವಾಗಿದೆ. ರಾಷ್ಟ್ರಧ್ವಜದ ಬಳಕೆಗೆ ಸಂಬಂಧಿಸಿದ ನಿಯಮಗಳನ್ನು ‘ಧ್ವಜ ಸಂಹಿತೆ’ಯಲ್ಲಿ ನೀಡಲಾಗಿದೆ. ಅದನ್ನು ಉಲ್ಲಂಘಿಸುವುದು ಅಪರಾಧವಾಗಿದೆ. ಅದೇ ರೀತಿ ಭಾರತದ ಭೂಪಟವನ್ನು ವಿರೂಪಗೊಳಿಸುವುದು ಕೂಡ ಅಪರಾಧವಾಗಿದೆ. ಆದಾಗ್ಯೂ ‘ಅಮೆಜಾನ್’ ಸಂಸ್ಥೆ ಧ್ವಜಸಂಹಿತೆಯನ್ನು ಉಲ್ಲಂಘಿಸಿ ಭಾರತದ ರಾಷ್ಟ್ರಧ್ವಜದ ಚಿತ್ರವಿರುವ ಟೀ-ಶರ್ಟ್‌ಗಳು, ಬೂಟುಗಳು ಇತ್ಯಾದಿ ಉತ್ಪನ್ನಗಳನ್ನು ಹಾಗೆಯೇ ವಿರೂಪಗೊಳಿಸಿದ ಭಾರತದ ನಕ್ಷೆಯ ವಿನೈಲ್ ಸ್ಟಿಕ್ಕರ್‌ಗಳನ್ನು ಜಾಲತಾಣಗಳ ಮೂಲಕ ಮಾರಾಟ ಮಾಡುತ್ತಿದೆ. ಈ ಹಿಂದೆ ‘ಅಮೆಜಾನ್’ಗೆ ಹಲವು ಬಾರಿ ತಿಳಿಸಿದ್ದರೂ ಸಂಸ್ಥೆಯು ಯಾವುದೇ ಬದಲಾವಣೆ ಮಾಡದೆ ಮಾರಾಟವನ್ನು ಮುಂದುವರೆಸಿದೆ. ಭಾರತದ ರಾಷ್ಟ್ರೀಯ ಚಿಹ್ನೆಗಳಿಗೆ ‘ಅಮೆಜಾನ್’ ನಿರಂತರವಾಗಿ ಮಾಡುತ್ತಿರುವ ಅವಮಾನಗಳನ್ನು ಈಗ ನಿಲ್ಲಿಸಬೇಕು. ಎಲ್ಲಿಯವರೆಗೆ ‘ಅಮೆಜಾನ್’ ಭಾರತ ಸರಕಾರ ಮತ್ತು ಭಾರತೀಯರಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸುವುದಿಲ್ಲವೋ, ಅಲ್ಲಿಯವರೆಗೆ ಭಾರತ ಸರಕಾರವು ‘ಅಮೆಜಾನ್’ ಸಂಸ್ಥೆಯನ್ನು ಬಹಿಷ್ಕರಿಸಬೇಕು, ಭಾರತ ಸರಕಾರವು ‘ಅಮೆಜಾನ್’ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು, ಎಂದು ಕರೆ ನೀಡುತ್ತಾ ಹಿಂದೂ ಜನಜಾಗೃತಿ ಸಮಿತಿಯ ‘ಸುರಾಜ್ಯ ಅಭಿಯಾನ’ದ ಪರವಾಗಿ ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಇವರಲ್ಲಿ ಬೇಡಿಕೆ ಸಲ್ಲಿಸಲಾಯಿತು. ಈ ಬಗ್ಗೆ ಇತ್ತೀಚೆಗೆ ಒಂದು ಮನವಿಯನ್ನು ಗೃಹ ಸಚಿವರಿಗೆ ಕಳುಹಿಸಲಾಗಿದೆ.

ಈ ಮನವಿಯಲ್ಲಿ, ಅಮೆಜಾನ್ ಭಾರತದ ನಕ್ಷೆಯಿಂದ ಪಾಕಿಸ್ತಾನ ಆಕ್ರಮಿತ ಮತ್ತು ಚೀನಾ ಆಕ್ರಮಿತ ಕಾಶ್ಮೀರದ ಭೂಭಾಗವನ್ನು ಬೇರ್ಪಡಿಸಿ ಭಾರತದ ನಕ್ಷೆ ಇರುವ ವಿನೈಲ್ ಸ್ಟಿಕ್ಕರ್‌ಗಳನ್ನು, ಅದೇ ರೀತಿ ಅಶೋಕಚಕ್ರದ ತ್ರಿವರ್ಣ ಧ್ವಜವನ್ನು ಮುದ್ರಿಸಲಾದ ಟೀ ಶರ್ಟ್‌ಗಳು ಮತ್ತು ಬೂಟುಗಳನ್ನು ಮಾರಾಟ ಮಾಡಿರುವುದು ಇದೇ ಮೊದಲ ಘಟನೆಯಾಗಿರದೇ ಇದಕ್ಕೂ ಮುನ್ನ ಅಮೆಜಾನ್ ರಾಷ್ಟ್ರಧ್ವಜದಂತೆಯೇ ‘ತ್ರಿವರ್ಣ ಮಾಸ್ಕ್’, ‘ತ್ರಿವರ್ಣ ಟೋಪಿ’ಯಂತಹ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ರಾಷ್ಟ್ರಧ್ವಜದ ಅವಹೇಳನ ಮಾಡಿದೆ. ಕೆಲವು ದಿನಗಳ ಹಿಂದೆ ‘ಅಮೆಜಾನ್’ನಲ್ಲಿ ಗಾಂಜಾ ಮಾರಾಟವಾಗುತ್ತಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಸಮಿತಿಯು ‘ಸುರಾಜ್ಯ ಅಭಿಯಾನ’ದ ವತಿಯಿಂದ ಕೇಂದ್ರ ಸರಕಾರಕ್ಕೆ ದೂರು ಸಲ್ಲಿಸಿತ್ತು.

‘ರಾಷ್ಟ್ರೀಯ ಲಾಂಛನಗಳ ದುರುಪಯೋಗ ತಡೆಗಟ್ಟುವಿಕೆ ಕಾಯಿದೆ, 1950 ರ ಕಲಂ 2 ಮತ್ತು 5 ರ ಅಡಿಯಲ್ಲಿ; ‘ರಾಷ್ಟ್ರ ಪ್ರತಿಷ್ಠಾ ಪ್ರತಿಬಂಧಕ ಅಧಿನಿಯಮ 1971’ ಕಲಂ 2 ರ ಅಡಿಯಲ್ಲಿ ಹಾಗೂ ‘ಬೋಧಚಿಹ್ನೆ ಮತ್ತು ಹೆಸರು (ಅನುಚಿತ ಉಪಯೋಗ ಪ್ರತಿಬಂಧ)ಕಾಯಿದೆ 1950’ ಈ ಮೂರೂ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧಗಳಾಗಿವೆ. ಆದ್ದರಿಂದ ಅಮೆಜಾನ್ ವಿರುದ್ಧ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು, ನಾವು ಒತ್ತಾಯಿಸುತ್ತೇವೆ. ಸರಕಾರವು ಅದಕ್ಕನುಸಾರ ಕ್ರಮ ಕೈಗೊಳ್ಳದೇ ಇದ್ದರೆ, ‘ಭಾರತೀಯ ಕಾನೂನುಗಳು ನಿಷ್ಪ್ರಯೋಜಕ’, ಎಂಬ ಚಿತ್ರಣ ನಿರ್ಮಾಣವಾಗಲಿದೆ ಹಾಗೂ ರಾಷ್ಟ್ರಧ್ವಜ ಮತ್ತು ನಕ್ಷೆಯ ಅಪಮಾನ ಯಾರು ಬೇಕಾದರೂ ಮಾಡಲು ಮುಂದಡಿಯಿಡಬಹುದು ! ಇದನ್ನು ತಡೆಯುವ ನಿಟ್ಟಿನಲ್ಲಿ ಭಾರತ ಸರಕಾರ ಈ ಗಂಭೀರ ವಿಷಯದ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ‘ಸುರಾಜ್ಯ ಅಭಿಯಾನ’ದ ವತಿಯಿಂದ ಮನವಿ ಸಲ್ಲಿಸಲಾಗಿದೆ.


ನ್ಯಾಯವಾದಿ ನೀಲೇಶ ಸಾಂಗೋಲ್ಕರ,
ಸಮನ್ವಯಕರು, ಸುರಾಜ್ಯ ಅಭಿಯಾನ,
(ಸಂಪರ್ಕ ಸಂಖ್ಯೆ : 95959 84844)
..

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...